ಹೊಟೇಲ್ ನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದವರ ಸೆರೆ; ಗಾಂಜಾ ವಶ

ಹೊಟೇಲ್ ನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದವರ ಸೆರೆ; ಗಾಂಜಾ ವಶ

ಮಂಗಳೂರು: ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿಯ ಹೊಟೇಲ್ ವೊಂದರಲ್ಲಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಹೊಟೇಲ್ ಮಾಲಕ ಸಹಿತ ಮೂರು ಮಂದಿಯನ್ನು ಮಂಗಳೂರು ಸಿಸಿಬಿ ಪೊಲೀಸರು ದಸ್ತಗಿರಿ ಮಾಡಿ ಅವರ ವಶದಿಂದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

Abdul-Samad,Mohammed-Riyaz,Razak-Ali-01

ಬಂಧಿತರನ್ನು ಸುರತ್ಕಲ್ ನಿವಾಸಿಗಳಾದ ಮೊಹಮ್ಮದ್ ರಿಯಾಜ್ (30), ಅಬ್ದುಲ್ ಸಮದ್ (27), ರಝಾಕ್ ಆಲ್ (23) ಎಂದು ಗುರುತಿಸಲಾಗಿದೆ.

ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೈಕಂಪಾಡಿ ಬಸ್ಸು ನಿಲ್ದಾಣದ ಬಳಿಯ ಹೊಟೇಲ್ ಮುಬಾರಕ್ ನಲ್ಲಿ ಹಾಗೂ ಹೊಟೇಲ್ ಮುಂಭಾಗದಲ್ಲಿ ದ್ವಿಚಕ್ರ ವಾಹನ ಕೆಎ-19-ಇಎನ್- 1223 ನೇ ಹೊಂಡಾ ಮ್ಯಾಸ್ಟ್ರೋ ವಾಹನದಲ್ಲಿ ಗಾಂಜಾವನ್ನು ಇಟ್ಟುಕೊಂಡು ಸಣ್ಣ ಸಣ್ಣ ಪ್ಯಾಕೆಟ್ ಗಳಲ್ಲಿ ಮಾಡಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಮಂಗಳೂರು ಸಿಸಿಬಿ ಪೊಲೀಸರು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಿದ್ದಾರೆ.

Ganja-05072016-02

ಬಂಧಿತರಿಂದ ಒಟ್ಟು 1.2 ಕೆ.ಜಿ ಗಾಂಜಾ, 4 ಮೊಬೈಲ್ ಫೋನ್ ಗಳು, ನಗದು ರೂ. 7300/- ನಗದನ್ನು ಗಾಂಜಾ ಮಾರಾಟ ಮಾಡಲು ಉಪಯೋಗಿಸುತ್ತಿದ್ದ ಹೊಂಡಾ ಮ್ಯಾಸ್ಟ್ರೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ ರೂ. 93,000/- ಆಗಿರುತ್ತದೆ. ಆರೋಪಿಗಳು ಗಾಂಜಾವನ್ನು ಸಣ್ಣ ಸಣ್ಣ ಪ್ಯಾಕೆಟ್ ಮಾಡಿಕೊಂಡು ಹೊಟೇಲ್ ಗೆ ಬರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಪಣಂಬೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಸಿ.ಸಿ.ಬಿ ಘಟಕದ ಸಬ್ ಇನ್ಸಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.

3 Comments

  1. Who would have thought, right? LOL On a different note, I don’t understand these strange laws. If alcohol is legal, why not ganja?

  2. “I don’t understand these strange laws.” – Rapidex RampaNNE

    Lol! How could you understand, ya, Rampa? You don’t EVEN know the difference between an “idiom” and an “idiot”. The only thing consistent about you is your inconsistency. (Eg. once Indian media is called “Stenographers” and in some other rant, they are called ‘Indian media’. Once India is India and other times, it is ‘Bharatha’ and at other times when your hallucinations are real bad, India is even referred to as ‘akhanda bharatha!

    Enchina ya, Rapidex RampaNNA?

  3. Dear Joker Praveena Pinto,
    How can you understand my comment on ‘strange laws’ when you have a ‘strange medical condition’? LOL I’m talking about ganja and you are talking about akhanda bharatha. Please take your medicaton!!

Leave a Reply

Please enter your comment!
Please enter your name here