ಉಡುಪಿ: ಜಿಲ್ಲೆಯಲ್ಲಿ 23ರಿಂದ 26ವರೆಗೆ ಚಿತ್ರೋತ್ಸವ ಸಂಭ್ರಮ

Spread the love

ಉಡುಪಿ, ನವೆಂಬರ್ 20 :- ಜಿಲ್ಲೆಯ ಏಳು ಚಲನಚಿತ್ರ ಮಂದಿರಗಳಲ್ಲಿ ನವೆಂಬರ್ 23ರಿಂದ 26ರವರೆಗೆ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಹಂಗೆರಿ, ಅರ್ಜೇಂಟಿನ, ನಾರ್ವೇ, ಇರಾನ್, ರಷಿಯಾ ಮುಂತಾದ ವಿವಿಧ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಬೈಂದೂರಿನ ಶಂಕರ್, ಕಾರ್ಕಳದ ರಾಧಿಕಾ, ಕುಂದಾಪುರ ವಿನಾಯಕ ಚಿತ್ರಮಂದಿರಗಳಲ್ಲಿ, ಉಡುಪಿಯ ಅಲಂಕಾರ್, ಕಲ್ಪನಾ,ಆಶೀರ್ವಾದ, ಡಯಾನದಲ್ಲಿ ಬೆಳಗ್ಗೆ 9.30ರಿಂದ 12.30ರವರೆಗೆ, ಅಪರಾಹ್ನ ಒಂದು ಗಂಟೆಯಿಂದ 4 ಗಂಟೆಯವರೆಗೆ ಚಲನಚಿತ್ರ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ.
ವಿದ್ಯಾಂಗ ಇಲಾಖೆ ಮಕ್ಕಳ ಪಟ್ಟಿಗಳನ್ನು ಸಿದ್ಧಪಡಿಸಿದ್ದು, ಮಕ್ಕಳನ್ನು ಕರೆತರಲು, ಸುರಕ್ಷಿತವಾಗಿ ಹಿಂದಿರುಗಿಸಲು ಹಾಗೂ ಲಘು ಉಪಹಾರದ ವ್ಯವಸ್ಥೆಯನ್ನೂ ಜಿಲ್ಲಾಡಳಿತ ಮಾಡಿದೆ.
ಪ್ರದರ್ಶನಗೊಳ್ಳುವ ಚಿತ್ರಗಳ ಕಿರುನೋಟ-
ಅಲಂಕಾರ್ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ‘ಕಾಡ ಹಾದಿಯ ಹೂಗಳು’(ಕನ್ನಡ), ‘ಆ್ಯನ್ ಅವೇಸಮ್ ನ್ಯೂ ಈಯರ್’(ಬ್ರೆಜಿಲ್), ‘ದಿ ಬಿಗ್ ಹೆಡ್ಡೆಡ್ ಬಾಯ್’(ಪೋರ್ಚುಗಲ್), ‘ ದಲಿವಿನಿ ಕ್ಯಾಸೊ’(ಅರ್ಜೆಂಟೈನಾ), ‘ಪೋಂಟರ್ & ದ ಮ್ಯಾಜಿಕ್ ವ್ಯಾಂಡ್’(ನೋರ್‍ವೇ), ಮಧ್ಯಾಹ್ನ 1 ರಿಂದ 4 ರ ವರೆಗೆ ‘ಸರ್ಕಸ್ ಇಮ್ಯಾಗೋ’(ಸ್ವೀಡನ್), ‘ಲಮೋನೇಡ್ ತಲೆ’(ಇಸ್ಟೋನಿಯಾ), ‘ಕಿಕೋಸ್ ಪ್ಯಾರಡೈಸ್’(ಸ್ಪೇನ್), ‘ಅಟ್ಟ ಪಟ್ಟ’(ಕನ್ನಡ).
ಡಯನಾ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ‘ಲಿಟಲ್ ಸ್ಪಾರೋ’(ಇರಾನ್), ‘ಎ ಶಾಲ್ ಟು ಡೈ ಫಾರ್’(ಇಂಗ್ಲೀಷ್), ‘ನಿಕೋಲಾ ಟೆಸ್ಸಾ ಸೀಕ್ರೆಟ್’(ಕ್ರೊಯಾಟಿಯಾ). ‘ದ ಟೈಗರ್ (ಇಂಡಿಯಾ), ಕೋಮಲ್ (ಇಂಡಿಯಾ), ದ ಗಿಫ್ಟ್(ಹಾಂಗ್-ಕಾಂಗ್), ಮಧ್ಯಾಹ್ನ 1 ರಿಂದ 4 ರ ವರೆಗೆ ‘ಎ ಸ್ಟೋರಿ’(ನಾನ್ ವರ್ಬಲ್), ‘ಸಾನಿಟೇಶನ್ ಚಾಲೆಂಜ್’(ಇಂಡಿಯಾ), ಶಿಫ್ಟಿಂಗ್ ಅಚಿಡರ್ ಕರೆಂಟ್ಸ್(ಭಾರತ), ದಪ್ತಾರ (ಇಂಡಿಯಾ) ವೈ ಡಿಡ್ ದೇ ಕಂ ಬೈ ಟ್ರೈನ್ (ಕ್ರೊಯೇಷಿಯಾ), ಏಷಿಯಾಟಿಕ್ ಲಯನ್ (ಇಚಿಡಿಯಾ)
