ವೇಶ್ಯಾವಾಟಿಕೆ ಕೇಂದ್ರಗಳಿಗೆ ಧಾಳಿ ; ನಾಲ್ವರ ಬಂಧನ

ಮಂಗಳೂರು: ವೇಶ್ಯಾವಾಟಿಕೆಗೆ ನಡೆಸುತ್ತಿದ್ದ ಕೇಂದ್ರಗಳಿಗೆ ಮಂಗಳೂರು ಉತ್ತರ ಮತ್ತು ದಕ್ಷಿಣ ಪೋಲಿಸರು ಧಾಳಿ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಪೋಲಿಸ್ ಮೂಲಗಳ ಪ್ರಕಾರ ಎರಡು ಠಾಣೆಗಳ ಪೋಲಿಸರಾದ ಶಾಂತರಾಮ್ ಮತ್ತು ಅವರ ತಂಡ ಹಳೆ ಕೆಂಟ್ ರಸ್ತೆಯಲ್ಲಿರುವ ಕರುಣಾ ಲಾಡ್ಜಿಗೆ ಧಾಳಿ ನಡೆಸಿದ ವೇಳೆ ವ್ಯಕ್ತಿಯೋರ್ವರು ನಡೆಸುತ್ತಿದ್ದ ವೇಶ್ಯಾವಾಟಿಕೆ ಕೇಂದ್ರದಿಂದ ಗ್ರಾಹಕರನ್ನು ಬಂಧಿಸುವುದರೊಂದಿಗೆ ರೂ 1300 ನಗದು ವಶಪಡಿಸಿಕೊಂಡಿರುತ್ತಾರೆ.

ಬಂಧತರನ್ನು ಪುತ್ತೂರಿನ ಮಾಧವ (31) ಹಾಗೂ ಕೇರಳದ ಗ್ರಾಹಕ ಶಿವಾನಂದನ್ (45) ಎಂದು ಗುರುತಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪಾಂಡೇಶ್ವರ ಪೋಲಿಸರು ನಗರದ ಮೈತ್ರಿ ಲಾಡ್ಜಿಗೆ ಧಾಳಿ ನಡೆಸಿ ನಾಗಪ್ಪಯ್ಯ (40) ಹಾಗೂ ಮಹಿಳೆಯೋರ್ವಳನ್ನನ್ನು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿ ಕುಂದಾಪುರದ ನಾಗಪ್ಪಯ್ಯ ಹಾಗೂ ಲಾಡ್ಜಿನ ವ್ಯವಸ್ಥಾಪಕ ಲಕ್ಷ್ಮೀಕಾಂತ್ ಎಂದು ಗುರುತಿಸಲಾಗಿದೆ. ಇಬ್ಬರನ್ನೂ ಕೂಡ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಧಾಳಿಯಲ್ಲಿ ಇನ್ಸ್ ಪೆಕ್ಟರ್ ಶಾಂತಾರಾಮ್, ಶೋಭಾ, ಪುಷ್ಪಾರಾಣಿ, ರೇಶ್ಮಾ ಹಾಗೂ ಮೋಹನ್ ಭಾಗವಹಿಸಿದ್ದರು.

Leave a Reply