ಅಕ್ಟೋಬರ್ 16ರಂದು ಎಸ್ ಬಿ ಐ ಸ್ಟಾಫ್ ಫೆಡರೇಶನ್‌ನ ಅಮೃತ ಮಹೋತ್ಸವ ಸಂಭ್ರಮಾಚರಣೆ

Spread the love

ಅಕ್ಟೋಬರ್ 16ರಂದು ಎಸ್ ಬಿ ಐ ಸ್ಟಾಫ್ ಫೆಡರೇಶನ್‌ನ ಅಮೃತ ಮಹೋತ್ಸವ ಸಂಭ್ರಮಾಚರಣೆ

ಉಡುಪಿ: ಸ್ಪೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಸ್ಟಾಫ್ ಯೂನಿಯನ್ ವತಿಯಿಂದ ಮಂಗಳೂರು ಮತ್ತು ಉಡುಪಿ ವಲಯಗಳ ನೇತೃತ್ವದಲ್ಲಿ ಅಖಿಲ ಭಾರತ ಸ್ಪೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಫ್ ಫೆಡರೇಶನ್‌ನ ಅಮೃತ ಮಹೋತ್ಸವ ಸಂಭ್ರಮಾಚರಣೆಯು ಅಕ್ಟೋಬರ್ 16ರಂದು ಬೆಳಿಗ್ಗೆ 9.30ಕ್ಕೆ ಉಡುಪಿಯ ಅಮೃತ್ ಗಾರ್ಡನ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಯೂನಿಯನ್ ಅಧ್ಯಕ್ಷ ಬಿ.ಎಸ್. ನಟೇಶ್ ಹೇಳಿದರು.

ಉಡುಪಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಮಹೋತ್ಸವದಲ್ಲಿ 2000ಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ ಎಂದರು.

ಕಾರ್ಯಕ್ರಮವನ್ನು ಬ್ಯಾಂಕ್‌ನ ಬೆಂಗಳೂರು ವೃತ್ತದ ಮುಖ್ಯ ಮಹಾಪ್ರಬಂಧಕ ನಂದಕಿಶೋರ್ ಉದ್ಘಾಟಿಸಲಿದ್ದಾರೆ. ಫೆಡರೇಶನ್‌ನ ರಾಷ್ಟ್ರೀಯ ನಾಯಕರಾದ ಸಂಜೀವ್ ಕೆ. ಬಂದ್ಲಿಶ್, ಅರುಣ್ ಭಗೋಲಿವಾಲ್, ಜಿ. ಕೃಪಾಕರನ್, ಪ್ರದೀಪ್ ಕುಮಾರ್ ಬೈಶ್ಯ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳ ಸಂಘಟನೆಯ ಹಿರಿಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಫೆಡರೇಶನ್‌ನ ಚಂದ್ರಕಾಂತ್ ಕೆ., ಯೂನಿಯನ್ ಜನರಲ್ ಸೆಕ್ರೆಟರಿ ಎಂ. ರವಿಕುಮಾರ್, ಮಂಗಳೂರು ವಲಯ ಉಪಾಧ್ಯಕ್ಷ ಪಿ.ಕೆ. ರಘು, ಪ್ರಶಾಂತ್ ಕೆ., ಉಪಸ್ಥಿತರಿದ್ದರು.


Spread the love