ಹಿರಿಯಡ್ಕ: ದೇಶ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಪ್ರಾಣ ನೀಡಲೂ ಸಿದ್ದ ; ಶರಣ್ ಪಂಪ್ ವೆಲ್

Spread the love

ಹಿರಿಯಡ್ಕ: ದೇಶ ಹಾಗೂ ಹಿಂದೂ ಧರ್ಮದ ರಕ್ಷಣೆಗೆ ಪ್ರಾಣ ನೀಡಲೂ ಸಿದ್ದರಿದ್ದೇವೆ ಅಂತಹ ಕೆಲಸವನ್ನು ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗ ದಳ ಮಾಡುತ್ತಿದ್ದು, ಯಾವುದೇ ದೇಶ ದ್ರೋಹದ ಕೆಲಸ ಮಾಡುತ್ತಿಲ್ಲ ಎಂದು ಬಜರಂಗದಳ ರಾಜ್ಯ ಸಂಚಾಲಕ ಶರಣ್ ಪಂಪ್ ವೆಲ್ ಹೇಳಿದರು.

ಅವರು ರವಿರಾರ ವಿಶ್ವ ಹಿಂದೂ ಪರಿಷದ್ ಬಜರಂಗದಳ ಹಿರಿಯಡ್ಕ ವತಿಯಿಂದ ಆಯೋಜಿಸಿದ ಬೃಹತ್ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದರು.

ದಿಕ್ಸೂಚಿ ಭಾಷಣ ಮಾಡಿದ ಡಾ ಕಲ್ಕಡ್ಕ ಪ್ರಭಾಕರ ಭಟ್ ಅವರು ಇಂದು ದೇಶದ ಹೆಸರಿನಲ್ಲಿ ಘೋಷಣೆ ಕೂಗಿದರೆ, ದೇಶದ ಮೇಲೆ ಅಭಿಮಾನದ ಮಾತನ್ನು ಆಡಿದವರ ಮೇಲೆ ಕೇಸು ದಾಖಲಿಸುತ್ತಿದ್ದಾರೆ. ರಾಷ್ಟ್ರದ ಹಿತವನ್ನು ಕಾಪಾಡುವ ಪ್ರತಿಯೊಬ್ಬರು ದೇಶವನ್ನು ಸದೃಢವನ್ನಾಗಿಡಲು ಸದಾ ಒಗ್ಗಟ್ಟಾಗಿರಬೇಕು.

ಹಿಂದುಗಳು ಮುಗ್ದರು, ಯಾವ ಕಾರಣಕ್ಕೂ ದೇಶದ ಶಾಂತಿ ಹಾಳು ಮಾಡುವ ಕೆಲಸವನ್ನು ಮಾಡುತ್ತಿಲ್ಲ. ಶಾಂತಿಗಾಗಿ ಜಾಗೃತಿ ಮೂಡಿಸುವ ಕೆಲಸ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷದ್ ಮಾಡುತ್ತಿದ್ದು, ಅವಗಳನ್ನು ಬೆಂಬಲಿಸಬೇಕಾಗಿದೆ ಎಂದರು.

ಬೃಹತ್ ಹಿಂದೂ ಸಮಾವೇಶವನ್ನು ಉದ್ಘಾಟಿಸಿ ಮಾತಾನಾಡಿದ ಶ್ರೀ ಮಠ ಬಾಳೆಕುದ್ರು ಇದರ ನೃಸಿಂಹಾಶ್ರಮ ಸ್ವಾಮೀಜಿ ಮಾತನಾಡಿ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ಸಂಘಟನೆಗಳು ಜನರಲ್ಲಿ ಜಾಗೃತಿ ಮೂಡಿಸುವ, ಹಾಗೂ ಅವರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದು, ದೇಶ ಕಟ್ಟುವ ಹಾಗೂ ಧರ್ಮ ರಕ್ಷಿಸುವ ಕಾರ್ಯದಲ್ಲಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಸಮಾಜತೋತ್ಸವ ಸಮಿತಿ ಹಿರಿಯಡ್ಕ ಇದರ ಅಧ್ಯಕ್ಷ ಡಾ ದೇವದಾಸ್ ಕಾಮತ್ ವಹಿಸಿದ್ದರು. ಬಜರಂಗದಳ ಮಂಗಳೂರು ವಿಭಾಗದ ಸಹಸಂಚಾಲಕ ಸುನಿಲ್ ಕೆ ಆರ್, ಉಡುಪಿ ಜಿಲ್ಲಾ ಬಜರಂಗದಳ ಸಂಚಾಲಕ ದೀನೇಶ್ ಮೆಂಡನ್, ಹಿರಿಯಡ್ಕ ವಿಶ್ವ ಹಿಂದೂ ಪರಿಷದ್ ಗೌರವಾಧ್ಯಕ್ಷ ದಯಾನಂದ ಮಲ್ಯ, ಹಿರಿಯಡ್ಕ ದೇವಾಡಿಗ ಯುವ ಸಂಘಟನೆಯ ರತ್ನಾಕರ ದೇವಾಡಿಗ, ದಿನೇಶ್ ಶೆಟ್ಟಿ ಹೆಬ್ರಿ, ಪ್ರಕಾಶ್ ಪುತ್ರನ್, ಸಚ್ಚಿದಾನಂದ ಶೆಟ್ಟಿ, ನಾರಾಯಣ ಮಣಿಯಾಣಿ, ರತ್ನಾಕರ ಅಮೀನ್, ಬೈಕಾಡಿ ಸುಪ್ರಸಾದ್ ಶೆಟ್ಟಿ ಇತರರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮಕ್ಕೆ ಮುನ್ನ ಕೋಟ್ನಕಟ್ಟೆಯಿಂದ ಆಕರ್ಷಕ ಶೋಭಾ ಯಾತ್ರೆಗೆ ಜರುಗಿತು. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ವಿಲಾಸ್ ನಾಯಕ್ ಯಾತ್ರೆಗೆ ಚಾಲನೆ ನೀಡಿದರು.


Spread the love