ಉಡುಪಿ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸತೀಶ್ ಅಮೀನ್ ಪಡುಕೆರೆ ನೇಮಕ

ಉಡುಪಿ: ಮೋಗವೀರ ಯುವ ನಾಯಕ ಸತೀಶ್ ಅಮೀನ್ ಪಡುಕೆರೆಯವರನ್ನು ಉಡುಪಿಯ ಶಾಸಕರಾದ   ಪ್ರಮೋದ್ ಮಧ್ವರಾಜ್‍ರವರ ಶಿಫಾರಸ್ಸಿನ ಮೇರೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್‍ನ ಅಧ್ಯಕ್ಷರೂ ಮತ್ತು ಕರ್ನಾಟಕ ಸರಕಾರದ ಗೃಹÀ ಸಚಿವರಾದ ಡಾ| ಜಿ. ಪರಮೇಶ್ವರ್‍ರವರು ತಕ್ಷಣಕ್ಕೆ ಜಾರಿಗೆ ಬರುವಂತೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿರುತ್ತಾರೆ.

sathish amin

ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆಯನ್ನು ಕಟ್ಟಿ ಸುಮಾರು 30 ಕ್ಕೂ ಹೆಚ್ಚು ಘಟಕಗಳನ್ನು ಜಿಲ್ಲೆಯಾದ್ಯಂತ ಸ್ಥಾಪಿಸಿ ಆ ಮೂಲಕ 12 ಸಾವಿರಕ್ಕೂ ಅಧಿಕ ಸದಸ್ಯರ ಕೋಟೆಯನ್ನು ಮೊಗವೀರ ಯುವಕ ಯುವತಿಯರನ್ನು ಒಂದೇ ಬಾವುಟದಡಿಯಲ್ಲಿ ತಂದ ಕೀರ್ತಿ ಸತೀಶ್ ಅಮೀನ್ ಪಡುಕೆರೆಗೆ ಸಲ್ಲುತ್ತದೆ. ತಾವೇ ಕಟ್ಟಿದ ಮೊಗವೀರ ಯುವ ಸಂಘಟನೆಯ ಮೂಲಕ ಉಚಿತ ಸಾಮೂಹಿಕ ವಿವಾಹ ಏರ್ಪಡಿಸಿ ಸುಮಾರು 59 ನವ ದಂಪತಿಗಳ ಜೊತೆ ತಾನೂ ವಿವಾಹವಾಗಿ ಮಾದರಿಯಾದವರು.

ಸಂಘಟನೆಯ ಆಶ್ರಯದಲ್ಲಿ ಎಲ್ಲಾ ನಾಡಿನ ಎಲ್ಲಾ ಜಾತಿಯ ಬಡವರಿಗೆ ಉಪಯುಕ್ತವಾಗುವ ಕಾರ್ಯಕ್ರಮಗಳನ್ನು ಹಾಕಿಕೊಂಡು ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್‍ಬುಕ್, ಹೆಲ್ತ್‍ಕಾರ್ಡ್, ರಕ್ತದಾನ ಶಿಬಿರ, ಮುಂತಾದ ಜನಪರ ಕಾರ್ಯಗಳನ್ನು ಸಂಘಟನೆಯಡಿ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪಡುಕೆರೆಯಲ್ಲಿ ಜನಿಸಿದ ಸತೀಶ್ ಅಮೀನ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಕುದ್ರುಕೆರೆಯ ಜಿ. ಪ. ಪ್ರಾಥಮಿಕ ಶಾಲೆಯಲ್ಲಿ ಪೂರೈಸಿ ಮೆಟ್ರಿಕ್ ಮತ್ತು ನಂತರದ ಶಿಕ್ಷಣವನ್ನು ಮಲ್ಪೆ ಫಿಶರೀಸ್ ಶಾಲೆಯಲ್ಲಿ ಹಾಗೂ ಬಿ.ಕಾಂ ಪದವಿಯನ್ನು ಉಡುಪಿಯ ಎಮ್.ಜಿ.ಎಮ್. ಕಾಲೇಜಿನಲ್ಲಿ ಪಡೆದಿರುತ್ತಾರೆ. ಪಡುಕೆರೆ ಗ್ರಾಮೀಣ ಯುವ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷರಾಗಿ, ಪಡುಕೆರೆ ಯುವಕ ಮಂಡಲದ ಮಾಜಿ ಅಧ್ಯಕ್ಷರಾಗಿ, ಮಲ್ಪೆ- ಪಡುಕೆರೆ ಸೇತುವೆ ಕಾಮಗಾರಿ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾಗಿ, ಪಡುಕೆರೆ ರಿಕ್ಷಾ ಚಾಲಕ ಮತ್ತು ಮಾಲಕರ ಸಂಘದ ಗೌರವಾಧ್ಯಕ್ಷರಾಗಿ, ಮಲ್ಪೆ ಡೀಪ್ ಸೀ ಟ್ರಾಲ್ ಬೋಟ್ ಮಾಲಿಕರ ಸಂಘದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರ ಅಧ್ಯಕ್ಷತೆಯ ಅವಧಿಯಲ್ಲಿ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸಾರ್ವತ್ರಿಕವಾಗಿ ಮೀನುಗಳನ್ನು ಎಲೆಕ್ಟ್ರಾನಿಕ್ ಸೇಲ್ (ವಿದ್ಯುತ್ಮಾನ ತೂಕ) ಮೂಲಕವೇ ಖರೀದಿಸುವಂತೆ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ.

1 Comment

Leave a Reply

Please enter your comment!
Please enter your name here