ಸ್ಟೋಟಕವಿಟ್ಟು ದನದ ಸಾವು ಆರೋಪಿಗಳ ಬಂಧನ

Spread the love

ಸ್ಟೋಟಕವಿಟ್ಟು ದನದ ಸಾವು ಆರೋಪಿಗಳ ಬಂಧನ

ಮಂಗಳೂರು: ಗುಡ್ಡಪ್ರದೇಶದಲ್ಲಿ ಪ್ರಾಣಿಗಳ ಬೇಟೆಗೆಂದು ಸ್ಪೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಆರೋಪಿಗಳನ್ನು ವಿಟ್ಲ ಪೋಲಿಸರು ಸೋಮವಾರ ಬಂಧಿಸಿದ್ದಾರೆ.

ಬಂಧಿತರನ್ನು ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿಗಳಾದ ಶೀನಪ್ಪ ನಾಯ್ಕ (48) ಮತ್ತು ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ (30), ವಿಜಯ್ ಜಾನ್, ಗೋವಿಂದ್ ನಾಯ್ಕ್ ಎಂದು ಗುರುತಿಸಲಾಗಿದೆ.

ಬಂದಿತರು ಕಾಡು ಹಂದಿ ಸೇರಿ ಇತರ ಪ್ರಾಣಿಗಳನ್ನು ಮಾಂಸದ ಉದ್ದೇಶದಿಂದ ಹತ್ಯೆಗೈಯಲು ಸ್ಪೋಟಕಗಳನ್ನು ಬಳಸುತ್ತಿದ್ದು ರಾತ್ರಿಯಾಗುತ್ತಿದ್ದಂತೆ ಗುಡ್ಡಗಳಲ್ಲಿ ಸ್ಟೋಟಕವಿಟ್ಟು ಬೆಳಗ್ಗಿ ತೆಗೆದು ಬಿಡುತ್ತಿದ್ದರೆನ್ನಲಾಗಿದೆ.

1-vittal-police-cow-killed-arrest-20161023-001

ಹಸುವಿನ ಮಾಲಕರು ನೀಡಿದ ದೂರಿನಂತೆ ಆರೋಪಿಗಳನ್ನು ಹುಡುಕಿ ಬಂಧಿಸಿ ವಿಚಾರಣೆ ನಡೆಸಿದಾಗಿ ಆರೋಪಿಗಳು ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.

ಜಿಲ್ಲಾ ಎಸ್ಪಿ ಭೂಷಣ್ ಜಿ ಭೋರಸೆ, ಬಂಟ್ವಾಳ ಡಿವೈಎಸ್ಪಿ ರವೀಶ್ ಸಿ ಆರ್, ಮಾರ್ಗದರ್ಶನದಲ್ಲಿ ವಿಟ್ಲ ಸಿಪಿಐ ಕೊರಗಪ್ಪ ನಾಯ್ಕ, ಆನಂದ, ಜಯಕುಮಾರ್, ಬಾಲಕೃಷ್ಣ, ಪ್ರವೀಣ್ ರೈ, ರಮೇಶ್ ಇವರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Spread the love