ಮಂಗಳೂರು : ಎಸ್.ಐ.ಓ ನೂತನ ಶಿಕ್ಷಣ ನೀತಿಯ ಮೇಲಿನ ಒಂದು ವಿಶ್ಲೇಷಣಾ ವರದಿ ಹಾಗೂ ಶಿಫಾರಸುಗಳು

Spread the love

ಮಂಗಳೂರು :   ಭಾರತ ಸರಕಾರವು ಕರಡು ಶಿಕ್ಷಣ ನೀತಿಯನ್ನು 1986ರಲ್ಲಿ ರಚಿಸಿ, 1992ರಲ್ಲಿ ನವೀಕರಿಸಿತು. ಕಳೆದ 22 ವರ್ಷಗಳಲ್ಲಿ, ನಾವು ಮೆಲ್ಲಮೆಲ್ಲನೆ ಆದರೆ, ಎಡೆಬಿಡದೆ ಆಯೋಜಿತ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದೇವೆ. ಬಲ್ಲಮೂಲಗಳಿಗೆ ಅನುಸಾರವಾಗಿ, ಭಾರತ ಸರಕಾರವು 2015ರ ಡಿಸೆಂಬರಿನಲ್ಲಿ ನೂತನ ಶಿಕ್ಷಣ ನೀತಿಯನ್ನು  ರಚಿಸಲಿದೆ ಎಂದು ಶಿಕ್ಷಣ ತಜ್ಞ ಡಾ ಸುಕುಮಾರ್ ಗೌಡ ಹೇಳೀದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್.ಐ.ಓ) ನೂತನ ಶಿಕ್ಷಣ ನೀತಿಯ ಮೇಲೆ ದೇಶದ ವಿವಿಧ ನಗರಗಳಲ್ಲಿ ಸುಮಾರು 19 ಚರ್ಚೆಗಳನ್ನು ಆಯೋಜಿಸಿತು. ಇದರ ಜೊತೆಗೆ ಒಂದು ಆನ್‍ಲೈನ್ ಸಮೀಕ್ಷೆಯನ್ನು ನಡೆಸಿದುದಲ್ಲದೆ, ಸುಮಾರು 20 ಶಿಕ್ಷಣ ತಜ್ಞರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿ ನೂತನ ಶಿಕ್ಷಣ ನೀತಿಗೆ ಶಿಫಾರಸುಗಳ ಕರಡನ್ನು ತಯಾರಿಸಿತು.

ಈ ಕರಡು ಶಿಕ್ಷಣ ನೀತಿ ಶಿಫಾರಸುಗಳು ಶಾಲಾ ಶಿಕ್ಷಣ, ಬೋಧಕ/ಶಿಕ್ಷಕ ಶಿಕ್ಷಣ, ವೃತ್ತಿಪರತೆ, ಭಾಷಾ ನೀತಿ, ಉನ್ನತ ಶಿಕ್ಷಣ ಮತ್ತು ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣ ಮತ್ತು ಸಂಶೋಧನೆ ಎಂದು ವಿಂಗಡಿಸಲ್ಪಟ್ಟಿದೆ.

ಶಾಲಾ ಶಿಕ್ಷಣ ಶಿಫಾರಸುಗಳು:

  • ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿ ಸಮುದಾಯದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು, ವಿಶೇಷವಾಗಿ ಸಂವಿಧಾನದ ನಾಲ್ಕು ಪ್ರಮುಖ ತತ್ವಗಳನ್ನು ಬೆಳೆಸುವಂತಿರಬೇಕು.
  • ಯಾವುದೇ ರೀತಿಯ ಶ್ರೇಣೀಕರಣ ಮತ್ತು ತಾರತಮ್ಯವಿಲ್ಲದೇ, ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವಂತೆ ನೀತಿಯನ್ನು ರೂಪಿಸಬೇಕು.
