ಹೆಜಮಾಡಿ ಬಂದರಿಗೆ ಬಿಜೆಪಿ ಸರಕಾರದ ಕೊಡುಗೆ ಬಹಿರಂಗಪಡಿಸಿ: ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

Spread the love

ಹೆಜಮಾಡಿ ಬಂದರಿಗೆ ಬಿ.ಜೆ.ಪಿ ಸರಕಾರದ ಕೊಡುಗೆ ಬಹಿರಂಗಪಡಿಸಿ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

ಉಡುಪಿ: ಕಾಪು ಭಾಗದ ಮೀನುಗಾರರ ಬಹುಕಾಲದ ಬೇಡಿಕೆಯಾಗಿರುವ ಹೆಜಮಾಡಿ ಬಂದರು ಅಭಿವೃದ್ಧಿ ಬಗ್ಗೆ 10ವರ್ಷ ಈ ಭಾಗದಲ್ಲಿ ಬಿ.ಜೆ.ಪಿ ಶಾಸಕರಾಗಿದ್ದ ಮೀನುಗಾರರ ಸಮಾಜದ ಮುಖಂಡರು, ಹಾಲಿ ಸಂಸದರು. ಇವರದ್ದೆ  ಈ ಹಿಂದಿನ ಸರಕಾರ . ಈ ಭಾಗದ ಮೀನುಗಾರಿಕೆ ಸಚಿವರುಗಳು ನೀಡಿರುವ ಕೊಡುಗೆ ಏನು?. ಅನುದಾನವೇಷ್ಟೆಂದು ಬಹಿರಂಗ ಪಡಿಸಲಿ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಶ್ವಾಸ್  ವಿ.ಅಮೀನ್ ಸವಾಲು ಹಾಕಿದ್ದಾರೆ.

ಬಿ.ಜೆ.ಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೀನುಗಾರ ಫೇಡೆರೇಶನ್ ಅಧ್ಯಕ್ಷರಾದ ಯಶಪಾಲ್ ಸುವರ್ಣರವರು ಅನುಭವದ ಕೊರತೆಯಿಂದ  ಶಾಸಕರಾದ ವಿನಯ್ ಕುಮಾರ್ ಸೊರಕೆಯವರು ಪ್ರಾಮಾಣಿಕವಾಗಿ ಮೀನುಗಾರರ ಹಲವು ದಶಕಗಳ  ಸಮಸ್ಯೆಗಳಿಗೆ ಸ್ಪಂಧಿಸಿ ಜನಮನ್ನಣೆಗಳಿಸಿರುವುದಕ್ಕೆ ಹತಾಶರಾಗಿ ಹೇಳಿಕೆ ನೀಡುತ್ತಿದ್ದ್ದಾರೆಂದು ಆರೋಪಿಸಿದರು.

ಇವರದ್ದೆ ಸರಕಾರ 5ವರ್ಷ ಇದ್ದಾಗ ಶಾಸಕರು ಸಂಸದರು ಸಚಿವರುಗಳು ಗಾಢ ನಿದ್ರೆಯಲ್ಲಿದ್ದು  ಹೆಜಮಾಡಿ ಬಂದರಿನ ಬಗ್ಗೆ ಪಸ್ತಾವನೆ ಮಾಡುವ ಗೋಜಿಗೆ ಹೋಗದೆ ಇದೀಗ ಮುಖ್ಯ ಮಂತ್ರಿಗಳು, ನಮ್ಮ ಕ್ಷೇತ್ರದ ಶಾಸಕರು ಮಾಜಿ  ಮಂತ್ರಿಗಳಾದ ವಿನಯ್ ಕುಮಾರ್ ಸೊರಕೆಯವರು ಪ್ರಥಮ ಬಜೆಟ್‍ನಲ್ಲಿಯೇ ಹೆಜಮಾಡಿ ಬಂದರು ಅಭಿವೃದ್ಧಿ ಬಗ್ಗೆ  ಘೋಷಣೆ ಮಾಡಿದ್ದು ಕೇಂದ್ರ ಮತ್ತು ರಾಜ್ಯ ಸರಕಾರ 75:25 ಅನುದಾನದಲ್ಲಿ  ಯೋಜನೆ ಸಿದ್ಧಪಡಿಸಲಾಯಿತ್ತು. ಆದರೆ ಇದೀಗ ಕೇಂದ್ರ ಸರಕಾರ ಅನುದಾನ ನೀಡುವ ಬಗ್ಗೆ ಮೀನ ಮೇಷ ಮಾಡಿತ್ತಿದ್ದು. 25 ಶೇಕಡಾ ಮಾತ್ರ ಅನುದಾನ ನೀಡುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ  ನಾಟಕ ಮಾಡುತ್ತಿದ್ದು ಬಿ.ಜೆ.ಪಿ ನಾಯಕರಿಗೆ ಚುನಾವಣೆ ಹತ್ತಿರವಾಗುತ್ತಿದಂತೆ ಹೆಜಮಾಡಿ ಬಂದರು ನೆನಪಾಗಿರುವುದು ಹಾಸ್ಯಸ್ಪದವೆಂದು  ವಿಶ್ವಾಸ್  ವಿ. ಅಮೀನ್  ಟೀಕಿಸಿದ್ದಾರೆ.

