ಮರಕಡ ಶಾಲಾ ಶಿಕ್ಷಕರನ್ನು ವರ್ಗಾವಣೆ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಮರಕಡ ಶಾಲಾ ಶಿಕ್ಷಕರನ್ನು ವರ್ಗಾವಣೆ ಪ್ರಕ್ರಿಯೆ ಕೈಬಿಡಲು ಆಗ್ರಹಿಸಿ ಪ್ರತಿಭಟನೆ

ಮಂಗಳೂರು: ನಗರದ ಮರಕಡ ಸರಕಾರಿ ಶಾಲೆಯಲ್ಲಿ 302 ವಿದ್ಯಾರ್ಥಿಗಳಿದ್ದು, 13 ಶಿಕ್ಷಕರ ಪೈಕಿ 5 ಶಿಕ್ಷಕರನ್ನು ಹೆಚ್ಚುವರಿ ಎಂದು ವರ್ಗಾವಣೆ ಮಾಡುವುದನ್ನು ಖಂಡಿಸಿ ಕುಂಜತ್ತಬೈಲ್‍ನ ಮರಕಡ ಶಾಲೆಯ ಎಸ್.ಡಿ.ಎಂ.ಸಿ., ಹಳೆ ವಿದ್ಯಾರ್ಥಿ ಸಂಘ , ಸ್ಥಳೀಯ ಸಂಘ ಸಂಸ್ಥೆಗಳು ಪೋಷಕರು ಮಕ್ಕಳು ಶಾಲೆಯ ಗೇಟನ್ನು ತೆರೆಯಲು ಬಿಡದೆ ರಾಜ್ಯ ಸರಕಾರದ ಅವೈಜಾನಿಕ ವರ್ಗಾವಣೆ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟಿಸಿದರು.

marakada-school-protest

ಪ್ರತಿಭಟನೆಯನ್ನು ಉದ್ದೇಶಿಸಿ ಡಿ.ವೈ.ಎಫ್.ಐ ಜಿಲ್ಲಾಧ್ಯಕ್ಷ ದಯಾನಂದ ಶೆಟ್ಟಿ ಮಾತನಾಡಿ ಸರಕಾರಿ ಶಾಲೆಗಳನ್ನು ಹಂತಹಂತವಾಗಿ ಮುಚ್ಚುವಂತಹ ಹುನ್ನಾರ ಸರಕಾರ ನಡೆಸುತ್ತಿದೆ. ಸರಕಾರ ಶಾಲೆಗಲನ್ನು ಬಲಪಡಿಸುವ ಬದಲಾಗಿ ದುರ್ಭಲಗೊಳಿಸುತ್ತಿದೆ ಎಂದರು. ಸರಕಾರ ಕೂಡಲೇ ವರ್ಗಾವಣೆ ಪ್ರಕ್ರಿಯೆ ಕೈ ಬಿಡಬೇಕೆಂದು ಒತ್ತಾಯಿಸಿದರು.

ಶಾಲಾಭಿವೃದ್ದಿ ಸಮಿತಿ ಅದ್ಯಕ್ಷರು ಮಾತನಾಡಿ ಒಂದು ವೇಳೆ ನಮ್ಮ ಶಾಲೆಯ ಶಿಕ್ಷಕರನ್ನು ನಮ್ಮ ಶಾಲೆಯಲ್ಲಿಯೇ ಉಳಿಸದಿದ್ದರೆ ಮುಂದಕ್ಕೆ ಶಿಕ್ಷಣಾಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಇದೇ ಸಂಧರ್ಭ ಸ್ಥಳಕ್ಕೆ ಆಗಮಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಬಿ.ಎ. ಮೊ ಉದ್ದೇಶಿಸಿ ಮಾತನಾಡಿದರು. ಹೆಚ್ಚುವರಿ ಶಿಕ್ಷಕರನ್ನು ಉಳಿಸುವ ಬಗ್ಗೆ ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಮಾನ್ಯ ಶಿಕ್ಷಣಾ ಸಚಿವರು ದಿನದೊಳಗೆ ಪರಿಹರಿಸುವುದಾಗಿ ಆಶ್ವಾಸನೆಯನ್ನು ನೀಡಿದ್ದಾರೆಂದು ಸಚಿವರು ನುಡಿದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಶ್ರೀ ಹರಿನಾಥ್ , ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ರಾಜಲಕ್ಷ್ಮೀ ಸ್ಥಳೀಯ ಜನಪ್ರತಿನಿಧಿ ಶ್ರೀಯುತ ಮಹಮ್ಮದ್ ಶರೀಫ್‍ರವರಿಗೆ ಶಾಲೆಯ ಶಿಕ್ಷಕರನ್ನು ಇಲ್ಲಿಯೇ ಉಳಿಸುವ ಬಗ್ಗೆ ಮನವಿ ಪತ್ರವನ್ನು ನೀಡಲಾಯಿತು.

ಈ ಸಂದರ್ಭ ಎಸ್.ಎಫ್.ಐ ಜಿಲ್ಲಾ ಕಾರ್ಯದರ್ಶಿ ಚರಣ್ ಶೆಟ್ಟಿ , ಮಾಜಿ ಕಾರ್ಪೊರೇಟರ್ ಶರತ್ , ಶಾಲಾ ಮೇಲುಸ್ತುವಾರಿ ದಾಮೋದರ್, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್ ಡಿ.ವೈ.ಎಫ್.ಐ.ನ ಮುಖಂಡರಾದ ನೌಶಾದ್ ಬಾವಾ, ಸಂತೋಷ್ ಪಂಜಿಮೊಗರು, ಸ್ತ್ರೀ ಜಾಗೃತಿ ಶಂಶದ್, ಎಸ್.ಡಿ.ಪಿ.ಐ.ನ ನೌಶದ್ ಕಾವೂರು ಕುಂಜತ್ತಬೈಲ್‍ನ ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಮತ್ತು ಪದಾಧಿಕಾರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನೆಯಲ್ಲಿ ಹಳೆ ವಿದ್ಯಾರ್ಥಿ ಸಂಘ ಬಹಿಷ್ಕ ಸಂಘದ ಕಾರ್ಯದರ್ಶಿ ಶ್ರೀಯುತ ರೆಹಮಾನ್ ಖಾನ್ ಕುಂಜತ್ತಬೈಲ್ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು. ವಿದ್ಯಾರ್ಥಿಗಳು ಈ ದಿನದ ತರಗತಿ ಬಹಿಷ್ಕರಿಸಿದರು.

Leave a Reply