ಸ್ವಾಮಿ ಅಗ್ನಿವೇಶ್‍ರ ಮೇಲೆ ಹಲ್ಲೆ: ವೆಲ್ಫೇರ್ ಪಾರ್ಟಿ ರಾಜ್ಯ ಘಟಕದಿಂದ ಖಂಡನೆ

Spread the love

ಸ್ವಾಮಿ ಅಗ್ನಿವೇಶ್‍ರ ಮೇಲೆ ಹಲ್ಲೆ: ವೆಲ್ಫೇರ್ ಪಾರ್ಟಿ ರಾಜ್ಯ ಘಟಕದಿಂದ ಖಂಡನೆ

ಮಂಗಳೂರು: ಜಾರ್ಖಂಡ್‍ನಲ್ಲಿ ಬಿಜೆಪಿ ಕಾರ್ಯಕರ್ತರು ಶ್ರೀ| ಸ್ವಾಮಿ ಅಗ್ನಿವೇಶ್‍ರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದನ್ನು, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲಿಯಾನ್ ಹಾಗೂ ದ.ಕ. ರಾಜ್ಯ ಪ್ರಧಾನ ಕಾರ್ಯದರ್ಶಿ ತಾಹೆರ್ ಹುಸೈನ್ ತೀವ್ರವಾಗಿ ಖಂಡಿಸಿದ್ದಾರೆ. “ಎದುರಾಳಿಗಳನ್ನು ವೈಚಾರಿಕವಾಗಿ ಸೋಲಿಸಲು ಸಾಧ್ಯವಿಲ್ಲದವರು ಮಾತ್ರ ಈ ರೀತಿ ಹಿಂಸೆಯ ಮಾರ್ಗವನ್ನು ಕೈಗೊಳ್ಳುತ್ತಾರೆ. ಬಿಜೆಪಿ ಮತ್ತು ಆರೆಸ್ಸೆಸ್ ತನ್ನ ಚೇಲಾಗಳನ್ನು ಹಿಂಸಾತ್ಮಕ ಕಾರ್ಯವನ್ನೆಸಗಲು ತಯಾರುಗೊಳಿಸಿ ದೇಶದ ಉದ್ದಗಲಕ್ಕೂ ವ್ಯಾಪಿಸಿದ್ದಾರೆ. ಜಾತಿ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸುವ, ಮನು ಸಿದ್ಧಾಂತವನ್ನು ಅನುಸರಿಸುತ್ತಿರುವ ಆರೆಸ್ಸೆಸ್ ಮತ್ತು ಬಿಜೆಪಿ, ತನ್ನ ಆಶಯಕ್ಕೆ ವಿರುದ್ಧವಾಗಿರುವವರನ್ನು ವೈಚಾರಿಕವಾಗಿ ಸೋಲಿಸಲಾಗದೆ, ಹಿಂಸೆಯ ಮೂಲಕ ಅವರನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಲೇ ಬಂದಿದೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರವು ಅಧಿಕಾರಕ್ಕೆ ಬಂದ ಮೇಲೆ, ಗೌರಿ ಲಂಕೇಶ್‍ರ ಹತ್ಯೆಯು ಸೇರಿ, ಈ ರೀತಿ ವಿಚಾರವಾದಿಗಳ ಕೊಲೆ ಮತ್ತು ಹಲ್ಲೆಗಳು ತೀವ್ರವಾಗಿದ್ದು, ಜನತೆ ಈ ಮನುವಾದದ ಅನುಯಾಯಿಗಳಾದ ಆರೆಸ್ಸೆಸ್ ಮತ್ತು ಬಿಜೆಪಿಗರ ಬಗ್ಗೆ ಬಹಳ ಜಾಗರೂಕತೆ ವಹಿಸುವುದು ಕಾಲದ ಬೇಡಿಕೆಯಾಗಿದೆ. ಹಿಂದೂ ಧರ್ಮದ ನೈಜತೆಯನ್ನು ಅನುಸರಿಸುತ್ತಿರುವ ಪ್ರತಿಪಾದಿಸುತ್ತಿರುವ ಸ್ವಾಮೀಜಿಯವರಾದ ಶ್ರೀ| ಸ್ವಾಮಿ ಅಗ್ನಿವೇಶ್‍ರ ಮೇಲೆ ನಡೆದ ಈ ಹಲ್ಲೆಯು ಆರೆಸ್ಸೆಸ್ ಮತ್ತು ಬಿಜೆಪಿಯು ಹಿಂದೂಗಳ ವಿರೋಧಿ ಎಂಬುದಕ್ಕೆ ಸ್ಪಷ್ಟವಾದ ಪುರಾವೆಯಾಗಿದೆ. ಬಿಜೆಪಿ ಆಡಳಿತವಿರುವ ಜಾರ್ಖಂಡ್‍ನಲ್ಲಿ ನಡೆದಿರುವ ಈ ಹಲ್ಲೆಯನ್ನು, ಅಲ್ಲಿನ ಬಿಜೆಪಿ ವಕ್ತಾರ ಸಮರ್ಥಿಸುವಂತಹ ಹೇಳಿಕೆಯನ್ನು ನೀಡಿರುವುದು, ಈ ನಕಲಿ ಹಿಂದುತ್ವವಾದಿಗಳ ಒಟ್ಟು ಮನಸ್ಥಿತಿಯನ್ನು ಪುನಃ ಪುನಃ ದೇಶದ ಮುಂದೆ ತೆರೆದಿರಿಸಿದೆ. ದೇಶದ ಜನತೆ ಇವರ ಪೆÇಳ್ಳು ಹಿಂದುತ್ವವಾದಕ್ಕೆ ಮರುಳಾಗಿ ರಾಷ್ಟ್ರವನ್ನು ಇವರ ಕೈಗೆ ಒಪ್ಪಿಸಬಾರದು ಹಾಗೂ ಇವರಿಂದ ನಮ್ಮ ಸಂವಿಧಾನಕ್ಕೆ, ನಮ್ಮ ವಾಕ್ಸಾವತಂತ್ರ್ಯಕ್ಕೆ, ನಮ್ಮ ನ್ಯಾಯಾಂಗ ವ್ಯವಸ್ಥೆಗೆ ಮತ್ತು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ರಾಜ್ಯ ಘಟಕದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love