ಸಚಿವರಿಂದ ದಿಟ್ಟ ನಿರ್ಧಾರ:  ನಮ್ಮ ಜಿಲ್ಲಾ ಉಸ್ತುವಾರಿ ಸಚಿವರು /ಮೀನುಗಾರಿಕಾ ಸಚಿವರಾದ  ಪ್ರಮೋದ್ ಮಧ್ವರಾಜ್‍ರವರು ಹೆಜಮಾಡಿ ಬಂದರು ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿವಹಿಸಿ 23.09.2017 ರಂದು ಬಂದರು ಮತ್ತು ಮೀನುಗಾರಿಕೆ ಇಲಾಖೆಯ ಪ್ರಧಾನ  ಕಾರ್ಯದರ್ಶಿಗಳ ಮೂಲಕ ಸೂಕ್ತ ಮರು ಪ್ರಸ್ತಾವನೆಗಾಗಿ ಮೀನುಗಾರಿಕೆ ನಿರ್ಧೇಶಕರಿಗೆ ಸೂಚಿಸಿದ್ದು ಕೇಂದ್ರ ಸರಕಾರದ ಸೂಕ್ತ ಸ್ವಷ್ಟ ಅನುದಾನ ಬಗ್ಗೆ  ತಾತ್ವಿಕ ಒಪ್ಪಿಗೆ ನೀಡಿದ ತಕ್ಷಣ ರಾಜ್ಯಸರಕಾರ  ಸಂಪುಟದ ಒಪ್ಪಿಗೆ ಪಡೆದು ಮಾನ್ಯ ಮುಖ್ಯಮಂತ್ರಿಗಳ ಮೂಲಕ ಗುದ್ದಲಿ ಪೂಜೆ ನಡೆಸಲಾಗುವುದೆಂದು ತಿಳಿಸಿದ್ದು. ಈ ಹಿಂದೆ ಬಿ.ಜೆ.ಪಿ ಸರಕಾರವಿದ್ದಾಗ  ನೂರಾರು ಆರ್ಜಿಗಳು ಇದ್ದರೂ ಬಿ.ಜೆ.ಪಿ ಪಕ್ಷದ ಬೋಟ್ ಮಾಲಕರಿಗೆ ಮಾತ್ರ ಸಾಧ್ಯತ ಪತ್ರ ನೀಡುತ್ತಿದ್ದು. ಇದೀಗ ಸಚಿವರು ಮುಕ್ತವಾಗಿ ಎಲ್ಲಾ ಅರ್ಜಿದಾರರಿಗೂ ಅವಕಾಶ ಕಲ್ಪಿಸಿದ್ದು ಕಾಪು ಕ್ಷೇತ್ರದ 120 ಮೀನುಗಾರರಿಗೆ ಶಾಸಕರ ಶಿಫಾರಸಿನಂತೆ  “ ಆರ್ಹತಾ ಪತ್ರ” ನೀಡಲಾಗಿದ್ದು. ಇದು ನಮ್ಮ ಸಚಿವರ ದಿಟ್ಟ ನಿರ್ಧಾರವೆಂದು ವಿಶ್ವಾಸ್ ವಿ .ಅಮೀನ್ ತಿಳಿಸಿದ್ದಾರೆ.