  • ಸಾಮಾಜಿಕ ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯ ಐಕ್ಯತೆಯನ್ನು ಸಾಧಿಸುವ ನಿಟ್ಟಿನಲ್ಲಿ ಪಠ್ಯವು ಭಾರತದ ಬಹುತ್ವ ಸಂಸ್ಕøತಿಯನ್ನು ಪ್ರತಿಫಲಿಸಬೇಕು. ಪಠ್ಯವು ವೈಜ್ಞಾನಿಕ ಮನೋಭಾವವನ್ನು ಬೆಳೆಸಬೇಕು.
  • ಹೊಸ ನೀತಿಯು 18 ವರ್ಷ ವಯಸ್ಸಿನ ಕೆಳಗಿನವರಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣವನ್ನು ಒದಗಿಸುವಂತಿರಬೇಕು.
  • ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಚಟುವಟಿಕೆಗಳನ್ನು ಹೊಸ ಶಿಕ್ಷಣ ನೀತಿಯು ಖಾತ್ರಿ ಪಡಿಸಬೇಕು.
  • ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯ ಬೋಧನಾ ಮಾಧಮವಾಗಿರಬೇಕು.
  • ಹೊಸ ಶಿಕ್ಷಣ ನೀತಿಯು ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಸ್ಥಿರವಾದ ನಿರ್ಧಾರವನ್ನು ಕೈಗೊಳ್ಳಬೇಕು.
  • ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆಯೂ ಕೂಡ ಶಾಲಾ ಪಠ್ಯದ ಮುಖ್ಯ ಭಾಗವಾಗಿರಬೇಕು.
  • ಲಿಂಗ, ಜಾತಿ, ಜನ್ಮಸ್ಥಳ, ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನಗಳನ್ನು ಪರಿಗಣಿಸದೆ ಎಲ್ಲಾ ಮಕ್ಕಳಿಗೆ ಸಮಾನ ಮತ್ತು ಗುಣಮಟ್ಟದ ಶಿಕ್ಷಣವನ್ನು ಒದಗಿಸಲು ನೆರೆಕರೆ ಶಾಲಾ ವ್ಯವಸ್ಥೆಯ ಮಾದರಿಯಲ್ಲಿ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಪುನರ್ ರಚಿಸಬೇಕು.

ಬೋಧಕ ಶಿಕ್ಷಣ

  • ಬೋಧಕ ಶಿಕ್ಷಣ ಸಂಸ್ಥೆಗಳನ್ನು ಪರಿವೀಕ್ಷಣೆ ನಡೆಸಲು, ರಾಜ್ಯಗಳಾದ್ಯಂತ ಮಿಶನ್ ಮಾದರಿಯಲ್ಲಿ ಪರಿಶೀಲನಾ ಕಾರ್ಯವನ್ನು ಕೈಗೆತ್ತಿಕೊಂಡು, ನಿರ್ಧರಿತ ಸಮಯದ ಚೌಕಟ್ಟಿನೊಳಗೆ ಶಿಫಾರಸುಗಳನ್ನು ಮಾಡುವುದು;
