ಅಕ್ರಮ ಗಾಂಜಾ ಮಾರಾಟ – ಒರ್ವನ ಬಂಧನ

Spread the love

ಅಕ್ರಮ ಗಾಂಜಾ ಮಾರಾಟ – ಒರ್ವನ ಬಂಧನ

ಮಂಗಳೂರು: ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕುತ್ತಾರ್‌ ಪದವು ಮದನಿ ನಗರ ನಿವಾಸಿ ಅಬ್ದುಲ್‌ ಹಕೀಂ@ಕರಾಟೆ ಹಕಿಂ (45) ಎಂದು ಗುರುತಿಸಲಾಗಿದೆ.

ಕೊಣಾಜೆ ಪೊಲೀಸ್ ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ ಪೊಲೀಸ್ ನಿರೀಕ್ಷಕರವರಿಗೆ ದೇರಳಕಟ್ಟೆ ಕೆ.ಎಸ್ ಹೆಗಡೆ ಆಸ್ಪತ್ರೆಯ ಎದುರುಗಡೆ ಆಟೋ ರಿಕ್ಷಾವೊಂದರಲ್ಲಿ, ಅಕ್ರಮವಾಗಿ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಸಿಬ್ಬಂದಿಗಳು ಹಾಗೂ ಪಂಚರೊಂದಿಗೆ ತಣ್ಣೀರು ಸ್ಥಳಕ್ಕೆ ತೆರಳಿ ದಾಳಿ ಮಾಡಿ ಆರೋಪಿ ಅಬುಲ್ ಹಕೀಂ @ ಕರಾಟೆ ಹಕೀಂ ನನ್ನು ವಶಕ್ಕೆ ಪಡೆದುಕೊಂಡು ಆತನಿಂದ 40,300 ರೂ ಮೌಲ್ಯದ 4 ಕೆಜಿ 150 ಗ್ರಾಂ, ಗಾಂಜಾ, 120000/- ರೂ ಮೌಲ್ಯದ 20 ಗ್ರಾಂ MDMA, 125000/- ರೂ. ಮೌಲ್ಯದ ಆಟೋರಿಕ್ಷಾ, 13000 ರೂ. ಮೌಲ್ಯದ 2 ಮೊಬೈಲ್ ಪೋನ್, ವಶಕ್ಕೆ ಪಡೆದುಕೊಳ್ಳಲಾಗಿದ್ದು, ವಶಕ್ಕೆ ಪಡೆದುಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ 2,98,300/- ರೂಪಾಯಿಗಳು ಆಗಿದ್ದು, ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಯಾದ ಅಬ್ದುಲ್ ಹಕೀಂ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದು, ಇತನ ಮೇಲೆ ಒಟ್ಟು 20 ಪ್ರಕರಣಗಳು ದಾಖಲಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ಪೊಲೀಸ್ ಆಯುಕ್ತರಾದ ಶಶಿಕುಮಾರ್ ಎನ್ IPS, ನಿರ್ದೇಶನದಂತೆ, ಉಪ ಪೊಲೀಸ್ ಆಯುಕ್ತರಾದ ಹರಿರಾಮ್ ಶಂಕರ್ IPS, ದಿನೇಶ್ ಕುಮಾರ್ ಬಿ.ಸ್ ಮತ್ತು ಸಹಾಯಕ ಪೊಲೀಸ್ ಆಯುಕ್ತರಾದ ದಿನಕರ ಶೆಟ್ಟಿರವರ ಮಾರ್ಗದರ್ಶನದಲ್ಲಿ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರ ಮುಂದಾಳತ್ವದಲ್ಲಿ, ಉಪ-ನಿರೀಕ್ಷಕರಾದ ಮಲ್ಲಿಕಾರ್ಜುನ್ ಬಿರಾದಾರ ಸಿಬ್ಬಂದಿಗಳಾದ ಎ.ಎಸ್.ಐ ಮೋಹನ್, ಸಂಜೀವ ಮತ್ತು ಮಂಜಪ್ಪ, ಅಶೋಕ್, ಶಿವಕುಮಾರ್, ಮಂಜುನಾಥ ಸಿ, ಉಮೇಶ್, ಕೆಂಚಪ್ಪ, ಮಹಿಳಾ ಸಿಬ್ಬಂದಿಗಳಾದ ರೇಷ್ಮಾ ರಮಾ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿರುತ್ತಾರೆ.


Spread the love