ಕ್ರೈಸ್ತ ಅಲ್ಪಸಂಖ್ಯಾತರ ಸಮುದಾಯದವರಿಗೆ ಸಿಗುವ ಸವಲತ್ತುಗಳು

ಮ0ಗಳೂರು :- ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವತಿಯಿಂದ ಕ್ರೈಸ್ತ ಅಲ್ಪಸಂಖ್ಯಾತರ ಸಮುದಾಯದವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳು ಹಾಗೂ ಅವುಗಳನ್ನು ಪಡೆದು ಕೊಳ್ಳಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಏ. 17 ರಂದು ಪೂರ್ವಾಹ್ನ 10 ಘಂಟೆಗೆ ಮಾಹಿತಿ ಶಿಬಿರವು ಶಾಂತಿ ಕಿರಣ್, ಬಜ್ಜೋಡಿ ಮಂಗಳೂರು ಇಲ್ಲಿ ಏರ್ಪಡಿಸಲಾಗಿರುತ್ತದೆ.

ಮಾಹಿತಿ ಶಿಬಿರಕ್ಕೆ ಶಾಸಕರು, ಕರ್ನಾಟಕ ವಿದಾನ ಪರಿಷತ್ತು, ಐವನ್ ಡಿಸೋಜ, ಹಾಗೂ ಕ್ರೈಸ್ತ ಅಲ್ಪಸಂಖ್ಯಾತರ ಸದಸ್ಯ ಭಾಸ್ಕರ್ ಚಂದನ್, ಇವರು ಭಾಗವಹಿಸಲಿದ್ದಾರೆ. ಕ್ರೈಸ್ತ ಸಮುದಾಯದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಮಾಹಿತಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣಾಧಿಕಾರಿ, ಪ್ರಕಟಣೆ ತಿಳಿಸಿದೆ.

Leave a Reply