Home Mangalorean News Kannada News ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

Spread the love

ಅಕ್ರಮ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ವ್ಯಕ್ತಿಯ ಬಂಧನ

ಪುತ್ತೂರು: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪುತ್ತೂರು ಗ್ರಾಮಾಂತರ ಪೊಲೀಸರು ಒರ್ವ ವ್ಯಕ್ತಿಯನ್ನು ಬಂಧೀಸಿದ್ದಾರೆ.

ಬಂಧಿತನನ್ನು ಪುತ್ತೂರು ಅರಿಯಡ್ಕ ಗ್ರಾಮದ ಶರತ್ ಕುಮಾರ್ (24) ಎಂದು ಗುರುತಿಸಲಾಗಿದೆ.

ಏಪ್ರಿಲ್ 15ರಂದು ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸ್ ಉಪನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಠಾಣಾ ವ್ಯಾಪ್ತಿಯ ಪುತ್ತೂರು ತಾಲೂಕು ಪಡುವನ್ನೂರ್ ಗ್ರಾಮದ ಮಾಪಳ ಎಂಬಲ್ಲಿ ಅಕ್ರಮವಾಗಿ ಕಳ್ಳ ಭಟ್ಟಿ ತಯಾರಿಸುತ್ತಿರುವಲ್ಲಿ ಧಾಳಿ ನಡೆಸಿ ಆರೋಪಿ ಶರತ್ ಕುಮಾರ್  ವರ್ಷ ಎಂಬಾತನನ್ನು ಬಂಧಿಸಿದ್ದು, ಮತ್ತೋರ್ವ ಆರೋಪಿ ಕೇಶವ ಗೌಡ ಎಂಬಾತ ತಪ್ಪಿಸಿಕೊಂಡಿರುತ್ತಾನೆ.

ಸ್ಥಳದಲ್ಲಿ ದೊರೆತ ಅಂದಾಜು 2 ಲೀಟರ್ ಪ್ರಮಾಣದ ಕಳ್ಳ ಬಟ್ಟಿ ಸಾರಾಯಿ ಹಾಗೂ 200 ಲೀಟರ್ ಸಾಮರ್ಥ್ಯದ ಪ್ಲಾಸ್ಟಿಕ್ ಡ್ರಮ್ಮ್, 100 ಲೀಟರ್ ಹುಳಿರಸ ಹಾಗೂ ಕಳ್ಳ ಬಟ್ಟಿ ತಯಾರಿಸಲು ಬಳಸಿದ ಪಾತ್ರೆ, ಬಟ್ಟೆ, ಸಾರಾಯಿ ಮಾರಾಟದಿಂದ ಬಂದಿರುವ 360 ರೂ ವಶಪಡಿಸಿಕೊಂಡಿದ್ದು, ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ


Spread the love

Exit mobile version