ಮಂಗಳೂರು ಕಾರಾಗೃಹಕ್ಕೆ ಧಾಳಿ 2 ಮೊಬೈಲ್ ಫೋನ್ ಮತ್ತು 2 ಸಿಮ್ ವಶ

ಮಂಗಳೂರು ಕಾರಾಗೃಹಕ್ಕೆ ಧಾಳಿ 2 ಮೊಬೈಲ್ ಫೋನ್ ಮತ್ತು 2 ಸಿಮ್ ವಶ
ಮಂಗಳೂರು: ನಗರ ಪೋಲಿಸರು ಜೈಲು ಅಧಿಕಾರಿಗಳ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹಕ್ಕೆ ಧಿಢೀರ್ ಧಾಳಿ ನಡೆಸಿ ಖೈದಿಗಳ ಬಳಿಯಿದ್ದ 2 ಮೊಬೈಲ್ ಫೋನ್ ಮತ್ತು 2 ಸಿಮ್ ವಶಪಡಿಸಿಕೊಂಡಿದ್ದಾರೆ.
ಕಾನೂನ ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಕ್ರೈಂ ಮತ್ತು ಟ್ರಾಫಿಕ್ ವಿಭಾಗದ ಡಿಸಿಪಿ ಡಾ ಸಂಜೀವ್ ಪಾಟೀಲ್ ಹಾಗೂ ಇನ್ನಿತರರು ಧಾಳಿಯಲ್ಲಿ ಭಾಗವಹಿಸಿದ್ದರು.
ಕಾರಾಗೃಹದಲ್ಲಿ ಕೆಲವು ತಿಂಗಳುಗಳ ಹಿಂದಯಷ್ಟೇ ಮೊಬೈಲ್ ಜಾಮರ್ ಅಳವಡಿಸಲಾಗಿದ್ದು ಇಂತಹ ಡಿಢೀರ್ ಧಾಳಿಗಳನ್ನು ಆಗಾಗ ನಡೆಸಲಾಗುತ್ತದೆ ಎಂದು ಪೋಲಿಸರು ಹೇಳಿದ್ದಾರೆ.
ಧಾಳಿಯ ಕುರಿತು ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply