ಇರ್ತಲೆ ಹಾವು ಮಾರಾಟ ಯತ್ನ ; ನಾಲ್ವರ ಸೆರೆ

ಇರ್ತಲೆ ಹಾವು ಮಾರಾಟ ಯತ್ನ ; ನಾಲ್ವರ ಸೆರೆ

ಪುತ್ತೂರು: ಇರ್ತಲೆ(ಎರಡು ತಲೆಯ) ಹಾವು ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವೊಂದಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

Two-headed-snake-shashidar-saleem-rathan-gagan-05072016

ಬಂಧಿತರನ್ನು ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಮಧುಗಿರಿಯ ಎಂ.ಎನ್‌.ಶಶಿಧರ್‌(29), ಕುಣಿಗಲ್‌ನ ಎನ್‌. ರತನ್‌ ಗೌಡ(26), ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಆತೂರಿನ ಸಲೀಂ ಸಿ.ಕೆ.(26) ಮತ್ತು ಕಾರು ಚಾಲಕ ಮಡಿಕೇರಿಯ ಗಗನ್‌ ಎಂ.ಬಿ.(30) ಎಂದು ಗುರುತಿಸಲಾಗಿದೆ.

ಕುಣಿಗಲ್‌ನ ರತನ್‌ ಎಂಬಾತನಿಗೆ ಊರಿನ ಹೊಲದಲ್ಲಿ ವ್ಯವಸಾಯ ಮಾಡುತ್ತಿದ್ದ ವೇಳೆ ಇರ್ತಲೆ ಹಾವು ಸಿಕ್ಕಿದ್ದು, ಇದನ್ನು ಆತ ತನ್ನ ಸ್ನೇಹಿತರಾದ ಶಶಿಧರ್ ಮತ್ತು ಸಲಿಂಗೆ ತಿಳಿಸಿದ್ದ. ಹಿಂದೆ ಆಗಮಿಸಿದ್ದರು. ಅಲ್ಲಿ ಮಾರಾಟಕ್ಕೆ ವಿಫ‌ಲ ಯತ್ನ ನಡೆಸಿದ್ದರು. ಸೋಮವಾರಸಂಜೆ ನರಿಮೊಗು ಗ್ರಾಮದ ಪುರುಷರಕಟ್ಟೆಗೆ ಬಂದು ಅಲ್ಲಿ ಇದನ್ನು ಮಾರಾಟ ಮಾಡುವ ಯತ್ನದಲ್ಲಿದ್ದಾಗ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ ಎಂದು ಎಎಸ್ಪಿ ಮಾಹಿತಿ ನೀಡಿದರು. ದಿಢೀರ್‌ ಹಣಗಳಿಸುವ ಇರಾದೆಯಿಂದ ಇರ್ತಲೆ ಹಾವನ್ನು ಮಾರಾಟ ಮಾಡಲೆತ್ನಿಸಿದ ಆರೋಪಿಗಳು ಈ ಹಾವಿಗೆ 2ರಿಂದ 3 ಲಕ್ಷ ರೂ. ತನಕ ಬೇಡಿಕೆ ಇಟ್ಟಿದ್ದರೆನ್ನಲಾಗಿದೆ.

ಖಚಿತ ಮಾಹಿತಿಯ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿತರಿಂದ ಇರ್ತಲೆ ಹಾವು, ಸಾಗಾಟಕ್ಕೆ ಬಳಸಿದ್ದ ಇಂಡಿಕಾ ಕಾರು ಹಾಗೂ ಮೊಬೈಲ್‌ ಫೋನುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ,

Leave a Reply