ದೆಹಲಿ ಕರ್ನಾಟಕ ಸಂಘದಿಂದ ಅದ್ದೂರಿಯ ಕರ್ನಾಟಕ ರಾಜ್ಯೋತ್ಸವ ಆಚರಣೆ

ದೆಹಲಿ: ದೆಹಲಿ ಕರ್ನಾಟಕ ಸಂಘವು 60ನೇ ಕರ್ನಾಟಕ ರಾಜ್ಯೋತ್ಸವವನ್ನು ದಿನಾಂಕ 29.11.2015ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಿತು. ಕಿಕ್ಕಿರಿದು ನೆರೆದಿದ್ದ ಕನ್ನಡಿಗರು ಸಮಾರಂಭದಲ್ಲಿ ಪಾಲ್ಗೊಂಡು-ಹಾಡಿ, ಕುಣಿದು, ಸಂತೋಷದಿಂದ ಮೈಮರೆತರು. ಹಿಂದಿನ 25ವರ್ಷಗಳಿಂದ ನೀಡುತ್ತಾ ಬಂದಿರುವ ‘ವಿಶಿಷ್ಟ ಕನ್ನಡಿಗ’ ಪ್ರಶಸ್ತಿ, ನಮ್ಮ ಕರ್ನಾಟಕ ಎಂಬ ಶೀರ್ಷಿಕೆಯಡಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಸ್ಥಳೀಯ ಕಲಾವಿದರು ತಮ್ಮ ಪ್ರತಿಭೆಯ ಸಾಗರವನ್ನೇ ತೆರೆದಿಟ್ಟಾಗ, ಕರ್ನಾಟಕದ ಮಾಜಿ ಮಂತ್ರಿಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ ರಾಜ್ಯದ ಮುಖ್ಯ ಆಯುಕ್ತರು ಶ್ರೀ ಪಿ.ಜಿ.ಆರ್. ಅವರ ಘನ ಅಧ್ಯಕ್ಷತೆಯಲ್ಲಿ, ಕನ್ನಡದ ವಿವಿಧ ಕವಿಪುಂಗವರುಗಳ ಗೀತ ಸಂಗೀತಕ್ಕೆ ಅತ್ಯಂತ ಲಯಬದ್ಧವಾದ ಸುಂದರ ಹಾಡು ಕುಣಿತಗಳು ನೆರೆದಿದ್ದ ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದವು. ಇಡೀ ಸಭಾಂಗಣದ ತುಂಬೆಲ್ಲಾ ಕನ್ನಡ ಬಾವುಟ ಹಾರಾಡಿ ಕನ್ನಡಾಂಬೆಯ ಜೈ ಜೈಕಾರ ಪ್ರತಿಧ್ವನಿಸಿತು.

dehliKannadiga_kannadarajyothsava 29-11-2015 17-14-23 dehliKannadiga_kannadarajyothsava 29-11-2015 17-15-28 dehliKannadiga_kannadarajyothsava 29-11-2015 17-38-04 dehliKannadiga_kannadarajyothsava 29-11-2015 17-44-37 dehliKannadiga_kannadarajyothsava 29-11-2015 18-07-42 dehliKannadiga_kannadarajyothsava 29-11-2015 18-41-49

ಸಂಘದ ಅಧ್ಯಕ್ಷ ಶ್ರೀ ವಸಂತ ಶೆಟ್ಟಿ ಬೆಳ್ಳಾರೆಯವರು ಅತಿಥಿಗಳನ್ನು ಹಾಗೂ ನೆರೆದವನ್ನು ಸ್ವಾಗತಿಸುತ್ತಾ, ಕನ್ನಡ ಭಾಷೆ ಮತ್ತು ಸಂಸ್ಕøತಿಗಳ ವಿವಿಧ ಕಲಾ ಪರಂಪರೆಗಳ ಉಳಿವು ಮತ್ತು ಬೆಳವಣಿಗೆಗಾಗಿ ದುಡಿಯಲು ದೆಹಲಿ ಕರ್ನಾಟಕ ಸಂಘ ಸದಾ ಕಂಕಣಬದ್ಧವಾಗಿದೆ ಎಂದರು. ಕರ್ನಾಟಕದಲ್ಲಿ ಇತ್ತೀಚೆಗೆ  ಕೇಳಿ ಬರುತ್ತಿರುವ ಕೆಲವು ಅಪಸ್ವರಗಳ ಬಗ್ಗೆ ನೋವನ್ನು ವ್ಯಕ್ತಪಡಿಸಿದ ಶೆಟ್ಟರು, ಯಾವುದೇ ಒಂದು ಭಾಷೆ ತನ್ನ ಅಭಿವೃದ್ಧಿಗಾಗಿ ಎಲ್ಲಾ ತರದ ಹೋರಾಟಗಳನ್ನು ಸಂವಿಧಾನಾತ್ಮಕವಾಗಿ ಮಾಡಬೇಕೇ ಹೊರತು ಪ್ರತ್ಯೇಕತೆಯ ಕೂಗು ಕೂಗುವುದು ಸಮಂಜಸವಲ್ಲ ಎಂದು ನುಡಿದರು.