ಆಶೀರ್ವಾದ್ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಅಮೇಜಿಂಗ್ ವಿಪ್ಲಾ(ಬೆಲ್ಜಿಯಂ), ಜಿಲ್ ಆ್ಯಂಡ್ ಜಾಯ್(ಫಿನ್‍ಲ್ಯಾಂಡ್) ಮಧ್ಯಾಹ್ನ 1 ರಿಂದ 4 ರ ವರೆಗೆ ಡ್ಯಾಮ್ 999 (ಇಂಡಿಯಾ), ಡೈಮಂಡ್ (ಬೆಲ್ಜಿಯಂ/ನೆದರ್‍ಲ್ಯಾಂಡ್), ಎದ ಗಿಫ್ಟ್ (ಹಾಂಗ್-ಕಾಂಗ್), ಸ್ಯಾಂಡ್ ಆನ್ ದ ಬೀಚ್(ಜರ್ಮನಿ)
ಕಲ್ಪನಾ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ಲಿಟಲ್ ಡ್ರಾಗನ್(ಇಂಡಿಯಾ), ಫಿಡಲ್ ಸ್ಟಿಕ್ಸ್(ಜರ್ಮನ್), ಮಧ್ಯಾಹ್ನ 1 ರಿಂದ 4 ರ ವರೆಗೆ ಕನಸು (ಕನ್ನಡ), ಐ ಡೋಂಟ್ ಸೇ ಗುಡ್‍ಬೈ ಐ ಸೇ ಸಿ ಯು ಸೂನ್ (ಬ್ರೆಜಿಲ್), ಐ ಸೇ ಭಲ್ಲಾಜಿ (ಇಂಡಿಯಾ),
ರಾಧಿಕಾ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ ದ ಡೈರಿ ಆಫ್ ಸಮ್ಮರ್ (ಚೀನಾ), ಜಲ್ ಖೇತ್ (ಇಂಡಿಯಾ/ಇಂಗ್ಲೀಷ್), ಲಿಟಲ್ ಗಾಡ್ಡೆಸ್ಸ್ (ಕೆನಡಾ), ವಿಂಡ್ ಆಫ್ ಚೇಂಜ್( ಇಂಟರ್‍ನ್ಯಾಷನಲ್), ನಿಕೋಲಾ ಟೆಸ್ಸಾ ಸೀಕ್ರೆಟ್ (ಕ್ರೊಯಟಿಯಾ), ಮಧ್ಯಾಹ್ನ 1 ರಿಂದ 4 ರ ವರೆಗೆ ಒಂದು ಊರಲ್ಲಿ (ಕನ್ನಡ), ಎ ಕ್ಲೈಮೇಟ್ ಆಫ್ ಚೇಂಜ್ (ಇಂಟರ್‍ನ್ಯಾಷನಲ್), ದ ಗಿಫ್ಟ್ (ಹಾಂಗ್-ಕಾಂಗ್),ಡೈಮಂಡ್ (ಬೆಲ್ಜಿಯಂ/ನೆದರ್‍ಲ್ಯಾಂಡ್),
ಶಂಕರ ಚಿತ್ರಮಂದಿರದಲ್ಲಿ ಬೆಳಗ್ಗೆ 9.30 ರಿಂದ ಮಧ್ಯಾಹ್ನ 12.30 ರವರೆಗೆ 2 ಪೆನ್ ಕುಟ್ಟಿಗಲ್ (ಇಂಡಿಯ), ದ ಪೊಯೆಮ್ ಥೀಫ್ (ಇಂಡಿಯ),ವಿಂಟರ್ ಅಚಿಡ್ ಲಿಜಾರ್ಡ್(ಹಂಗೆರಿ), ರೈಸ್ ಅಂಡ್ ದ ಮ್ಯಾಚೆಸ್ಟಿಕ್ಸ್( ಅರ್ಜೆಂಟೇನಾ).
ಡಯಾನದಲ್ಲಿ ಲಿಟಲ್ ಸ್ಪಾರೋ (ಇರಾನ್), ನಿಕೋಲಾ ತೆಸ್ಲಾ ಸೀಕ್ರೆಟ್, ಅಪರಾಹ್ನ 1 ಗಂಟೆಯಿಂದ 4ರವರೆಗೆ ಎ ಸ್ಟೋರಿ, ಶಿಫಿಂಗ್ ಅಂಡರ್ ಕರೆಂಟ್ಸ್ , ಡಪ್ತರಾ ಚಿತ್ರಗಳ ಪ್ರದರ್ಶನ 23ರಂದು ನಡೆಯಲಿವೆ.


Spread the love