ಮಂಗಳೂರು: ದೀಕ್ಷಾ ಪಾಲ್: ಪಿಯು ಬೋರ್ಡ್ ಪರೀಕ್ಷೆಗಳಲ್ಲಿ  ಉತ್ತಮ ಅಂಕಗಳನ್ನು ಗಳಿಸಲು ಸಹಾಯ ಮಾಡುವ ಮೊಬೈಲ್ ಆಪ್‌ ಗೆಳೆಯ

ಮಂಗಳೂರು: ಪಿಯು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತರಬೇತಿಯಲ್ಲಿ ಒಂದು ವಿಶ್ವಾಸಾರ್ಹ ಹೆಸರಾದ ದೀಕ್ಷಾ ಬೋರ್ಡ್ ಪರೀಕ್ಷೆಗಳ ತಯಾರಿಯಲ್ಲಿ ವಿದ್ಯಾರ್ಥಿಗಳಿಗೆ ನೆರವಾಗುವ ದೀಕ್ಷಾ ಪಾಲ್ ಎನ್ನುವ ಆಂಡ್ರಾಯ್ಡ್ ಆಪ್‌ ಅನ್ನು ಬಿಡುಗಡೆ ಮಾಡಿದೆ. ಈ ಬಿಡುಗಡೆ ಮೊಬೈಲ್ ಅಪ್ಲಿಕೇಷನ್‌ಗಳ ವಿಭಾಗದಲ್ಲಿ ಸಂಸ್ಥೆಯ ದಾಖಲಿಕೆಯನ್ನು ಗುರುತಿಸುತ್ತದೆ.
ಹಿನ್ನೆಲೆ
ಎರಡು ದಶಕಗಳ ಉದ್ಯಮದ ಅನುಭವವಿರುವ ದೀಕ್ಷಾ, ಸಮಗ್ರವಾದ ಮತ್ತು ಮೌಲ್ಯಾಧಾರಿತ ಶಿಕ್ಷಣವನ್ನು ನೀಡಲು ಬದ್ಧವಾಗಿದೆ. ಇದು ಅವರಿಗೆ ಶಾಲಾ ವಿದ್ಯಾರ್ಥಿಗಳ ವಿಕಸನದ ಅಗತ್ಯಗಳನ್ನು ಪೂರೈಸುವ ನವೀನ ಕಲಿಕಾ ಉಪಕರಣಗಳು ಮತ್ತು ಉತ್ಪನ್ನಗಳನ್ನು ನೀಡುವಂತೆ ಪ್ರೇರೇಪಿಸಿದೆ.
“ಬೋರ್ಡ್ ಪರೀಕ್ಷೆಗಳ ತಯಾರಿ ಸಾಮಾನ್ಯವಾಗಿ ತರಗತಿಗಳು ಅಥವಾ ಟ್ಯೂಷನ್ ಮತ್ತು ತರಬೇತಿ ಕೇಂದ್ರಗಳ ಮೂಲಕ ನೀಡಲಾದ ವಿಷಯಗಳಿಗೆ ಸೀಮಿತವಾಗಿರುತ್ತದೆ. ಕಲಿಕೆ ಮತ್ತು ಅಭ್ಯಾಸಗಳು ಪುಸ್ತಕಗಳು ಮತ್ತು ಉಲ್ಲೇಖ ವಸ್ತುಗಳ ಮೂಲಕ ಉಂಟಾಗುತ್ತದೆ. ಆದರೆ, ಇಂದು ಅನೇಕ ವಿದ್ಯಾರ್ಥಿಗಳು ಸ್ವಂತ ಮೊಬೈಲ್ ಸಾಧನಗಳನ್ನು ಹೊಂದಿದ್ದು ಇದು ವಿಷಯದ ವಿತರಣೆ ಹಾಗೂ ಪರೀಕ್ಷೆಯ ತಯಾರಿಕೆಯ ವಸ್ತುಗಳಾಗಿ ಚೆನ್ನಾಗಿ ಸೇವೆ ಸಲ್ಲಿಸುತ್ತವೆ. ದೀಕ್ಷಾ ಪಾಲ್ ವಿದ್ಯಾರ್ಥಿಗಳ ಜೊತೆ ಉತ್ತಮ ಸಂಪರ್ಕ ಹೊಂದಲು ಮತ್ತು ಅವರಿಗೆ ಪರಿಣಾಮಕಾರಿಯಾದ ಮತ್ತು ಬಳಕೆದಾರ ಸ್ನೇಹಿ ಕಲಿಕೆಯ ಸಾಧನವನ್ನು ನೀಡಲು ಈ ಅವಕಾಶವನ್ನು ಬಳಳಸಿಕೊಳ್ಳುತ್ತದೆ,” ಎಂದು ಏಸ್ ಕ್ರಿಯೇಟಿವ್ ಲರ್ನಿಂಗ್ ಮತ್ತು ದೀಕ್ಷಾದ ಸಹ ಸಂಸ್ಥಾಪಕ ಮತ್ತು ಕಾರ್ಯಕಾರಿ ನಿರ್ದೇಶಕರಾದ ಲಲಿತ್ ಶ್ರೀಧರ್ ಹೇಳಿದರು.
ಉತ್ಪನ್ನ
