ಯೋಗದಿಂದ ನೆಮ್ಮದಿಯ ಜೀವನ ಸಾಧ್ಯ – ರೆ ಫಾ ವಿಲ್ಸನ್ ಡಿಸೋಜಾ

ಮಂಗಳೂರು: ಯೋಗವು ಆರೋಗ್ಯಕ್ಕೆ ಮತ್ತು ಏಕಾಗ್ರತೆಗೆ ಅತ್ಯುತ್ತಮ ಮಾರ್ಗವಾಗಿರುವುದರಿಂದ ನೆಮ್ಮದಿಯ ಬದುಕಿಗೆ ಇದು ದಾರಿದೀಪವಾಗಬಲ್ಲುದು ಎಂದು ಶಿಕ್ಷಣ ತಜ್ಞ ರೆ.ಫಾ.ವಿಲ್ಸನ್ ಎಲ್ ವಿಟಸ್ ಡಿಸೋಜಾ ಹೇಳಿದರು.

image002yoga-camp-20160331-002

ಅವರು ಬಿಜೈನಲ್ಲಿರುವ ಲೂಡ್ರ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಶಿಕ್ಷಕರಿಗಾಗಿ ಆಯೋಜಿಸಿರುವ ಪತಂಜಲಿ ಯೋಗ ಶಿಬಿರವನ್ನು ಉದ್ಘಾಟಿಸಿ ಮಾತಾಡುತ್ತಿದ್ದರು. ಯೋಗವು ಶರೀರಕ್ಕೆ ಆರೋಗ್ಯವನ್ನು, ಮನಸ್ಸಿಗೆ ಆನಂದವನ್ನು ಕೊಡಬಲ್ಲ ದಿವ್ಯವಾದ ಔಷಧ ಎಂಬುದನ್ನು ವಿವರಿಸಿದ ಅವರು ಇದನ್ನು ಶಿಕ್ಷಕರಿಗೆ ಆಯೋಜಿಸಿದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಂಸ್ಥೆಯ ಪ್ರಾಂಶುಪಾಲ ರೆ ಫಾ ರೋಬರ್ಟ್ ಡಿಸೋಜಾ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಯೋಗ ಶಿಕ್ಷಕ ಎಂ ಜಗದೀಶ ಶೆಟ್ಟಿ ಬಿಜೈ ಇವರನ್ನು ಸನ್ಮಾನಿಸಲಾಯಿತು. ಯೋಗ ಶಿಬಿರದ ಪ್ರಯೋಜನಗಳ  ಬಗ್ಗೆ ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್ ಸುಬ್ರಾಯ ಭಟ್ ಮಾತಾಡಿದರು.

image001yoga-camp-20160331-001

ಉಪ ಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಶುಭ ಹಾರೈಸಿದರು. ಶ್ರೀಮತಿ ಅಫೊಲಿನ್ ಲೋಬೋ ನಿರೂಪಿಸಿದರು. ವೀರೇಂದ್ರ ಆಳ್ವ ವಂದಿಸಿದರು.

Leave a Reply