ಸ್ಕೋಲಿಯೋಸಿಸ್‍ಗೆ ಎ.ಜೆ. ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ

Spread the love

10ರಿಂದ 16 ವರ್ಷದೊಳಗಿನ ಬೆಳೆಯುತ್ತಿರುವ ಶೇಕಾಡ 2ರಿಂದ 4% ರಷ್ಟು ಮಕ್ಕಳಲ್ಲಿ ಸ್ಕೋಲಿಯೋಸಿಸ್ ತೊಂದರೆ ಸಾಮಾನ್ಯವಾಗಿಕಂಡುಬರುತ್ತದೆ. ಇದುಒಂದು ಬಹು ಜೀನ್ ಸ್ಥಿತಿಯಾಗಿದ್ದು, ಅನೇಕ ಪ್ರಕಟ ಲಕ್ಷಣಗಳನ್ನು ಹೊಂದಿರುತ್ತದೆ. ಬೆನ್ನು ಮೂಳೆಯು 10ಡಿಗ್ರಿ ಪಾಶ್ರ್ವ ವಕ್ರತೆ ಹೊಂದಿರುವುದನ್ನು ಸ್ಕೋಲಿಯೋಸಿಸ್ ಎಂದು ವ್ಯಾಖ್ಯಾನಿಸಬಹುದು. ತೀವ್ರವಾದ ಬೆನ್ನು ನೋವು, ಕಾಲು ನೋವು, ಎಡಎದೆಗೂಡಿನತಿರುವು ಮತ್ತುಅಸಹಜ ನರವೈಜ್ಞಾನಿಕ ತೊಂದರೆಗಳು ಈ ರೋಗದ ಮುಖ್ಯ ಲಕ್ಷಣಗಳು. ದೊಡ್ಡ ಪ್ರಮಾಣದ ಅಸ್ಥಿಪಂಜರದ ತಿರುವು (ವಕ್ರತೆ) ಹೊಂದಿರುವುದು ಮತ್ತು ಸ್ತ್ರಿ ಲಿಂಗದವರಾಗಿರುವುದು ಈ ವಕ್ರತಿಯ ಪ್ರಗತಿಗೆಕಾರಣವಾಗುವ ಮುಖ್ಯಅಪಾಯಕಾರಿ ಅಂಶಗಳು. ಹುಡುಗಿಯರಲ್ಲಿ ಸ್ಕೋಲಿಯೋಸಿಸ್ ಸಮಸ್ಯೆ ಸಾಮಾನ್ಯವಾಗಿ ಹುಡುಗರಿಗಿಂತ ಬೇಗ ಪ್ರಗತಿ ಹೊಂದುವುದರಿಂದಅವರಿಗೆಚಿಕಿತ್ಸೆಯಅಗತ್ಯ ಹೆಚ್ಚಿರುತ್ತದೆ.

ಉತ್ತರಕನ್ನಡಜಿಲ್ಲೆಯ 13 ವರ್ಷ ಪ್ರಾಯದ ಗಂಗಮ್ಮಳದು ಸಾಮಾನ್ಯಜೀವನ. ಈಕೆಯ ಬೆನ್ನು ಕೊಂಚ ಬಾಗಿರುವುದುತಾಯಿಯ ಗಮನಕ್ಕೆ ಬಂತು ಮತ್ತು ಮುಂದಿನ ಒಂಬತ್ತು ತಿಂಗಳಲ್ಲಿ ಸ್ವೀಕಾರಾರ್ಹವಲ್ಲದ (ತೀವ್ರವಾದ) ವಿರೂಪತೆಯನ್ನು ಪಡೆಯಿತು. ಈ ತೊಂದರೆಯಿಂದಾಗಿಆಕೆಯಒಂದು ಭುಜವುಇನ್ನೊಂದಕ್ಕಿಂತಎತ್ತರವಾಗಿಯೂ ಮತ್ತುಆಕೆಯಎದೆಯುಅಸಮಾನುಪಾತ ಸ್ಥಿತಿಯಲ್ಲಿತ್ತು. ಅವರು ಮಂಗಳೂರಿನ ಎ.ಜೆ. ಆಸ್ಪತ್ರೆಮತ್ತು ಸಂಶೋಧನಾಕೇಂದ್ರದ ಮೂಳೆ ಶಸ್ತ್ರಚಿಕಿತ್ಸಾತಜ್ಞರಾದಡಾ. ಧೀರಾಜ್‍ಕುಮಾರ್‍ರನ್ನು ಸಂದರ್ಶಿಸಿದರು. ಇವರು ಗಂಗಮ್ಮಳನ್ನು ಕೂಲಂಕುಶವಾಗಿ ಪರೀಕ್ಷಿಸಿ ಆಕೆಗೆ ಅಡಾಲಸೆಂಟ್‍ಇಡಿಯೋಪಥಿಕ್ ಸ್ಕೋಲಿಯೋಸಿಸ್ ತೊಂದರೆಯಿದ್ದುಅದುಅತ್ಯಂತ ವೇಗವಾಗಿ ವೃದ್ಧಿಸುತ್ತಿರುವುದನ್ನು ಪತ್ತೆಹಚ್ಚಿ ಶಸ್ತ್ರಚಿಕಿತ್ಸೆಅಗತ್ಯವಿದೆಯೆಂದು ತಿಳಿಸಿದರು. ಡಾ. ಧೀರಜ್‍ಕುಮಾರ್‍ರವರ ನೇತೃತ್ವದಲ್ಲಿಡಾ. ಸುದರ್ಶನ್ ಭಂಡಾರಿ, ಡಾ. ಭಾಸ್ಕರ್ ಭಂಡಾರಿ, ಡಾ. ಮಿಥುನ್ ಶೆಟ್ಟಿಯವರನ್ನು ಒಳಗೊಂಡ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾಕೇಂದ್ರದ ವೈದ್ಯರತಂಡವು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನು ನಡೆಸಿತು. ವೈದ್ಯರ ಕೈಚಳಕದಿಂದಾಗಿ ಆಕೆಯು ಶಸ್ತ್ರಚಿಕಿತ್ಸೆ ನಡೆಸಿದ ನಂತರದ ಕೇವಲ 5 ದಿನದಲ್ಲೇತನ್ನ ದಿನನಿತ್ಯದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದಳು. 10 ನೇ ದಿನದಂದುಆಸ್ಪತ್ರೆಯಿಂದ ಮನೆಗೆ ತೆರಳಿ ತನ್ನದೈನಂದಿನ ಕೆಲಸ ಕಾರ್ಯಗಳೊಂದಿಗೆ ಶಾಲೆ ಮತ್ತು ಆಟೋಟಗಳಲ್ಲೂ ಭಾಗವಹಿಸುತ್ತಿದ್ದಾಳೆ.


Spread the love