
ಅಂತರ ಸಂಸ್ಥೆ ದುಬೈ ವತಿಯಿಂದ ರಾಜಾಂಗಣದಲ್ಲಿ ನೃತ್ಯ ಮತ್ತು ಸಂಗೀತ ರಸದಾರೆ
ದುಬೈ: ಅಂತರ ಸಂಸ್ಥೆ ದುಬೈ ಮುಖ್ಯವಾಗಿ ವಿದ್ಯಾ ಸಂಸ್ಥೆಯಾದ ಪ್ರಕೃತಿ ಧ್ವನಿ ಭಾರತ ದೇಶದ ಕಲೆಗಳನ್ನು ಎಲ್ಲಾ ಕಡೆ ಹರಡಲು ನೃತ್ಯ ಹಾಗೂ ಸಂಗೀತದ ಮೂಲಕ ಶ್ರಮ ಪಡುತ್ತಿದೆ.
ಪ್ರತಿ ಸಂವತ್ಸರದಲ್ಲಿ ಶ್ರೀ ಭಾರ್ಗವ ಈಶ್ವರ್, ಪ್ರಮುಖ ಪ್ರಧಾನಕರು ವಿ ಮಿ ಬಿ ಬಿ. ಈಶ್ವರ್ ಇವರು ನೃತ್ಯಕಲೆಯ ಪಾರಂಪರಿಕವಾಗಿ ಬಂದಂತಹ ವಿಷಯವನ್ನು ಎಲ್ಲರ ತಿಳುವಳಿಗೆ ಬರಲು ಪ್ರಯತ್ನ ಮಾಡುತ್ತಿದ್ದಾರೆ.
ಈ ವರ್ಷ ಕನಕ ದರ್ಶನಮ್ ಎಂಬ ಶಿರ್ಷೀಕೆಯಲ್ಲಿ ಪ್ರಕೃತಿಯ ಹುಟ್ಟು ಹಾಗೂ ಅದರ ಪ್ರಾಮುಖ್ಯತೆಯನ್ನು ತಿಳಿಸಲು ನಿರ್ಧರಿಸಿದ್ದರು. ಶ್ರೀ ಕೃಷ್ಣ ಕನಕದಾಸ ಭಕ್ತಿಗೆ ಮೆಚ್ಚಿ ತಾನಾಗಿ ತಿರುಗಿ ದರ್ಶನವನ್ನು ಕೊಡುತ್ತಾರೆ. ಭಕ್ತರ ಭಕ್ತಿಗೆ ದೇವರ ಸಾಕ್ಷಾತ್ಕಾರವಾಗುತ್ತದೆ.
ಅಂತರ ಸಂಸ್ಥೆಯು ಈ ಬಾರಿ ಪಾರಂಪರಿಕ ನೃತ್ಯ ಹಾಗೂ ಸಂಗೀತ ರಸದಾರೆಯನ್ನು ದಕ್ಷಿಣಕನ್ನಡದ ಯಕ್ಷಗಾನ ಶೈಲಿಯ ಮೂಲಕ ತೋರಿಸಿದೆ.
30ಕ್ಕೂ ಹೆಚ್ಚು ಮಕ್ಕಳು ಶ್ರೀ ಕೃಷ್ಣನ ಸನ್ನಿಧಿಯ ರಾಜಾಂಗಣದಲ್ಲಿ ಪ್ರದರ್ಶನ ನೀಡಿದ್ದುಅಂತರ ಹಾಗೂ ಪ್ರಕೃತಿ ಧ್ವನಿ ನಿರ್ವಾಹಕಿ ವಿಮಿ ಬಿ ಈಶ್ವರ ಮತ್ತು ಅವರ ಮಕ್ಕಳ ಕಾರ್ಯಕ್ರಮ ನಡೆಸಿಕೊಟ್ಟರು.