ಅಕ್ರಮ ಗಣಿಗಾರಿಕೆಗೆ ಯತ್ನ: ಗ್ರಾಮಸ್ಥರ ಆಕ್ರೋಶ

Spread the love

ಅಕ್ರಮ ಗಣಿಗಾರಿಕೆಗೆ ಯತ್ನ: ಗ್ರಾಮಸ್ಥರ ಆಕ್ರೋಶ

ಗುಂಡ್ಲುಪೇಟೆ: ತಾಲೂಕಿನ ಕಂದೇಗಾಲ ಗ್ರಾಮದ ಪಾರ್ವತಿ ಬೆಟ್ಟಕ್ಕೆ ಹೊಂದಿಕೊಂಡಿರುವ ಒಂಟಿ ಗುಡ್ಡದಲ್ಲಿ ಗಣಿಗಾರಿಕೆಗೆ ಅನ್ಯರ ಯತ್ನ ನಡೆದಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವನ್ಯಜೀವಿಗಳ ಆವಾಸ ಸ್ಥಾನ ಒಂಟಿಗುಡ್ಡದಲ್ಲಿ ಕೆಲ ವರ್ಷಗಳ ಹಿಂದೆ ಗಣಿಗಾರಿಕೆ ನಡೆಯುತ್ತಿತ್ತು. ನಂತರ ಸುತ್ತ ಮುತ್ತಲಿನ ಗ್ರಾಮಸ್ಥರ ಹೋರಾಟದ ಫಲವಾಗಿ ಅಂದಿನ ಸಚಿವರಾದ ದಿ.ಮಹದೇವಪ್ರಸಾದ್ ಅವರು ಗ್ರಾಮಸ್ಥರ ಹಾಗೂ ಕಾರ್ಯಕರ್ತರ ಹೋರಾಟಕ್ಕೆ ಮಣಿದು ಗಣಿಗಾರಿಕೆ ಸ್ಥಗಿತಗೊಳಿಸಿದ್ದರು.

ಅದರೇ ಈಗ ಮತ್ತೆ ಗಣಿಗಾರಿಕೆ ಪ್ರಾಂಭಿಸಲು ಗಣಿಕುಳಗಳು ಪ್ರಯತ್ನ ಪಡುತ್ತಿದ್ದು ಇದೇ ವಿಚಾರವಾಗಿ ಗುಡ್ಡದ ಸಮೀಪದ ಜಮೀನಿನ ರೈತರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದು, ಮನವಿ ಮೇರೆಗೆ ಸ್ಥಳಕ್ಕೆ ಶಿರಸ್ತೇದಾರರು ಆಗಮಿಸಿ ಸ್ಥಳ ವಿಕ್ಷಣೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸ್ಥಳೀಯ ಗ್ರಾಮಸ್ಥರು ಯಾವುದೇ ಕಾರಣಕ್ಕೂ ಇಲ್ಲಿ ಗಣಿಗಾರಿಕೆಗೆ ಅವಕಾಶ ನಿಡುವುದಿಲ್ಲ ಎಂದು ಪ್ರತಿಭಟನೆ ಮಾಡಿ ಇತ್ತೀಚಿಗೆ ಗುಡ್ಡ ಕುಸಿತವಾಗುತ್ತಿರುವುದು ಕಂಡು ಬಂದರೂ ತಾಲೂಕಿನಲ್ಲಿ ಮತ್ತೆ ಗಣಿಗಾರಿಕೆ ಕುರಿತು ತಾಲೂಕು ಆಡಳಿತಕ್ಕೆ ತಿಳಿಯದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಮುಖಂಡರಾದ ಕಂದೇಗಾಲ ಶಾಂತಪ್ಪ, ವೃಷಬೆಂದ್ರ, ಮೋಹನ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ, ಮಹೇಶ್ ನಾಗಮಲ್ಲಪ್ಪ, ಕಂದೇಗಾಲ ಚಂದ್ರು, ಶಿಂಡನಪುರ ಹಾಜರಿದ್ದರು.


Spread the love