ತಮ್ಮ ವೃತ್ತಿಯಲ್ಲಿ ಪುರುಸೊತ್ತು ಮಾಡಿಕೊಂಡು ಸದಾ ಕನ್ನಡಕ್ಕಾಗಿ ದುಡಿದು, ತುಡಿಯುತ್ತಲೇ ಇರುವ  ಇರ್ವರು ಕನ್ನಡ ಸುಪುತ್ರರಾದ ಶ್ರೀ ಬಿ.ಎನ್. ರಾವ್, ನಿವೃತ್ತ ಗ್ರಂಥಪಾಲಕರು, ಜೆ.ಎನ್.ಯು. ನವದೆಹಲಿ, ಶ್ರೀ ಕೆ.ದೇವಾನಂದ ಉಪಾಧ್ಯಾಯ, ನಿವೃತ್ತ ಮಹಾಪ್ರಬಂಧಕರು, ಸಿಂಡಿಕೇಟ್ ಬ್ಯಾಂಕ್ ಇವರಿಗೆ ವಿಶಿಷ್ಟ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡುತ್ತ ಶ್ರೀ ರಾವ್ ಅವರು ತಾವು ದೆಹಲಿಯಲ್ಲಿದ್ದ 40 ವರ್ಷಗಳ ಕಾಲ ದೆಹಲಿ ಕರ್ನಾಟಕ ಸಂಘದ ಜೊತೆಗೆ ಕಳೆದ ತಮ್ಮ ಅಮೂಲ್ಯ ಕ್ಷಣಗಳನ್ನು ಕೃತಜ್ಞತಾಪೂರ್ವಕವಾಗಿ ಸ್ಮರಿಸಿಕೊಂಡರು.

dehliKannadiga_kannadarajyothsava 29-11-2015 20-10-19 dehliKannadiga_kannadarajyothsava 29-11-2015 20-24-09 dehliKannadiga_kannadarajyothsava 29-11-2015 20-39-36 dehliKannadiga_kannadarajyothsava 29-11-2015 20-52-23 dehliKannadiga_kannadarajyothsava 29-11-2015 21-06-19 dehliKannadiga_kannadarajyothsava 29-11-2015 21-06-32

ಶ್ರೀ ಉಪಾಧ್ಯಾಯರು ಮಾತನಾಡುತ್ತ ನನಗೆ ದೊರೆತ ಈ ಗೌರವ ಅಭಿನಂದನೆ ನನ್ನ ಎಲ್ಲ ಸಾಧನೆಗಳಿಗೆ, ಕನ್ನಡ ಸೇವೆಗೆ ಸದಾ ಪ್ರೋತ್ಸಾಹಿಸುತ್ತಾ ಬಂದ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ ಎಲ್ಲ ನನ್ನ ಸಹ ಉದ್ಯೋಗಿಗಳಿಗೆ ಸಮರ್ಪಿಸುತ್ತಿದ್ದೇನೆ ಎಂದು ಅತ್ಯಂತ ವಿನಮ್ರದಿಂದ ನುಡಿದರು. ದೆಹಲಿ ಕರ್ನಾಟಕ ಸಂಘದ ನೂತನ ಸಾಂಸ್ಕøತಿಕ ಸಮುಚ್ಚಯನಿರ್ಮಾಣ ಸಂದರ್ಭದಲ್ಲಿ ತನಗೆ ದೆಹಲಿ ಕರ್ನಾಟಕ ಸಂಘದ ಹಲವಾರು ಕನ್ನಡ ಮಿತ್ರರೊಡನೆ ಬೆರೆತು ಕೆಲಸ ಮಾಡುವ ಅವಕಾಶ ದೊರೆತದ್ದನ್ನು ಬಹಳ ಹೆಮ್ಮೆಯಿಂದ ಸ್ಮರಿಸಿಕೊಂಡರು.

