ಶಾಲೆಯಿಂದ ಹೊರಗುಳಿದ ಮಕ್ಕಳ ವಿಶೇಷ ದಾಖಲಾತಿ ಆಂದೋಲನ

ಶಾಲೆಯಿಂದ ಹೊರಗುಳಿದ ಮಕ್ಕಳ ವಿಶೇಷ ದಾಖಲಾತಿ ಆಂದೋಲನ

ಉಡುಪಿ: ಶಾಲೆಯಿಂದ ಹೊರಗುಳಿದ ಮಕ್ಕಳ ವಿಶೇಷ ದಾಖಲಾತಿ ಆಂದೋಲನವನ್ನು ಇಂದು ಬೀಡಿನಗುಡ್ಡೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಯಿತು.

school-joining-andholan

ವಿದ್ಯಾಂಗ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿಯವರ ಮಾರ್ಗದರ್ಶನದಲ್ಲಿ 8 ಮಕ್ಕಳನ್ನು ವಳಕಾಡು ಶಾಲೆಗೆ ದಾಖಲು ಮಾಡಲಾಯಿತು. 7 ಜನ ಶಾಲೆಗೆ ಗೈರು ಹಾಜರಾಗುತ್ತಿದ್ದ ಮಕ್ಕಳನ್ನು ಇಂದಿರಾನಗರ ಶಾಲೆಗೆ ಕಳುಹಿಸಿ ಪ್ರತಿದಿನ ಶಾಲೆಗೆ ಹಾಜರಾಗುವಂತೆ ಮನ ಒಲಿಸಲಾಯಿತು.

ಹೆಚ್ಚಿನ ಮಕ್ಕಳು ಮಳೆಯ ದಿನಗಳಲ್ಲಿ ಶಾಲೆಗೆ ಗೈರಾಗುತ್ತಿದ್ದು, ಮಕ್ಕಳ ಹೆತ್ತವರಿಗೆ ಮಕ್ಕಳನ್ನು ಶಾಲೆಗೆ ಪ್ರತಿದಿನ ಕಳುಹಿಸುವಂತೆ ಸಲಹೆ ನೀಡಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಗ್ರೇಸಿ ಗೊನ್ಸಾಲ್ವಿಸ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪ್ರೇಮನಾಥ್, ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿಗಳು ವಿದ್ಯಾಂಗ ಇಲಾಖೆಯ ಬಿಇಒ, ಶಿಕ್ಷಕರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.

Leave a Reply