ಅಕ್ರಮ ಅರಣ್ಯ ಪ್ರವೇಶ ಮಾಡಿದ ಮೂವರ ಬಂಧನ

Spread the love

ಅಕ್ರಮ ಅರಣ್ಯ ಪ್ರವೇಶ ಮಾಡಿದ ಮೂವರ ಬಂಧನ

ಚಾಮರಾಜನಗರ: ನಾಡ ಬಂದೂಕು ಮತ್ತು ಹೈ ಫ್ರೆಶರ್ ಏರ್ಗನ್ ಹಿಡಿದು ಅಕ್ರಮವಾಗಿ ಕಾಡು ಪ್ರವೇಶ ಮಾಡಿ ಓಡಾಡಿದ ಮೂವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿರುವ ಘಟನೆ ಹನೂರು ತಾಲೂಕಿನ ಗೋಪಿನಾಥಂ‌ ಸಮೀಪದ ಆಲಂಬಾಡಿ ಬಳಿ ನಡೆದಿದೆ.

ಹನೂರು ತಾಲೂಕಿನ ಹೊಗೆನಕಲ್ ಗ್ರಾಮದ ಮಾರಿಮುತ್ತು, ನಲ್ಲಾಂಪಟ್ಟಿ ಗ್ರಾಮದ ಕವಿನ್ ಕುಮಾರ್, ವಿಘ್ನೇಶ್ ಬಂಧಿತರು. ಹನೂರು ತಾಲೂಕಿನ ಗೋಪಿನಾಥಂ ಬಳಿಯ ಆಲಂಬಾಡಿ ಸಮೀಪದ ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಗನ್ಗಳೊಂದಿಗೆ ಓಡಾಡುತ್ತಿದ್ದ ಇವರನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ. ಬಂಧಿತರಲ್ಲಿ ಓರ್ವ ವೈದ್ಯನೂ ಇರುವುದಾಗಿ ಮೂಲಗಳು ತಿಳಿಸಿದ್ದು, ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಬಂಧಿತರಿಗೆ ವಿಚಾರಣೆ ನಡೆಸಲಾಗುತ್ತಿದೆ.

 


Spread the love