ʼಲೆಟ್ಸ್‌ ಪಾರ್ಟಿʼ ಮ್ಹಾಲಕ ಸಚಿನ್‌ ರಸ್ತೆ ಅಫಘಾತದಲ್ಲಿ ಮೃತ್ಯು

Spread the love

ʼಲೆಟ್ಸ್‌ ಪಾರ್ಟಿʼ ಮ್ಹಾಲಕ ಸಚಿನ್‌ ರಸ್ತೆ ಅಫಘಾತದಲ್ಲಿ ಮೃತ್ಯು

ಮಂಗಳೂರು : ನಗರ ಹೊರವಲಯದ  ನೇತ್ರಾವತಿ ಸೇತುವೆಯಲ್ಲಿ ಬುಧವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾರೆ.

ಉರ್ವ ಸಮೀಪದ ಸಚಿನ್ (32) ಮೃತಪಟ್ಟ ಬೈಕ್ ಸವಾರ. ಬುಧವಾರ ರಾತ್ರಿ  ಬೈಕ್ ಸ್ಕಿಡ್ ಆದ ಪರಿಣಾಮ ಇಲೆಕ್ಟ್ರಿಕಲ್ ಡೆಕರೇಟರ್ ಆಗಿದ್ದ ಸಚಿನ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಮಂಗಳೂರು‌ ನಗರ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Spread the love