ಮೆಸ್ಕಾಂ ಕೂಳೂರು ವಿಭಾಗದಲ್ಲಿ ಪ್ರತ್ಯೇಕ ಸೇವಾಕೇಂದ್ರ ತೆರೆಯಉ ಒತ್ತಾಯ

ಮೆಸ್ಕಾಂ ಕೂಳೂರು ವಿಭಾಗದಲ್ಲಿ ಪ್ರತ್ಯೇಕ ಸೇವಾಕೇಂದ್ರ ತೆರೆಯಉ ಒತ್ತಾಯ
ಕೂಳೂರು ವಿಭಾಗದಲ್ಲಿ ಮೆಸ್ಕಾಂ ವಿಭಾಗದಲ್ಲಿ ಮಳೆಗಾಲದ ಕಾರ್ಯ ನಿರ್ವಹಣೆ ಸಮರ್ಪಕವಾಗಿಲ್ಲ ಇರುವ ಒಂದು ಸೇವಾಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು ಪ್ರತ್ಯೇಕ ಸೇವಾಕೇಂದ್ರವನ್ನಯ ತೆರೆಯಬೇಕೆಂದು ಒತ್ತಾಯಿಸಿ ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶರಿಗೆ ಡಿ.ವೈ.ಎಫ್.ಐ ಪಂಜಿಮೊಗರು ಘಟಕದ ನಿಯೋಗದಿಂದ ಮನವಿ ಸಲ್ಲಿಸಲಾಯಿತು.

image001kulur-mescom-20160721

ಕಾವೂರು ಮೆಸ್ಕಾಂ ವ್ಯಾಪ್ತಿ ದೊಡ್ಡದಾಗಿದ್ದು ಕೂಳೂರಿನಲ್ಲಿ ಪ್ರತ್ಯೇಕ ಸೇವಾಕೇಂದ್ರ ನಿರ್ಮಿಸಬೇಕೆಂಬ ಒತ್ತಾಯ ಹಲಾವಾರು ವರ್ಷಗಳಿಂದ ಇದ್ದರೂ ಮೆಸ್ಕಾಂ ನಿರ್ಲಕ್ಷ್ಯ ವಹಿಸಿದೆ. ಸಿಂಬ್ಬಂದಿ ಕೊರತೆಯಿಂದಾಗಿ ಮೆಸ್ಕಾಂನ ಸರಿಯಾಗಿ ನಿರ್ವಹಿಸುತ್ತಿಲ್ಲ. ಗ್ರಾಹಕರ ದೂರುಗಳಿಗೆ ಸರಿಯಾದ ಸ್ಪಂದನೆ ದೊರಕುತ್ತಿಲ್ಲ. ಜೋತು ಬಿದ್ದಿರುವ ತಂತಿಗಳನ್ನು ಸರಿಪಡಿಸಲು ನಿರ್ಲಕ್ಷ್ಯ ವಹಿಸಿರುವ ಮೆಸ್ಕಾಂ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಇನ್ನೊಂದೆಡೆ ಮಳೆಗಾಲದ ಸಂಧರ್ಭದಲ್ಲಿ ಸಣ್ಣ ಗಾಳಿ ಮಳೆಗೂ ತಂತಿಗಳು ಪರಸ್ಪರ ತಾಗಿ ವಿದ್ಯುತ್ ವ್ಯತ್ಯಯ ಉಓಟಾಗುತ್ತಿದೆ. ಮಳೆಗಾಲದ ಸಂಧ¨ರ್s ಟ್ರೀ ಕಟ್ಟಿಂಗ್ ಮಾಡುವುದನ್ನೂ ಮೆಸ್ಕಾಂ ಮರೆತಿದೆ.
ಇಂತಹ ಮುಂಜಾಗ್ರತಾ ಕ್ರಮಗಳನ್ನು ನಿರ್¯ಕ್ಷಿಸಿರುವ ಮೆಸ್ಕಾಂ ತನ್ನ ಬೇಜವಬ್ದಾರಿಯಿಂದಲೇ ಸಮಸ್ಯೆಗಳನ್ನು ಸೃಷ್ಟಿಸಿದೆ. ಇತ್ತೀಚೆಗೆ ಗಾಳಿ ಮಳೆಗೆ ವಿದ್ಯತ್ ಟ್ತಾನ್ಸ್ ಫಾರ್ಮರ್ ಹೊತ್ತಿ ಉರಿದಿದ್ದು ಅದನ್ನು ಸರಿಪಡಿಸಲು ವಾರ ಕಲ ವಿಳಂಬ ಮಡಿದ ಪರಿಣಾಮ ಪ್ರದೇಶದಲ್ಲಿ ದರಿ ದೀಪಗಳಿರಲಿಲ್ಲ. ಸಮಸ್ಯೆಗಳನ್ನು ಬಗೆಹರಿಸಲು ದುರಸ್ತಿ ಮಡಲು ಸರಿಯಾದ ಸಿಬ್ಬಂದಿ ಕುರತೆಯಿದ್ದು ಪ್ರತ್ಯೇಕ ಸೇವಾಕೇಂದ್ರ ಸ್ಥಾಪನೆಯೇ ಇದಕ್ಕೆ ಸೂಕ್ತ ಪರಿಹಾರವಾಗಿದೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿರುವ ಡಿ.ವೈ.ಎಫ್.ಐ ತಪ್ಪಿದ್ದಲ್ಲಿ ಮೆಸ್ಕಾಂ ಗ್ರಾಹಕರನ್ನು ಒಟ್ಟು ಸೇರಿಸಿ ನಿರಂತರ ಹೋರಾಟ ಸಂಘಟಿಸುವ ಎಚ್ಚರಿಕೆಯನ್ನು ಡಿ.ವೈ.ಎಫ್.ಐ ಪಂಜಿಮೊಗರು ಘಟಕ ನೀಡಿದೆ.
ನಿಯೋಗದಲ್ಲಿ ಡಿ.ವೈ.ಎಫ್.ಐ ಪಂಜಿಮೊಗರು ಘಟಕ ಅದ್ಯಕ್ಷರಾದ ಅನಿಲ್ ಡಿಸೋಜ, ಚರಣ್ ಶೆಟ್ಟಿ, ನೌಶಾದ್ ಬಾವ, ಶಕೀರ್ ಇದ್ದರು.

Leave a Reply