ಇದೇ ಸಂದರ್ಭದಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಆರು ಮಂದಿ ಅಂಗನವಾಡಿ ಕಾರ್ಯಕರ್ತೆಯರನ್ನು ಶ್ರೀ ಪಿ.ಜಿ.ಆರ್. ಸಿಂಧ್ಯಾ ಅವರು ಪುಷ್ಪಗುಚ್ಚ ಮತ್ತು ಸಂಘದ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀ ಪಿ.ಜಿ.ಆರ್. ಸಿಂಧ್ಯಾ ಅವರು ತಮ್ಮ ಸುದೀರ್ಘ ಅನುಭವದ ಫಲವಾಗಿ ಕನ್ನಡ ನಾಡು-ನುಡಿ, ಸಾಹಿತ್ಯ,  ಸಂಗೀತ, ನೃತ್ಯ, ನಾಟಕ, ಚಲನಚಿತ್ರ, ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕನ್ನಡಿಗರ ಕೊಡುಗೆ ಹಾಗೂ ಯಶಸ್ಸನ್ನು ಕೊಂಡಾಡಿ, ರಾಜ್ಯ, ದೇಶದಷ್ಟೇ ಅಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲಿ, ಅಮೇರಿಕ, ಆಸ್ಟ್ರೇಲಿಯಾ, ಫ್ರಾನ್ಸ್, ಜರ್ಮನಿ, ಕನ್ನಡಿಗರ ಸಾಧನೆ ಹಾಗೂ ಕನ್ನಡ ಅಭಿವೃದ್ಧಿಯಾಗುತ್ತಿರುವ ಬಗ್ಗೆ ಒಂದು ವಿಶ್ವಾವಲೋಖನವನ್ನೇ ಮಾಡಿಸಿದರು. ದೇಶದ ರಾಜಧಾನಿಯಲ್ಲಿ ದೆಹಲಿ ಕರ್ನಾಟಕ ಸಂಘವು ಸಮಸ್ತ ಕನ್ನಡಿಗರ ರಾಯಭಾರಿಯಾಗಿ ದೇಶ ಹಾಗೂ ವಿದೇಶಗಳಿಗೆ ಕನ್ನಡದ ಕಂಪನ್ನು ಹರಡಿಸುತ್ತಿರುವುದು ತುಂಬಾ ಶ್ಲಾಘನೀಯವಾದದ್ದು ಎಂದು ನುಡಿದರು.

ಸ್ಥಳೀಯ ಮಹಿಳಾ ಕಲಾವಿದರಿಂದ ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ, ‘ಹಚ್ಚೇವು ಕನ್ನಡದ ದೀಪ’ ಎಂಬ ಶ್ರೀಗಂಧ ಮಹಿಳಾ ತಂಡ ಗುರ್‍ಗಾಂವ್ ಇವರ ಸುಮಧುರ ಹಾಡಿನ ಮಧ್ಯೆ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆಯಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀ ಸಿ.ಎಂ. ನಾಗರಾಜ ಅವರು ವಂದನಾರ್ಪಣೆ ಸಲ್ಲಿಸಿದರು, ಕಾರ್ಯಕಾರಿ ಸಮಿತಿ ಸದಸ್ಯ ಶ್ರೀ ಸಖಾರಾಮ ಉಪ್ಪೂರು ಅವರು ಬಹಳ ಚೇತೋಹಾರಿಯಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.

