ಮಂಗಳೂರು: ಪ್ರಸೂತಿ ವೇಳೆ ರೋಗಿಯ ಸುರಕ್ಷತೆಯ ಬಗ್ಗೆ ಕಾರ್ಯಾಗಾರ

ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು,  ಇಂದು ಪತ್ರಿಕಾ ಗೋಷ್ಠಿಯನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.

ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವಿಭಾಗವು ಇದೇ ಡಿಸೆಂಬರ್ 6ರಂದು “ಪ್ರಸೂತಿ ವೇಳೆ ರೋಗಿಯ ಸುರಕ್ಷತೆ” ಎಂಬ ವೈದ್ಯಕೀಯ ಸಮಾವೇಶವನ್ನು ಕಾಲೇಜು ಆವರಣದಲ್ಲಿ ಆಯೋಜಿಸಿದೆ.

ವೈಜ್ಞಾನಿಕ ಸುಧಾರಣೆಗಳಿಂದಾಗಿ ಹೊಸಹೊಸ ಆಧುನಿಕ ಔಷಧಿಗಳ ಅವಿಷ್ಕಾರಗಳಾಗುತ್ತಿದ್ದು ಇವುಗಳಿಂದಾಗಿ ಆರೋಗ್ಯದ ಪರಿಣಾಮಗಳೂ ಗಣನೀಯವಾಗಿ ಸುಧಾರಿಸಲ್ಪಟ್ಟಿರುವುದಲ್ಲದೆ ರೋಗಿಯ ಸುರಕ್ಷತೆ ಜೊತೆಗೆ ಕೆಲವು ಅಡ್ಡಪರಿಣಾಮಗಳನ್ನೂ ಹೊಂದಿವೆ.

ರೋಗಿಯ ಸಂರಕ್ಷಣೆ ಜಾಗತಿಕ ಮತ್ತು ಪ್ರಾದೇಶಿಕವಾಗಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದು ಎಲ್ಲಾ ರೀತಿಯ ಆರೋಗ್ಯ ಸೇವಾ ವ್ಯವಸ್ಥೆಗಳನ್ನು ಭಾದಿಸುತ್ತಿರುತ್ತದೆ. ಬಹುತೇಕವಾದ ಆರೋಗ್ಯ ದೋಷಗಳನ್ನು ತಡೆಗಟ್ಟಬಹುದಾಗಿದೆ. ರೋಗಿಯ ಸುರಕ್ಷತೆಯೇ  ಆರೋಗ್ಯ ಸೇವಾ ಸಿಬ್ಬಂದಿಗಳ ಪ್ರಮುಖ ಗುರಿಯಾಗಿದೆ.

ಈ ಸಮಾವೇಶವು, ಮಾನ್ಯತೆ ಕ್ಷೇತ್ರದ ದಿಗ್ಗಜರಾದ NABH ಮತ್ತು AHPI ಸಂಸ್ಥೆಯ ಅನುಮೋದನೆಯನ್ನು ಹೊಂದಿದೆ. ಈ ಸಮಾವೇಶವನ್ನು ಮಂಗಳೂರಿನ ಜಿಲ್ಲಾಧಿಕಾರಿ ಶ್ರೀ ಎ.ಬಿ ಇಬ್ರಾಹಿಂ ಅವರು ಉದ್ಘಾಟಿಸಲಿರುವರು.

ಈ ಸಮಾವೇಶವು ವೈದ್ಯಕೀಯ ಕ್ಷೇತ್ರದಲ್ಲಿ ಸೇವೆಗೈಯುತ್ತಿರುವ ಎಲ್ಲಾ ವೈದ್ಯರುಗಳಿಗೆ, ಪ್ರಸೂತಿ, ಮಕ್ಕಳ ತಜ್ಞರಿಗೆ, ಆರೋಗ್ಯ ನಿರ್ವಾಹಕರಿಗೆ ಮತ್ತು ಶುಶ್ರುಷಾ ಸಿಬ್ಬಂದಿಯವರಿಗೆ ತುಂಬಾ ಸಹಕಾರಿಯಾಗಬಲ್ಲುದು.

ಪತ್ರಿಕಾಗೋಷ್ಠಿಯಲ್ಲಿ ಡಾ| ಪ್ರೇಮ ಡಿಕುನ್ಹಾ ,  ಸಂಯೋಜನಾ ಅಧ್ಯಕ್ಷರು , ಡಾ| ಜೋಯ್ಸಿ ವಾಸ್ , ಸಂಯೋಜನಾ ಕಾರ್ಯದರ್ಶಿ, ಡಾ| ಅಲ್ವೀರಾ ಡಿಸೋಜಾ,  ಖಜಾಂಚಿ ಇವರು ಉಪಸ್ಥಿತಿತರಿದ್ದರು.

Leave a Reply