ಶ್ರವಣಬೆಳಗೊಳದಲ್ಲಿ ಮಕ್ಕಳನ್ನ ಕರೆದೊಯ್ಯುತ್ತಿದ್ದ ವಾಹನ ಅಪಘಾತ

ಶ್ರವಣಬೆಳಗೊಳದಲ್ಲಿ ಮಕ್ಕಳನ್ನ ಕರೆದೊಯ್ಯುತ್ತಿದ್ದ ವಾಹನ ಅಪಘಾತ

ಹಾಸನ: ಶಾಲಾ ಮಕ್ಕಳನ್ನ ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ 5 ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿರುವ ಘಟನೆ ಶ್ರವಣಬೆಳಗೊಳದಲ್ಲಿ ನಡೆದಿದೆ.

hassan-accident

ಹಾಸನ ಜಿಲ್ಲೆಯ ಶ್ರವಣಬೆಳಗೊಳ ತಾಲೂಕಿನ ಅರುವನಹಳ್ಳಿ-ಮಂಜುನಾಥಪುರ ರಸ್ತೆಯ ತಿರುವಿನಲ್ಲಿ ಈ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 5 ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದರೆ, 10ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಈ ಅಪಘಾತದಲ್ಲಿ ಯಾವುದೇ ಪ್ರಾಣಪಾಯಸಂಭವಿಸಿಲ್ಲ.

ಶ್ರವಣಬೆಳಗೊಳದ ಸಿಂಹಾದ್ರಿ ಶಾಲೆಯ ಬಸ್ ಇದಾಗಿದ್ದು, ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಉರುಳಿದೆ. ಘಟನೆ ನಡೆದ ತಕ್ಷಣ ಸ್ಥಳೀಯರ ಸಹಾಯದಿಂದ ಗಾಯಾಳು ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜೂನ್ 21ರಂದು ಉಡುಪಿಯ ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66ರ ಮೋವಾಡಿ ಕ್ರಾಸ್‍ನಲ್ಲಿ ಭೀಕರ ಅಪಘಾತಕ್ಕೆ 8 ಮಂದಿ ಮಕ್ಕಳು ಸಾವನ್ನಪ್ಪಿದ್ದರು.

Leave a Reply