ಸಭಾ ಕಾರ್ಯಕ್ರಮದ ನಂತರ ಶ್ರೀ ಸಿ.ಎಂ. ನಾಗರಾಜ ಅವರು ಅತ್ಯಂತ ಮುತುವರ್ಜಿಯಿಂದ ಸಂಯೋಜಿಸಿದ ಸಾಂಸ್ಕøತಿಕ ಕಾರ್ಯಕ್ರಮ ಬಹಳ ಅದ್ಭುತವಾಗಿ ಮೂಡಿಬಂದಿತು. ಶ್ರೀಮತಿ ಪೂಜಾ ಪಿ. ರಾವ್ ಅವರು ಬಹಳ ವಿನೂತನವಾಗಿ ನಡೆಸಿಕೊಟ್ಟ ಈ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ 14ತಂಡಗಳ ಸುಮಾರು 100ಕ್ಕೂ ಹೆಚ್ಚು ಸ್ಥಳೀಯ ಪ್ರತಿಭೆಗಳು ಬಹಳ ಅರ್ಥಗರ್ಭಿತವಾಗಿ ಪ್ರತಿಬಿಂಬಿಸಿದವು.ಅಚ್ಚುಕಟ್ಟಾದ ನೃತ್ಯ ಸಂಯೋಜನೆ, ರಂಗಸಜ್ಜಿಕೆ, ವಸ್ತ್ರಾಲಂಕಾರ, ಬೆಳಕು, ಸಂಗೀತ ವಿವಿಧ ರಂಗ ಪರಿಕರಗಳನ್ನು ಉಪಯೋಗಿಸಿಕೊಂಡು ಈ ಕಲಾವಿದರು ತಾವು ಯಾವುದೇ ವೃತ್ತಿಪರ ಕಲಾವಿದರುಗಳಿಗೆ ಕಡಿಮೆಯಿಲ್ಲ ಎಂದು ಸಾರಿ ಮೆರೆದರು.ಹಾಡು ಕುಣಿತಗಳ ಮಧ್ಯೆ ನೆರೆದಿದ್ದ ಸಭಿಕರನ್ನು ಸಂದರ್ಭೋಚಿತವಾದ ರಸಪ್ರಶ್ನೆಗಳ ಮೂಲಕ ಹಿಡಿದಿಟ್ಟ ರೀತಿ ಅವರ್ಣನೀಯ.

ಸ್ಥಳೀಯ ಕಲಾವಿದರಾದ ಶ್ರೀ ಚೆನ್ನು ಎಸ್. ಮಠದ ಅವರ ಕುಂಚದಿಂದ ಮೂಡಿ ಬಂದ ತಾಯಿ ಭುವನೇಶ್ವರಿಯ ಸುಂದರವಾದ ತೈಲ ಚಿತ್ರ, ಮಲ್ಲಿಗೆ,ಸೇವಂತಿಗೆ ಹೂವಿನ ಹಾರಗಳಿಂದ ಸಭಾಂಗಣದಲ್ಲಿ ರಾರಾಜಿಸುತ್ತಿತ್ತು.

ಪುಟಾಣಿಗಳ ಅ,ಆ,ಇ,ಈ. . . ಕನ್ನಡ ಅಕ್ಷರಮಾಲೆಯಿಂದ ಶುರುವಾಗಿ, ಎಲ್ಲಾದರೂ ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಗೆ ತಾಳ, ಲಯಬದ್ಧವಾಗಿ ನರ್ತಿಸಿ ಕನ್ನಡಾಂಬೆಯನ್ನು ರಂಗದ ಮೇಲೆ ಪ್ರತ್ಯಕ್ಷವಾಗಿ ಆಹ್ವಾನಿಸಿದಂತಹ ಅನುಭವ ಕಾವೇರಿಯ ವೈಯ್ಯಾರ, ಜೋಗದ ಜಲಪಾತದ ಧುಮುಕುವಿಕೆ, ಒಂದೆಡೆಯಾದರೆ ಕಾಡಕಿರಾತರ ರೂಪದಲ್ಲಿ ಕನ್ನಡಾಂಬೆಯನ್ನು ಪೂಜಿಸುವ ಗಂಭೀರ ನೃತ್ಯ ಇನ್ನೊಂದೆಡೆ ಇದೆಲ್ಲದಕ್ಕೂ ಕಲಶವಿಟ್ಟಂತೆ ಕಂಸಾಳೆ, ಭೂತಕೋಲ ಹಾಗೂ ಹುಲಿವೇಷ ನೃತ್ಯಗಳನ್ನೊಳಗೊಂಡ ಅಮೋಘ ನೃತ್ಯ ದರ್ಶನ ಮರೆಯಲಾಗದ ಕ್ಷಣಗಳಾಗಿದ್ದವು.

Leave a Reply

Please enter your comment!
Please enter your name here