ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ ದಿವಸ

ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ವತಿಯಿಂದ ಕಾರ್ಗಿಲ್ ವಿಜಯ ದಿವಸ

ಮಂಗಳೂರು: ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ ಮಂಗಳೂರು ನಗರದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಪ್ರಯುಕ್ತ ನಗರದ ಜ್ಯೋತಿ ವೃತ್ತದಿಂದ ಎ.ಬಿ.ವಿ.ಪಿ ಕಾರ್ಯಾಲಯದ ವಿವೇಕ ಸಭಾಂಗಣದವರೆಗೆ ಸುಮಾರು ನೂರಕ್ಕೂ ಹೆಚ್ಚು ಬೈಕ್ ರ್ಯಾಲಿ ನಡೆಯಿತು.

image014abvp-kargil-vijay-diwas -20160726-014 image013abvp-kargil-vijay-diwas -20160726-013 image015abvp-kargil-vijay-diwas -20160726-015 image012abvp-kargil-vijay-diwas -20160726-012 image011abvp-kargil-vijay-diwas -20160726-011 image010abvp-kargil-vijay-diwas -20160726-010 image009abvp-kargil-vijay-diwas -20160726-009 image008abvp-kargil-vijay-diwas -20160726-008 image006abvp-kargil-vijay-diwas -20160726-006 image007abvp-kargil-vijay-diwas -20160726-007 image005abvp-kargil-vijay-diwas -20160726-005 image004abvp-kargil-vijay-diwas -20160726-004 image003abvp-kargil-vijay-diwas -20160726-003 image002abvp-kargil-vijay-diwas -20160726-002 image001abvp-kargil-vijay-diwas -20160726-001

ಜ್ಯೋತಿ ವೃತ್ತದಲ್ಲಿ ಭಾರತ ಮಾತೆಯ ಹಾಗೂ ಕಾರ್ಗಿಲ್ ಹುತಾತ್ಮರ ಭಾವಚಿತ್ರಕ್ಕೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‍ನ ವಿಭಾಗ ಸಹಸಂಚಾಲಕ ಚೇತನ್ ಪಡೀಲ್, ವಿಭಾಗ ಸಂಘಟನಾ ಕಾರ್ಯದರ್ಶಿ ತೇಜಸ್ವಿ ಹಾಗೂ ನಗರ ಕಾರ್ಯದರ್ಶಿ ಹಿತೇಶ್ ಬೇಕಲ್ ಪುಷ್ಪಾರ್ಚನೆ ಮಾಡುವ ಮೂಲಕ ಬೈಕ್ ರ್ಯಾಲಿ ಚಾಲನೆ ನೀಡಲಾಯಿತು.

ವಿವೇಕ ಸಭಾಂಗಣನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿ ಕರ್ನಲ್ ಅರವಿಂದ ಕುಮಾರ್ ಮಾತನಾಡಿ ಕಾರ್ಗಿಲ್ ಯುದ್ದದ ಸಮಯದಲ್ಲಿ ಸೈನಿಕರು ಯಾವುದೇ ಸಮಸ್ಯೆಗೆ ದೃತಿಗೆಡದೆ ಅವರ ದೃಢಸಂಕಲ್ಪ, ನಿಶ್ಚಲ ಮನಸ್ಥಿತಿಯ ಜೊತೆಯಲ್ಲಿ, ದೇಶದ ಜನರಿಂದ ದೊರೆತ ಆತ್ಮಸ್ಥೈರ್ಯ ಕಾರ್ಗಿಲ್ ವಿಜಯದ ಪ್ರಮುಖ ಅಂಶಗಳಾಗಿದ್ದವು. ಯುದ್ಧದ ಸಂದರ್ಭದಲ್ಲಿ 527 ಯೋಧರು ಅಮರರಾಗಿದ್ದರು, ಸಾವಿರಾರು ಜನರು ಗಾಯಗೊಂಡಿದ್ದರು. ಅವರ ಅಮರತ್ವ, ಗಾಯ ಇಂದಿಗೂ ನಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಇವತ್ತಿನ ವಿದ್ಯಾರ್ಥಿ, ಯುವ ಜನಾಂಗ ಶಿಕ್ಷಣದ ಜೊತೆಯಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡಲ್ಲಿ ರಾಷ್ಟ್ರ ಬಲಿಷ್ಟವಾಗಿ ವಿಶ್ವಕ್ಕೆ ಮಾದರಿಯಾಗುತ್ತದೆ. “ಶಿಕ್ಷಣ ಇರುವುದು ಜೀವನಕ್ಕಾಗಿ ಜೀವನ ಜನ್ಮ ಭೂಮಿಗಾಗಿ” ಎಂದು ತಿಳಿಸಿ ರಾಷ್ಟ್ರ ಕಟ್ಟುವ ಕಾರ್ಯಕ್ಕೆ ಕರೆ ಕೊಟ್ಟರು ಈ ಕಾರ್ಯಕ್ರಮವನ್ನು ಎ.ಬಿ.ವಿ.ಪಿ. ನಗರ ದಕ್ಷಿಣದ ಕಾರ್ಯದರ್ಶಿ ಚೈತನ್ಯ ನಿರೂಪಿಸಿದರು. ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿ ನಾಯಕ ಮೋಹಿತ್ ಸ್ವಾಗತಿಸಿದರು. ನಗರ ಕಾರ್ಯದರ್ಶಿ ಹಿತೇಶ್ ಬೇಕಲ್ ವಂದಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಸಂದೀಪ್ ಶೆಟ್ಟಿ, ಸಹ ಸಂಚಾಲಕ ಜಯೇಶ್ ಪಿ.ಕೆ., ಗೋಕರ್ಣನಾಥ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಅವಿನಾಶ್ ಕರ್ಕೇರ, ಕೆನರಾ ಕಾಲೇಜಿನ ವಿದ್ಯಾರ್ಥಿ ಸಂಘದ ಅದ್ಯಕ್ಷ ಸುಹಾನ್, ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿ ನಾಯಕ ಪ್ರಜ್ವಲ್ ಶೆಟ್ಟಿ, ಅಮೃತ ಕಾಲೇಜಿನ ಜೀವನ್ ರಾಜ್, ಕಾಸ್ಟ್ರ್ರೀಟ್ ಕಾಲೇಜಿನ ವಿದ್ಯಾರ್ಥಿ ನಾಯಕ ಶ್ರೇಯಸ್ ಹಾಗೂ ಹಲವು ಪ್ರಮುಖರು ಭಾಗವಹಿಸಿದರು.

Leave a Reply

Please enter your comment!
Please enter your name here