ಮಂಗಳೂರು:  ಅಕ್ರಮ ಮರಳು ಸಾಗಾಟ, ದಾಳಿ       

ಮಂಗಳೂರು: ಅಕ್ರಮ ಮರಳು ಸಾಗಾಟ ವಿರುದ್ಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ 3 ಲಾರಿ ಹಾಗೂ 3 ಜೆಸಿಬಿಗಳನ್ನು ವಶಪಡಿಸಿದೆ.

ಮಂಗಳೂರು ಉಪವಿಭಾಗಾಧಿಕಾರಿ ಡಾ. ಅಶೋಕ್ ನೇತೃತ್ವದಲ್ಲಿ ಟಾಸ್ಕಫೋರ್ಸ್ ತಂಡವು, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಸಿ. ರೋಡ್ ಹಾಗೂ ಕೋಣಾಜೆ ಠಾಣಾ ವ್ಯಾಪ್ತಿಯ ನೆತ್ತಿಲಪದವು ಎಂಬಲ್ಲಿ ಮಂಗಳವಾರ ಬೆಳಿಗ್ಗೆ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ 16 ಚಕ್ರಗಳ 3 ಲಾರಿ ಹಾಗೂ 3 ಜೆಸಿಬಿಗಳನ್ನು ವಶಪಡಿಸಿದ್ದು, ಲಾರಿ ಮಾಲೀಕರು ಮತ್ತು ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 60 ಟನ್ ಮರಳನ್ನು ವಶಪಡಿಸಲಾಗಿದೆ. ಇದಲ್ಲದೇ ನೆತ್ತಿಲಪದವಿನಲ್ಲಿ ಅಕ್ರಮ ಮರಳು ಸಂಗ್ರಹ ಪತ್ತೆಯಾಗಿದ್ದು, ವಶಪಡಿಸಲಾಗಿದೆ.

ಈ  ಕಾರ್ಯಾಚರಣೆಯಲ್ಲಿ ಮಂಗಳೂರು ತಹಶೀಲ್ದಾರ್ ಶಿವಶಂಕರಮೂರ್ತಿ, ಗಣಿ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ನಾಗೇಂದ್ರಪ್ಪ, ಎಸಿಪಿ ಕಲ್ಯಾಣ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

Leave a Reply

Please enter your comment!
Please enter your name here