ದೀಕ್ಷಾ ಪಾಲ್ ಒಂದು ಆಂಡ್ರಾಯ್ಡ್ ಮೊಬೈಲ್ ಆಪ್‌ ಮತ್ತು ಕರ್ನಾಟಕದ 2ನೇ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಅಭಿವೃದ್ಧಿಪಡಿಸಲಾದ ಸಮಗ್ರವಾದ, ಪರೀಕ್ಷೆಯ ತಯಾರಿಯ ಸಾಧನವಾಗಿದೆ. ಪ್ರಸ್ತುತ ಇದು ಕರ್ನಾಟಕ ಪಿಯು ಪಠ್ಯಕ್ರಮದಲ್ಲಿ ಸೂಚಿಸಲಾದ ವಿಜ್ಞಾನ ವಿಷಯಗಳು ಮತ್ತು ಭಾಷೆಗಳಿಗೆ (ಕನ್ನಡ, ಹಿಂದಿ, ಸಂಸ್ಕೃತ ಮತ್ತು ಇಂಗ್ಲೀಷ್) ಪಾಠಗಳು ಮತ್ತು ಪ್ರಶ್ನೆ ಬ್ಯಾಂಕ್‌ಗಳನ್ನು ಒಳಗೊಂಡಿದೆ. ಈ ಆಪ್‌ ಬೋರ್ಡ್ ಪರೀಕ್ಷೆಗಳಲ್ಲಿ ಉತ್ತಮ ತಯಾರಿ ಮತ್ತು ಯಶಸ್ಸಿಗಾಗಿ ತಯಾರಾಗಿದ್ದು, ಮತ್ತು ಈ ವಿಭಾಗದಲ್ಲಿ ತಂತ್ರಜ್ಞಾನ ಆಧಾರಿತ ಶಿಕ್ಷಣ ಮಾರುಕಟ್ಟೆಯಲ್ಲಿರುವ ಏಕಮಾತ್ರ ಆಪ್‌ ಆಗಿದೆ.
ದೀಕ್ಷಾ ಪಾಲ್ ಅನ್ನು ಬೋರ್ಡ್ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆಯನ್ನು ತಯಾರಿಸುವಲ್ಲಿ ಅಪಾರ ಅನುಭವ ಹೊಂದಿರುವ ಶಿಕ್ಷಕರಿಂದ ರಚಿಸಲಾಗಿದೆ. ಈ ಆಪ್‌ ಅನ್ನು ವಿದ್ಯಾರ್ಥಿ ಸ್ನೇಹಿ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಅವರ ಅಗತ್ಯಗಳ ಪ್ರಕಾರ ವೈಯಕ್ತಿಕಗೊಳಿಸಿದ ಅಧ್ಯಯನದ ಯೋಜನೆಯನ್ನು ರಚಿಸಲು ಅವಕಾಶ ನೀಡುತ್ತದೆ. ಇದು ಅವರಿಗೆ ಅಧ್ಯಯನದ ವೇಗವನ್ನು ಹೊಂದಿಸಿಕೊಳ್ಳಲು ಅನುಮತಿ ನೀಡುತ್ತದೆ ಹಾಗೂ ವಿದ್ಯಾರ್ಥಿಗಳಿಗೆ ಒಂದು ಗ್ರಾಹಕೀಕೃತ ಸ್ನೇಹಿತನಂತೆ ವರ್ತಿಸುತ್ತದೆ.
ಆಪ್‌ ಕೆಳಗಿನಂಥ ಹಲವಾರು ಉತ್ತೇಜಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ:
• ತೊಂದರೆಯ ಮಟ್ಟದ ಪ್ರಕಾರ ಆಯೋಜಿಸಿದ ಪ್ರಶ್ನೆ ಬ್ಯಾಂಕುಗಳು
• ಅಂಕ ಯೋಜನೆ ಮತ್ತು ಉತ್ತರಗಳ ವಿವರವಾದ ವಿವರಣೆ
• ಪ್ರತಿ ಅಧ್ಯಾಯಕ್ಕೂ ವಿವರಿಸುವ ವೀಡಿಯೊ ವ್ಯಾಖ್ಯಾನ
• ಅಂಕ ಯೋಜನೆಯ ಬುಕ್‌ಮಾರ್ಕ್, ಮರುಭೇಟಿ ಮತ್ತು ವಿವರಣೆಗೆ ಉಪಯುಕ್ತ ಸಾಧನ

ಪ್ರಸ್ತುತ ಬೀಟಾ ಆವೃತ್ತಿಯಲ್ಲಿರುವ ದೀಕ್ಷಾ ಪಾಲ್ ಕರ್ನಾಟಕದಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಲಭ್ಯವಿದೆ ಮತ್ತು ಗೂಗಲ್ ಪ್ಲೇ ಸ್ಟೋರ್‌ನಿಂದ ಇದನ್ನು ಅಳವಡಿಸಬಹುದಾಗಿದೆ.

Leave a Reply

Please enter your comment!
Please enter your name here