  • ಶಾಲಾ ಶಿಕ್ಷಣದ ಎಲ್ಲಾ ಮಜಲುಗಳಲ್ಲಿ ವೃತ್ತಿಪರ ವಿದ್ಯಾರ್ಹತೆಯನ್ನು ಹೊಂದಿರುವ ಬೋಧಕರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಅನುಕೂಲವಾಗುವಂತೆ ಸಾಂಸ್ಥಿಕ ಸಾಮಥ್ರ್ಯದ ವಾಸ್ತವಿಕ ಅಗತ್ಯವನ್ನು ಅಂದಾಜು ಮಾಡಲು ಎಲ್ಲಾ ರಾಜ್ಯಗಳಿಗೂ ನೆರವಾಗುವುದು;
  • ಡಿಐಇಟಿ (ಆIಇಖಿsಗಳು ಹಾಗೂ ಮುಖ್ಯವಾಗಿ ಉನ್ನತ ಶಿಕ್ಷಣದ ಪದವಿ ಶಿಕ್ಷಣ ವ್ಯವಸ್ಥೆಗಳ ರಾಜ್ಯ ವ್ಯವಸ್ಥೆಯ ವಿಸ್ತರಣೆಯ ಮೂಲಕ ಸೇವಾಪೂರ್ವ ಶಿಕ್ಷಣದ ಸಾಂಸ್ಥಿಕ ಸಾಮಥ್ರ್ಯವನ್ನು ರಾಜ್ಯಗಳು ಹೆಚ್ಚಿಸುವುದನ್ನು ಖಚಿತಪಡಿಸಲು  ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು;
  • ಹೊಸದಾಗಿ ಸ್ಥಾಪನೆಯಾಗುವಂತಹ ಎಲ್ಲ ಶಿಕ್ಷಣ ಸಂಸ್ಥೆಗಳು ಪ್ರತ್ಯೇಕವಾಗಿರಬಾರದು, ಬದಲಾಗಿ ಅವು ಪದವಿ ಶಿಕ್ಷಣ ಸಂಸ್ಥೆಗಳು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ಸ್ಥಾನವನ್ನು ಪಡೆದಿರಬೇಕು; ಇಂತಹ ಒಂದು ಇತ್ತೀಚೆಗಿನ ಪ್ರಯತ್ನದಲ್ಲಿ, ಬಿಹಾರವು ತನ್ನ ರಾಜ್ಯದಲ್ಲಿರುವ ಪದವಿ ಶಿಕ್ಷಣ ಸಂಸ್ಥೆಗಳಿಗೆ ಬೋಧಕ ಶಿಕ್ಷಣ ಕಾರ್ಯಕ್ರಮವನ್ನು ಒದಗಿಸುವಂತೆ ಆಹ್ವಾನ ನೀಡಿದೆ.
  • ಈಗ ಅಸ್ತಿತ್ವದಲ್ಲಿರುವ ಸಂಸ್ಥೆಗಳು ಪೂರ್ವನಿರ್ಧರಿತವಾಗಿರುವ ಸಮಯದ ಚೌಕಟ್ಟಾದ ಗರಿಷ್ಠ 3 ವರ್ಷಗಳ ಒಳಗೆ ಈ ರೂಪಾಂತರವನ್ನು ಮಾಡಿಕೊಳ್ಳಬೇಕು. ಪ್ರತಿ ರಾಜ್ಯದೊಳಗೆ ಇಂತಹ ಒಂದು ಪರಿವರ್ತನೆಯಾಗಬೇಕಾದರೆ ಸೂಕ್ತ ಬೆಂಬಲವನ್ನು ನೀಡಬೇಕಾಗುವುದು;
  • ಪದವಿ ಹಾಗೂ ವಿಶ್ವವಿದ್ಯಾನಿಲಯದ ಶಿಕ್ಷಣ ವ್ಯವಸ್ಥೆಗಳಲ್ಲೂ ಶಿಕ್ಷಕ ಶಿಕ್ಷಣವು ಪ್ರತ್ಯೇಕವಾಗಿ ಉಳಿಯದಂತಿರಲು ಸಮಾಜ ವಿಜ್ಞಾನ, ವಿಜ್ಞಾನದ ನಿಕಾಯ, ಹಾಗೂ ಇತರ ಕ್ಷೇತ್ರಗಳಿಂದ ಶಿಕ್ಷಕರ ನೇಮಕಾತಿಯನ್ನು ಪ್ರೇರೇಪಿಸತಕ್ಕದ್ದು.

ಉನ್ನತ ಶಿಕ್ಷಣ

  • ಉನ್ನತ ಶಿಕ್ಷಣವು ಪ್ರಾಥಮಿಕವಾಗಿ “ಒಳ ಸಾಮಥ್ರ್ಯ”ವನ್ನು ವೃದ್ಧಿಪಡಿಸುವುದರತ್ತ ಕೇಂದ್ರೀಕೃತವಾಗಿರಬೇಕು. ಅಂದರೆ, ಒಂದು ಸಂಕೀರ್ಣವಾಗಿರುವ, ಪರಸ್ಪರ ಬೆರೆಯುವಿಕೆ ಇರುವ, ನಿರಂತರವಾಗಿ ಬದಲಾಗುತ್ತಿರುವ ಸಮಾಜದಲ್ಲಿ ಬದುಕುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವ ಶಿಕ್ಷಣದತ್ತ ಕೇಂದ್ರೀಕೃತವಾಗಿರಬೇಕು. ಒಳಸಾಮಥ್ರ್ಯಗಳೆಂದರೆ, ಕಲಿಕೆ, ಆಲಿಸುವುದು, ಬೆರೆಯುವುದು, ಸಂವಹನೆ ನಡೆಸುವುದು, ಕ್ರಿಯಾಶೀಲರಾಗಿರುವುದು, ಸಮಸ್ಯೆಗಳನ್ನು ಬಗೆಹರಿಸುವುದು, ಇತರ ಸಂಸ್ಕೃತಿ ಹಾಗೂ ಧರ್ಮಗಳನ್ನು ಅರ್ಥಮಾಡಿಕೊಳ್ಳುವುದು, ಇತ್ಯಾದಿ.
  • ಶಿಕ್ಷಣದ ಪಠ್ಯಕ್ರಮ ಮತ್ತು ಶಿಕ್ಷಣ ವಿಧಾನಗಳು ಬದಲಾಗಬೇಕು ಮತ್ತು ಹೊಸ ಉದ್ದೇಶಗಳಿಗೆ ಸರಿಹೋಗುವಂತೆ ಮಾರ್ಪಾಡು ಹೊಂದಬೇಕು. ಪಠ್ಯಕ್ರಮದಲ್ಲಿ ಹೆಚ್ಚಿನ ನಮ್ಯತೆ ಹಾಗೂ ಗುರು-ಶಿಷ್ಯರ ನಡುವೆ ಹೆಚ್ಚು ಬೆರೆಯುವಿಕೆ ಇರುವಂತೆ ಹೆಚ್ಚು ವ್ಯಕ್ತಿಗತವಾಗಿರುವಂತಿರಬೇಕು. ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ಕಲಿಕೆಯಾಗಿ ಉಳಿಯಬಾರದು. ಬದಲಾಗಿ, ಜ್ಞಾನದ ವರ್ಗಾವಣೆಯು ಒಂದು ಪ್ರಾಯೋಗಿಕ ಅನುಭವದೊಂದಿಗೆ ಸೇರಿರಬೇಕು.
  • ಎಲ್ಲ ಯುವ ಜನತೆಯ ಅಭಿವೃದ್ಧಿ ಎನ್ನುವುದು ರಾಷ್ಟ್ರದ ಜವಾಬ್ದಾರಿಯಾಗಿದೆ, ಅವು ರಾಜ್ಯ-ಸರಕಾರ ನಡೆಸುವ ಸಂಸ್ಥೆಯಾಗಿರಬಹುದು ಇಲ್ಲವೇ ಕೆಂದ್ರ ಸರಕಾರ ನಡೆಸುವ ಸಂಸ್ಥೆಯಾಗಿರಬಹುದು. ಹಾಗೂ ಇವೆರಡರÀ ನಡುವೆ ತಾರತಮ್ಯ ಸಲ್ಲದು. ಕೇಂದ್ರೀಯ ವಿಶ್ವವಿದ್ಯಾನಿಲಯಕ್ಕೆ ಅಗತ್ಯವೆಂದು ಪರಿಗಣಿಸುವ ಎಲ್ಲ ಅನುಕೂಲಗಳು ರಾಜ್ಯ ವಿಶ್ವವಿದ್ಯಾನಿಲಯಗಳಿಗೂ ಲಭ್ಯವಾಗಿರುವಂತಿರಬೇಕು (ಙPಅ 2009).
  • ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಖಾಸಗಿ ಪ್ರಯತ್ನಗಳು ಕೇವಲ ಲಾಭದ ದೃಷ್ಠಿಯಿಂದ ಮಾತ್ರವಾಗಿಲ್ಲ. ಅವು ತಮ್ಮನ್ನು ತಾವು ಲಾಭದಾಯಕ ಕ್ಷೇತ್ರಗಳಾದ ಮ್ಯಾನೇಜ್‍ಮೆಂಟ್, ಮೆಡಿಸಿನ್ ಮತ್ತು ಅಕೌಂಟ್ಸ್-ಇವುಗಳಿಗೆ ಸೀಮಿತಗೊಳಿಸಬೇಕು, ಆದರೆ, ಸಮಗ್ರ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವುದರ ಮೂಲಕ ಸಾಮಾಜಿಕ ಹಾಗೂ ಪ್ರಾಕೃತಿಕ ವಿಜ್ಞಾನಗಳ ಕ್ಷೇತ್ರಗಳ ಕಡೆಗೂ ಗಮನ ಹರಿಸಬೇಕು (ಙPಅ 2009).
  • ಉನ್ನತ ಶಿಕ್ಷಣ ವ್ಯವಸ್ಥೆಯು ಯಾವುದೇ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಬಹುಸಂಸ್ಕೃತಿಯ ಮಿಳಿತ ಹಾಗೂ ವೈವಿಧ್ಯತೆ ಇದ್ದೇ ಇರುತ್ತದೆ ಎನ್ನುವುದನ್ನು ಗುರುತಿಸಿ, ‘ಒಂದು ಅಳತೆ ಎಲ್ಲರಿಗೂ ಸೂಕ’್ತವಾಗುತ್ತದೆ ಎನ್ನುವ ಹಾದಿಯನ್ನು ದೂರವಿರಿಸಬೇಕು.
  • ಪ್ರತಿ ಮೂರು ವರ್ಷಗಳಿಗೊಮ್ಮೆ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮವನ್ನು ಮರುಪರಿಶೀಲಿಸಿ ನವೀಕರಿಸುವುದು ಅಗತ್ಯವಾಗಬೇಕು (ಓಏಅ, 2006).
  • ಗ್ರಹಣ ಶಕ್ತಿಯ ಬದಲಾಗಿ ಜ್ಞಾಪಕ ಶಕ್ತಿಗೆ ಹೆಚ್ಚು ಒತ್ತುಕೊಡುವ ಪರೀಕ್ಷಾ ಪದ್ಧತಿಯೊಂದಿಗೆ ಪೂರಕವಾಗಿ ಆಂತರಿಕ ಮೌಲ್ಯಮಾಪನವನ್ನು ಸೇರಿಸಿರಬೇಕು.
  • ವಿಶ್ವವಿದ್ಯಾಲಯಗಳಿಗೆ ನೀಡುವ ಪ್ರೋತ್ಸಾಹದಲ್ಲಿ ಬದಲಾವಣೆಗಳ ಮೂಲಕ ಲೋಕೋಪಕಾರೀ ದಾನಗಳ ಸಂಪ್ರದಾಯವನ್ನು ಉತ್ತೇಜಿಸಬೇಕು.
  • ಕೇಂದ್ರ ವಿಶ್ವವಿದ್ಯಾಲಯಗಳ ಅಭಿವೃದ್ಧಿಗೆ ಅನುದಾನ ನೀಡುವುದು, ನೂತನ ರಾಜ್ಯ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ಗುರುತಿಸುವಿಕೆ, ಖಾಸಗಿ ಹಾಗೂ ವಿಶ್ವ್ವವಿದ್ಯಾಲಯಗಳಾಗಲಿರುವ ಸಂಸ್ಥೆ(ಡೀಮ್ಡ್-ಟು-ಬಿಯುನಿವರ್ಸಿಟೀಸ್)ಗಳ ನಿಯಂತ್ರಣ, ಸಮುದಾಯ ಕಾಲೇಜುಗಳ ಸ್ಥಾಪನೆಗಳ ಮೂಲಕ ಯುಜಿಸಿಯು ಅವಕಾಶ ಹಾಗೂ ವಿಸ್ತರಣೆಯನ್ನು ಬೆಂಬಲಿಸುತ್ತಿದೆ. ಯುಜಿಸಿ ದತ್ತಾಂಶಗಳ ಪ್ರಕಾರ  ದೇಶದಲ್ಲಿ ಒಟ್ಟು 39,671 ಸರಕಾರೀ ಹಾಗೂ ಖಾಸಗಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ (2013-14ರ ದತ್ತಾಂಶಗಳು). ಇಂತಹ ಉನ್ನತ ಶಿಕ್ಷಣ ಸಂಸ್ಥೆಗಳ ಅಗತ್ಯ ಮತ್ತು ವಿಸ್ತರಣೆಯ ನಡುವೆ ಹೊಂದಾಣಿಕೆಯನ್ನು ಕಂಡುಕೊಳ್ಳುವ ಅವಶ್ಯಕತೆ ಇದೆಯಲ್ಲದೆ ಈ ಸಂಸ್ಥೆಗಳ ಗುಣಮಟ್ಟವನ್ನು ಪರೀಕ್ಷೆಗೊಳಪಡಿಸುವ ಅಗತ್ಯವಿದೆ.