ಸಂಸದರ ಮೌನವೇಕೆ?:  ಮೀನಗಾರರ ಹಲವು ದಶಕಗಳ ಬೇಡಿಕೆಯಾದ ಶಾಶ್ವತ ತಡೆಗೋಡೆಗೆ ಎರ್ಮಾಳು ತೆಂಕದಲ್ಲಿ  20 ಕೋಟಿ ಮಟ್ಟುವಿನಿಂದ –ಕುತ್ಪಾಡಿವರೆಗೆ 5ಕಿ.ಮಿ ಉದ್ದದ ತಡೆಗೋಡೆಗೆ 78.44 ಕೋಟಿ ರೂ ಶಾಸಕರರ ಶಿಫಾರಸಿನಂತೆ ಎ.ಡಿ.ಬಿ ಯೋಜನೆ ಮೂಲಕ ಮಂಜೂರುಗೊಳಿಸಲಾಗಿದೆ. ಕಾಪುಕ್ಷೇತ್ರದ 43.35 ಕಿ,ಮಿ   ಫೀಶರಿಸ್ ರಸ್ತೆ ಅಭಿವೃದ್ಧಿಗೆ ಬಂದರು ಮತ್ತು ಮೀನುಗಾರಿಕೆ ಇಲಾಖೆಯಿಂದ ಅನುದಾನ ಮಂಜೂರುಗೊಳಿಸಲಾಗಿದ್ದು 5ಕೋಟಿ ವೆಚ್ಚದಲ್ಲಿ ಕಾಂಕ್ರೀಟ್‍ಕರಣ,ಸೇತುವೆ ನಿರ್ಮಾಣಕ್ಕೆ 80ಲಕ್ಷ ಯೋಜನೆ  ಕಾರ್ಯಗತಗೊಂಡಿರುತ್ತದೆ. ಕಾಪು ಎರ್ಮಾಳು ಮತ್ತು ಪಡುಬಿದ್ರಿ ಬೀಚ್ ಅಭಿವೃದ್ಧಿಗೆ ಪ್ರವಾಸೋಧ್ಯಮ ಇಲಾಖೆ ಮೂಲಕ 10ಕೋಟಿ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದೆ . ಯು.ಪಿ.ಸಿ.ಎಲ್ ಸ್ಥಾವರದಿಂದ ತೊಂದರೆಗೊಳಗಾದ ಪಡುಬಿದ್ರಿ ಹಾಗೂ ಎರ್ಮಾಳು ಪರಿಸರದ 302 ನಾಡದೋಣಿ ಮೀನುಗಾರರಿಗೆ ಕುಟುಂಬಕ್ಕೆ ತಲಾ 1ಲಕ್ಷದಂತೆ 3.02 ಕೋಟಿ ಪರಿಹಾರವನ್ನು ವಿತರಿಸಲಾಗಿದ್ದು  ಇನ್ನು 4 ಕೋಟಿ ಪರಿಹಾರ ಬಿಡುಗಡೆ ಗೊಳಿಸಲಾಗುವುದು. ಎರ್ಮಾಳು ತೆಂಕದ ಮೀನುಗಾರರ  ಬಹುಕಾಲದ ಸಮಸ್ಯೆಯಾದ ತತ್ಕಾಲಿಕ ಜಟ್ಟಿ ತೆರವುಗೊಳಿಸುವ ಕಾರ್ಯವನ್ನು ಶಾಸಕರ ಮುತುವರ್ಜಿ ವಹಿಸಿ ಮಾಡಿಸಿರುತ್ತಾರೆ. ಮೀನುಗಾರರ ಸಮಸ್ಯೆಗಳನ್ನು ಪರಿಹರಿಸಲು ಹಾಲಿ ಸಂಸದರಾದ ಶೋಭಾ ಕರಂದ್ಲಾಜೆಯವರ ಕೊಡುಗೆ ಶೂನ್ಯವಾಗಿದ್ದು ಹಲವಾರು ಸಮಸ್ಯೆಗಳ ಜೊತೆಗೆ ಮಳೆಗಾಲದಲ್ಲಿ ನಡೆದ ವ್ಯಾಪಕ ಸಮುದ್ರ  ಕೊರತೆಯಿಂದ ಮೀನುಗಾರರಿಗೆ ತೀರಾ ತೊಂದರೆಯಾದಗ ಸೌಜನ್ಯಕ್ಕೂ ಬೇಟಿ ನೀಡದೆ  ಇದೀಗ ಏಕಾಏಕಿ ಬಿ.ಜೆ.ಪಿ ನಾಯಕರಿಗೆ ಮೀನುಗಾರರ ಹೆಜಮಾಡಿ ಬಂದರಿನ ಬಗ್ಗೆ  ನೆನಪಾಗಿರುವುದು ಹಾಸ್ಯಸ್ಪದ ಇವರಿಗೆ ನಿಜವಾಗಿಯೂ ಹೆಜಮಾಡಿ ಬಂದರಿನ ಬಗ್ಗೆ ಕಾಳಜಿ ಇದ್ದಲ್ಲಿ ಮೀನುಗಾರನ್ನು ದಾರಿ ತಪ್ಪಿಸುವ ಬದಲು ಯಾವುದೇ ಯೋಜನೆಯಡಿ ಕೇಂದ್ರ ಸರಕಾರ ಶೇಕಡಾ 50ರ ಅನುದಾನ ಬಿಡುಗಡೆಗೊಳಿಸುವ ಅದೇಶ ಹೊರಡಿಸಲಿ ಎಂದು ವಿಶ್ವಾಸ್ ವಿ. ಅಮೀನ್ ತಿಳಿಸಿದ್ದಾರೆ.,


Spread the love