26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ

26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಮಂಗಳೂರು ಏರ್`ಪೋರ್ಟ್`ನಲ್ಲಿ ಬಂಧನ

ಮಂಗಳೂರು: 26 ಪಾಸ್ಪೋರ್ಟ್ಗಳೊಂದಿಗೆ ಅಕ್ರಮವಾಗಿ ಪ್ರಯಾಣಿಸುತ್ತಿದ್ದ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಕಣ್ಣೂರು ನಿವಾಸಿ ಪಲ್ಲಕ್ಕನ್ ಅಬ್ದುಲ್ಲಾ ಬಂಧಿತ ಆರೋಪಿ. ಮಂಗಳೂರು ವಿಮಾನ ನಿಲ್ದಾಣದಿಂದ ಜೆಟ್ ಏರ್ವೇಸ್ ಮೂಲಕ ದುಬೈಗೆ ಪ್ರಯಾಣ ಬೆಳೆಸುತ್ತಿದ್ದಾಗ ಆರೋಪಿಯನ್ನು ಬಂಧಿಸಲಾಗಿದೆ.

abdul-passport-20160817

ಅನುಮಾನಾಸ್ಪದ ವರ್ತನೆ ಮೇಲೆ ಅಬ್ದುಲ್ಲಾ ಬಂಧನವಾಗಿದ್ದು, ಆತನಿಂದ 26 ಪಾಸ್ಪೋರ್ಟ್ಗಳನ್ನು ವಶಕ್ಕೆ ಪಡೆಯಲಾಗಿದೆ. ಈತ ಇಬ್ಬರು ಅಮೆರಿಕ ಪ್ರಜೆಗಳಾದ ಅರಕ್ಕಲ್ ಮಂಜೂರು ಮತ್ತು ಮಂಜೂರು ಶೂಜಾ ಅವರ ಪಾಸ್ಪೋರ್ಟ್ ಕೂಡ ಹೊಂದಿದ್ದ. ಹಜ್ ಯಾತ್ರೆ ಹಿನ್ನೆಲೆಯಲ್ಲಿ ಕೆಲ ವ್ಯಕ್ತಿಗಳಿಗೆ ವೀಸಾ ಮಾಡಿ ಕೊಡುವುದಾಗಿ ಹೇಳಿ ಈತ ಪಾಸ್ಪೋರ್ಟ್ ಪಡೆದಿದ್ದ ಎನ್ನಲಾಗಿದೆ.

ಬಜಪೆ ಪೊಲೀಸರು ಈತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಪಾಸ್ಪೋರ್ಟ್ ನಿಯಮದಂತೆ ದೇಶದಿಂದ ಹೊರಕ್ಕೆ ಸಾಗಿಸಲು ಅವಕಾಶ ಇಲ್ಲ. ಆದ್ದರಿಂದ ಈತನನ್ನು ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply