ದೊರೆಸ್ವಾಮಿ ದಂದ್ವ ನೀತಿಗೆ ರೈತ ಬಲಿ – ಕೆಪಿಸಿಸಿ ಕಿಸಾನ್ ಘಟಕ

ಬೆಂಗಳೂರು: ಕೆಪಿಸಿಸಿ ಕಿಸಾನ್ ಘಟಕದ ವತಿಯಿಂದ ಎಪ್ರೀಲ್ 2 ರಂದು ಜಯನಗರದ ಅಶೋಕ ಪಿಲ್ಲರ್ ನಿಂದ ಜಯನಗರದ 18ನೇ ಅಡ್ಡರಸ್ತೆ ಯಲ್ಲಿ ಇರುವ ದೊರೆಸ್ವಾಮಿ ಅವರ ನಿವಾಸದ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು

dore-swami-kpcc-kisan

ಈ ಪಾದಯಾತ್ರೆ ಉದ್ದೇಶ ದೊರೆಸ್ವಾಮಿ ಅವರು ರೈತರು ಕೃಷಿ ಕಾರ್ಮಿಕರು ಮಾಡಿರುವ ಒತ್ತುವರಿ ಜಮೀನನ್ನು (ಆದರೆ ಇದು ಒತ್ತುವರಿ ಅಲ್ಲ – ಅಕ್ರಮ ಸಕ್ರಮ ಅಡಿಯಲ್ಲಿ ವ್ಯವಸಾಯ ಮಾಡುತ್ತಿರುವ ಜಮೀನು) ವಶಕ್ಕೆ ತೆಗೆದುಕೊಳ್ಳಲು ವಿಶೇಷ ಕೋರ್ಟ್ ಸ್ಥಾಪಿಸಿ ಆ ಮೂಲಕ ಈ ಜಮೀನು ಸರ್ಕಾರ ವಶಪಡಿಸಿಕೊಳ್ಳಲು ಆಗ್ರಹಿಸುತ್ತಿದ್ದಾರೆ. ಇದನ್ನು ದೊರೆಸ್ವಾಮಿ ಅವರಿಗೆ ಮನವರಿಕೆ ಮಾಡಿಕೊಟ್ಟು, ಈ ವಿಷಯದಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಅವರ ಮನ ಪರಿವರ್ತನೆ ಮಾಡಿ ರಾಜ್ಯದ ರೈತರ ಪರ ನಿಲ್ಲಬೇಕೆಂದು ಮನವಿ ಸಲ್ಲಿಸಲಾಯಿತು ನೂರಾರು ಕಿಸಾನ್ ನಾಯಕರು ಬಾಗವವಹಿಸಿದ್ದರು ಸುಮಾರು ಒಂದು ತಾಸುಗಳ ವರೆಗೆ ಅವರ ಮನೆಯಲ್ಲಿ ದೊರೆಸ್ವಾಮಿಯವರ ಹಟ ದಿಂದ ರೈತರಿಗೆ ಹಾಗೂ ಕಾರ್ಮಿಕರಿಗೆ ಅಗುವ ತೊಂದರೆ ಬಗೆ ವಿವರಣೆ ನಿಡಿದ್ದು, ಮತು ನಿಮ್ಮ ನಿಲುವಿನಿಂದ ನಕ್ಸಲ್ ಸಮಸ್ಯೆ ಹೆಚ್ಚುತ್ತಿದ್ದು ತಮ್ಮ ಹೊರಾಟದ ದಿಕ್ಕನ್ನು ಬದಲಾಯಿಸುವಂತೆ ಒತ್ತಾಯಿಸಲಾಯಿತು. ಇದಕ್ಕೆ ಒಪ್ಪದೆ ಹೋದಲ್ಲಿ ಮುಂದೆ ದೊರೆಸ್ವಾಮಿ ವಿರುದ್ದ ಹೋರಾಟ ನಡೆಲಾಗುವುದು ಎಂದಾಗ ಕಾರ್ಯಕರ್ತರ ಮನವಿಗೆ ಮೂರು ದಿನಗಳ ವಳಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರ ಮಾಡುವ ಭರವಸೆ ನೀಡಿದರು.

Leave a Reply

Please enter your comment!
Please enter your name here