ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಕೊಡಂಕೂರು ಘಟಕ ಉದ್ಘಾಟನೆ

ಉಡುಪಿ:  ಕೊಡಂಕೂರಿನಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ(ರಿ.) ಉಡುಪಿಯ ಘಟಕವನ್ನು  ಭಾನುವಾರ ನವೆಂಬರ್ 22 ರಂದು ಉದ್ಘಾಟಿಸಲಾಯಿತು.

ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾಧ್ಯಕ್ಷ ರವಿ ಶೆಟ್ಟಿಯವರು ಮಾತನಾಡಿ ಕಾರ್ಮಿಕರ ಹಕ್ಕು ಭಾದ್ಯತೆಗಳಿಗೆ ಹೋರಾಡಲು ಸಂಘಟನೆಗಳ ಅವಶ್ಯಕತೆಯಿದ್ದು, ಸರ್ಕಾರದ ಸೌಲಭ್ಯಗಳನ್ನು ಕಾರ್ಮಿಕರಿಗೆ ಒದಗಿಸಲು ಕ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ ಎಂದರು.

 ಸಭಾಧ್ಯಕ್ಷತೆ ವಹಿಸಿದ್ದ ನಿಟ್ಟೂರಿನ ಉದ್ಯಮಿ ಬಾಲಕೃಷ್ಣರವರು ವೇದಿಕೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರೀಯೆ ನಡೆಯಿತು. ಘಟಕಾಧ್ಯಕ್ಷರನ್ನಾಗಿ ಮಂಜುನಾಥ್ ಕೆ, ಉಪಾಧ್ಯಕ್ಷÀರನ್ನಾಗಿ ಬಾಲಕೃಷ್ಣ, ಉಪಾಧ್ಯಕ್ಷರನ್ನಾಗಿ ಪ್ರದೀಪ್, ಕಾರ್ಯದರ್ಶಿಯಾಗಿ ಅಶೋಕ್ ಹಾಗೂ ಇನ್ನಿತರರನ್ನು ಆಯ್ಕೆ ಮಾಡಲಾಯಿತು.

karmika_vedike_kodankoor_unit 23-11-2015 09-41-15 karmika_vedike_kodankoor_unit 23-11-2015 09-50-10 karmika_vedike_kodankoor_unit 23-11-2015 09-50-011 karmika_vedike_kodankoor_unit 23-11-2015 09-50-012

ಜಿಲ್ಲಾ ಉಪಾಧ್ಯಕ್ಷ ಕೆ ಸುರೇಶ್ ಸೇರಿಗಾರ್, ಜಿಲ್ಲಾ ಮಹಿಳಾ ಘಟಕಾಧ್ಯಕ್ಷೆ ಚಂದ್ರಿಕಾ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರವಿ ಶಾಸ್ತ್ರೀ ಬನ್ನಂಜೆ, ಕಾರ್ಯದರ್ಶಿ ಮಹಮ್ಮದ್ ಆರೀಫ್, ಪ್ರವೀಣ್ ಹಿರಿಯಡ್ಕ, ಮಹಮ್ಮದ್ ನಬೀಲ್ ಹಾಗೂ ಇನ್ನಿತರ ಕಾರ್ಯಕರ್ತರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

Leave a Reply

Please enter your comment!
Please enter your name here