ಅಕ್ಟೋಬರ್ 8: ಜಾಗತಿಕ ಬಂಟ ಪ್ರತಿಷ್ಠಾನದ 26ನೇ ವಾರ್ಷಿಕ ಮಹಾಸಭೆ 

Spread the love

ಅಕ್ಟೋಬರ್ 8: ಜಾಗತಿಕ ಬಂಟ ಪ್ರತಿಷ್ಠಾನದ 26ನೇ ವಾರ್ಷಿಕ ಮಹಾಸಭೆ 

ಜಾಗತಿಕ ಬಂಟ ಪ್ರತಿಷ್ಠಾನದ 26ನೇ ವಾರ್ಷಿಕ ಮಹಾಸಭೆಯು ಇದೇ ಬರುವ ಶನಿವಾರ ಅಕ್ಟೋಬರ್ 8ನೇ ತಾರೀಕಿನಂದು ನಗರದ ಎ.ಜೆ. ಗ್ರಾ ್ಯಂಡ್ ಹೋಟೆಲ್‍ನಲ್ಲಿ ಜರಗಲಿರುವುದು.

1995ರಲ್ಲಿ ಪ್ರಾರಂಭವಾದ ಪ್ರತಿಷ್ಠಾನವು ಪ್ರಸ್ತುತ ತನ್ನ ಗಮನವನ್ನು ಮುಖ್ಯವಾಗಿ ಸಾಮಾಜಿಕ ಕ್ಷೇತ್ರಗಳಾದ ಶೈಕ್ಷಣಿಕ, ಆರೋಗ್ಯ, ಕ್ರೀಡೆ, ಕಲೆ, ಸಂಸ್ಕøತಿ ಹಾಗೂ ಪರಂಪರೆಗಳನ್ನು ಪ್ರೋತ್ಸಾಹಿಸುವ, ಉಳಿಸುವ, ಬೆಳೆಸುವ ಕಾಯಕದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಪ್ರತಿಷ್ಠಾನದ ಈ ಪ್ರಯತ್ನವು ಸಮಾಜದ ಆರ್ಥಿಕವಾಗಿ ದುರ್ಬಲ ವರ್ಗದ ಸಹಾಯದ ಅವಶ್ಯಕತೆ ಇರುವ ಜನರನ್ನು ತಲುಪಿದೆ. ಪ್ರತಿಷ್ಠಾನವು ಪ್ರತಿ ವರ್ಷ 250 ಮಕ್ಕಳಿಗೆ ವಿಧ್ಯಾಭ್ಯಾಸಕ್ಕೆ ಪ್ರೋತ್ಸಾಹ ಧನ ಹಾಗೂ ಬಡ್ಡಿ ರಹಿತ ಸಾಲವನ್ನು ವಿತರಣೆ ಮಾಡುತ್ತಲಿದೆ. ಕಳೆದ 26 ವರ್ಷಗಳಲ್ಲಿ 6000ಕ್ಕೂ ಅಧಿಕ ಮಕ್ಕಳು ಇದರ ಲಾಭವನ್ನು ಪಡೆದಿರುತ್ತಾರೆ.

ಡಾ. ಎ.ಜೆ. ಶೆಟ್ಟಿಯವರು ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾಗಿ, ಶ್ರೀ ಕೆ. ಸಚ್ಚಿದಾನಂದ ಹೆಗ್ಡೆ, ಶ್ರೀ ಕುಶಾಲ್ ಎಸ್. ಹೆಗ್ಡೆ, ಶ್ರೀಮತಿ ರೀತಾ ಶೆಟ್ಟಿ ಉಪಾಧ್ಯಕ್ಷರುಗಳಾಗಿ, ಸಿ.ಎ. ಸುಧೀರ್ ಕುಮಾರ್ ಶೆಟ್ಟಿ ಕಾರ್ಯದರ್ಶಿಯಾಗಿ, ಸಿ.ಎ. ಪಿ. ರಘುಚಂದ್ರ ಶೆಟ್ಟಿ ಕೋಶಾಧಿಕಾರಿಯಾಗಿ ಹಾಗೂ ಡಾ| ಬಿ. ಸಂಜೀವ ರೈ ಯೋಜನಾ ನಿರ್ದೇಶಕರಾಗಿ ಪ್ರಸ್ತುತ ಸೇವೆ ಸಲ್ಲಿಸುತ್ತಾ ಇರುತ್ತಾರೆ.

