ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ತಜ್ಞ ಸಮಾಲೋಚನೆಗೆ ಡಾ. ವಿಶಾಲ್ ಸಮರ್ಥ ಮತ್ತು ಪ್ರೋ. ಪದ್ಮನಾಭ ಬಿ ಆಯ್ಕೆ

Spread the love

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ತಜ್ಞ ಸಮಾಲೋಚನೆಗೆ ಡಾ. ವಿಶಾಲ್ ಸಮರ್ಥ ಮತ್ತು ಪ್ರೋ. ಪದ್ಮನಾಭ ಬಿ ಆಯ್ಕೆ

ಮಂಗಳೂರು: ದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಮಾರ್ಚ್ 7ರಂದು ನಡೆಯುವ ತಜ್ಞ ಸಮಾಲೋಚನೆಗೆ ಸಂಪಂನ್ಮೂಲ ವ್ಯಕ್ತಿಗಳಾಗಿ ನಗರದ ಸಹ್ಯಾದ್ರಿ ಕಾಲೇಜ್ ಆಪ್ ಇಂಜಿನಿಯರಿಂಗ್ಮತ್ತು ಮೆನೇಜ್ಮೆಂಟ್ನಿಂದ ಡಾ. ವಿಶಾಲ್ಸಮರ್ಥ ಮತ್ತು ಪ್ರೊ.ಪದ್ಮನಾಭ ಬಿ.ಆಯ್ಕೆಯಾಗಿದ್ದಾರೆ.

ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದಿಂದ ನಡೆಯುವ ಈ ಕಾರ್ಯಕ್ರಮದಲ್ಲಿ ಡಿಜಿಟಲ್ ಆಲ್: ಲಿಂಗ ಸಮಾನತೆಯಲ್ಲಿ ಆವಿಷ್ಕಾರ ಮತ್ತು ತಂತ್ರಜ್ಞಾನ ಎಂಬ ವಿಷಯದ ಕುರಿತು ಇವರು ವಿಚಾರ ಮಂಡಿಸಲಿದ್ದಾರೆ. (DigitalALL: Innovation and Technology for Gender Equity).

ದೇಶದ ವಿವಿಧ ಸಂಘಸಂಸ್ಥೆಗಳಿಂದ ಹಲವಾರು ತಜ್ಞರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿಸಲಿದ್ದಾರೆ. ಡಾ.ವಿಶಾಲ್ಸಮರ್ಥ ಮತ್ತು ಪ್ರೊ.ಪದ್ಮನಾಭಬಿ. ಇವರು ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ವಿಜ್ಞಾನ ಮತ್ತು ಕೈಗಾರಿಕಾ ಸಂಶೋಧನ ವಿಭಾಗದ ಅನುದಾನದಿಂದ ನಡೆಯುವ ಕಾರ್ಯಯೋಜನೆಯ ಪ್ರಧಾನ ಸಂಶೋಧಕಿ ಹಾಗೂ ಉಪಪ್ರಧಾನ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಾರ್ಯ ಯೋಜನೆಯಲ್ಲಿ ಉಡುಪಿ ಮತ್ತು ದಕ್ಷಿಣಕನ್ನಡ ಸುಮಾರು 165 ಮಹಿಳೆಯರು ವಿದ್ಯುತ್ಮಗ್ಗ ತರಬೇತಿಯನ್ನು ನುರಿತತರಬೇತುಧಾರರಿಂದ ತರಬೇತಿ ಪಡೆದು ಸ್ವಂತ ಉದ್ದಿಮೆ ಆರಂಭಿಸಲಿದ್ದಾರೆ.


Spread the love

Leave a Reply

Please enter your comment!
Please enter your name here