  • ಸರಕಾರೀ ಅನುದಾನವು ಕೇಂದ್ರಬಿಂದುವಾಗಿಯೇ ಉಳಿಯುವುದರಿಂದ, ಸರಕಾರವು ಉನ್ನತ ಶಿಕ್ಷಣದಲ್ಲಿ ಈ ಬೆಂಬಲವನ್ನು ಹೆಚ್ಚಿಸಬೇಕು.
  • ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನೇ ಕೇಂದ್ರವಾಗಿರಿಸಿಕೊಂಡು ಉತ್ತಮ ಅನುದಾನವಿರುವ ಹಾಗೂ ವಿಸ್ತೃತವಾದ ರಾಷ್ಟ್ರೀಯ ವಿದ್ಯಾರ್ಥಿ ವೇತನದ ಯೋಜನೆಯೊಂದು ಕಾರ್ಯಗತವಾಗಬೇಕು.
  • ಕಲಿಸುವಿಕೆ-ಕಲಿಕೆಯ ಪ್ರಕ್ರಿಯೆಗೆ ಆಧಾರವಾಗಿರುವ ಮೂಲಭೂತ ಸೌಕರ್ಯಗಳಾದ ಪ್ರಯೋಗಾಲಯಗಳು, ಗ್ರಂಥಾಲಯಗಳು ಹಾಗೂ ಸಂವಹನ ತಂತ್ರಜ್ಞಾನ- ಇವುಗಳು ನಿಯಮಿತವಾಗಿ ನವೀಕರಿಸಲ್ಪಡುವ ಅಗತ್ಯವಿದೆ.
  • ಮಾನವಿಕ ಶಾಸ್ತ್ರ ಹಾಗೂ ಸಾಮಾಜಿಕ ವಿಜ್ಞಾನ ಕ್ಷೇತ್ರಗಳಲ್ಲಿ ಸಂಶೋಧನೆಗೆ ಹೆಚ್ಚಿನ ಅನುದಾನವನ್ನು ಸರಕಾರ ಸುಗಮಗೊಳಿಸಬೇಕು. ಇವು ವೈಯಕ್ತಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ರೂಢಿಸಿಕೊಳ್ಳುವಂತೆ ಜನತೆಯಲ್ಲಿ ಅರಿವನ್ನು ಮೂಡಿಸುತ್ತವೆ.
  • ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗಗಳ ಸಮುದಾಯಗಳು ನೆಲೆಸಿರುವ ಪ್ರದೇಶಗಳಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಉನ್ನತ ಶಿಕ್ಷಣದಲ್ಲಿ ಸಮಾನತೆ ಹಾಗೂ ಸಮಾನ ಅವಕಾಶವನ್ನು ಹೆಚ್ಚಿಸುವ ಗುರಿಯನ್ನು ರಾಷ್ಟ್ರೀಯ ಶಿಕ್ಷಣ ನೀತಿಯು ಹೊಂದಿರಬೇಕು.

Spread the love