ಈ ವರ್ಷದ ವಾರ್ಷಿಕ ಮಹಾಸಭೆಯು ಡಾ| ಎ.ಜೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ವಾರ್ಷಿಕ ಲೆಕ್ಕಪತ್ರ, ಇತರ ವಿಷಯಗಳ ಮಂಡನೆ ಹಾಗೂ ಸನ್ಮಾನ ಸಮಾರಂಭ ನಡೆಯಲಿದೆ.

ಆಲ್‍ಕಾರ್ಗೊ ಗ್ರೂಫ್ ಮುಂಬೈನ ಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಶಶಿಕಿರಣ್ ಶೆಟ್ಟಿಯವರು ದಾನ ಮಾಡಿದ 17 ಮನೆಗಳ ಕೀಲಿಕೈಯ ಹಸ್ತಾಂತರ ಕಾರ್ಯಕ್ರಮ ನಡೆಯಲಿರುವುದು. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸಿ ಈ ಮನೆಗಳನ್ನು ದಾನದ ರೂಪದಲ್ಲಿ ನೀಡಲಾಗಿದೆ.

ಯಕ್ಷಗಾನ ರಂಗದಲ್ಲಿ 50 ವರ್ಷಕ್ಕೂ ಮಿಗಿಲಾಗಿ ಸೇವೆ ಸಲ್ಲಿಸಿದ ಶ್ರೀಯುತ ಕಂದಾವರ ರಘುರಾಮ ಶೆಟ್ಟಿಯವರನ್ನು ಡಾ| ಡಿ.ಕೆ. ಚೌಟ ದತ್ತಿನಿಧಿಯಿಂದ ರೂಪಾಯಿ 25000/- ಹಾಗೂ ಫಲಕವನ್ನು ನೀಡಿ ಗೌರವಿಸಲಾಗುವುದು.

ಇದಲ್ಲದೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷರಾಗಿ ಚುನಾಯಿತರಾದ ಸಿ.ಎ. ಶಾಂತರಾಮ್ ಶೆಟ್ಟಿ, ಮಂಗಳೂರಿನ ಬಾರ್ ಅಸೋಸಿಯೇಷನ್‍ನ ಅಧ್ಯಕ್ಷರಾಗಿ ಚುನಾಯಿತರಾದ ಎಡ್ವೊಕೇಟ್ ಶ್ರೀ ಪ ್ರಥ್ವಿರಾಜ್ ರೈ ಹಾಗೂ ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಸಮಿತಿಯ ಸದಸ್ಯರಾಗಿ ಆಯ್ಕೆಯಾದ ಶ್ರೀ ಪಿ.ಬಿ. ಹರೀಶ್ ರೈ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಸಿ.ಎ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆ ಹೊಂದಿದ ಕುಮಾರಿ ಸಿ.ಎ. ಮಂದಾರ ಪಿ. ಶೆಟ್ಟಿ ಹಾಗೂ ಸಿ.ಎ. ದರ್ಶನ್ ಶೆಟ್ಟಿಯವರನ್ನು ಸನ್ಮಾನಿಸಲಾಗುವುದು.

ಪ್ರತಿಷ್ಠಾನದ ವಾರ್ಷಿಕ ಮಹಾಸಭೆ ಸದಸ್ಯರಿಗೆ 11.00 ಗಂಟೆಗೆ ಸರಿಯಾಗಿ ಹಾಗೂ ಸನ್ಮಾನ ಕಾರ್ಯಕ್ರಮ 12.00 ಗಂಟೆಗೆ ಪ್ರಾರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love