ಅಕ್ರಮ ಗೋಸಾಗಾಟ : ಅಜೆಕಾರು ಪೊಲೀಸರಿಂದ ಗೋವುಗಳ ರಕ್ಷಣೆ

Spread the love

ಅಕ್ರಮ ಗೋಸಾಗಾಟ : ಅಜೆಕಾರು ಪೊಲೀಸರಿಂದ ಗೋವುಗಳ ರಕ್ಷಣೆ

ಕಾರ್ಕಳ: ಟೆಂಪೊವೊಂದರಲ್ಲಿ ಅಕ್ರಮವಾಗಿ ಗೋವುಗಳನ್ನು ತುಂಬಿಸಿಕೊಂಡು ಕಳ್ಳ ಸಾಗಣೆ ಮಾಡುತ್ತಿದ್ದ ವಾಹವನ್ನು ಅಜೆಕಾರು ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಗೋವುಗಳನ್ನು ರಕ್ಷಣೆ ಮಾಡಿದ ಘಟನೆ ಭಾನುವಾರ ಬೆಳಗ್ಗಿನ ಜಾವ ನಡೆದಿದೆ.

ಶನಿವಾರ ರಾತ್ರಿ ಅಜೆಕಾರು ಪಿ.ಎಸೈ ಸುದರ್ಶನ ದೊಡಮನಿ ತನ್ನ ಇಲಾಖೆಯ ಜೀಪ್‌ ನಲ್ಲಿ ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ದೊಂಡೆರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ 407 ಸರಕು ಸಾಗಾಣಿಕ ಟೆಂಪೋ ಚಾಲನೆಯ ಸ್ಥಿತಿಯಲ್ಲಿ ನಿಂತಿದ್ದು, ಪಿ.ಎಸ್.ಐ ರವರು ಟೆಂಪೋ ಪಕ್ಕದಲ್ಲಿ ಜೀಪನ್ನು ನಿಲ್ಲಿಸಿ ಅದರ ಚಾಲಕನಲ್ಲಿ ಎಲ್ಲಿಂದ ಬಂದದ್ದು ಎಂಬ ಬಗ್ಗೆ ವಿಚಾರಿಸಿದಾಗ ಅದರ ಚಾಲಕನು ಟೆಂಪೋ ವನ್ನು ಒಮ್ಮೇಲೆ ಮುಂದಕ್ಕೆ ಚಲಾಯಿಸಿದ್ದು, ಪಿ.ಎಸ್.ಐ ರವರು ಅವನಿಗೆ ಟೆಂಪೋವನ್ನು ನಿಲ್ಲಿಸುವಂತೆ ಸೂಚನೆ ನೀಡಲಾಗಿಯೂ ನಿರ್ಲಕ್ಷಿಸಿ ವಾಹನವನ್ನು ನಿಲ್ಲಿಸದೆ ಅತೀ ವೇಗವಾಗಿ ಮುಂದಕ್ಕೆ ಚಲಾಯಿಸಿದ್ದನ್ನು ಕಂಡು ಅನುಮಾನಗೊಂಡು ಹಿಂದಿನಿಂದ ಟೆಂಪೋವನ್ನು ಬೆನ್ನಟ್ಟಿದ್ದು, ಅದರ ಸವಾರನು ಟೆಂಪೋವನ್ನು ಹರಿಖಂಡಿಗೆ, ಪೆರ್ಡೂರು, ಕುಕ್ಕೆಹಳ್ಳಿ, ಕೆ.ಜಿ. ರೋಡ್, ಸಂತೆಕಟ್ಟೆ, ಕಿನ್ನಿಮುಲ್ಕಿ, ಸಂಪಿಗೆನಗರ, ಪಿತ್ರೋಡಿ, ಉದ್ಯಾವರ ತಲುಪಿ ಅಲ್ಲಿನ ಒಳ ರಸ್ತೆಗಳಲ್ಲಿ ತಿರುಗುತ್ತಾ ಉದ್ಯಾವರ ಹೈವೆಗೆ ಬಂದು ಅಲ್ಲಿಂದ ಕರಾವಳಿ ಜಂಕ್ಷನ್ ಮೂಲಕ ಉಡುಪಿ, ಮಣಿಪಾಲ, ಪರ್ಕಳದ ಮೂಲಕ ಹಿರಿಯಡ್ಕದ ಪೆಟ್ರೋಲ್ ಪಂಪ್ ಬಳಿಯ ರಸ್ತೆಯ ಬದಿಯಲ್ಲಿ ಟೆಂಪೋವನ್ನು ನಿಲ್ಲಿಸಿ ಅದರಲ್ಲಿದ್ದ ಓರ್ವ ವ್ಯಕ್ತಿಯು ಲಾರಿಯನ್ನು ಇಳಿದು ರಸ್ತೆ ಬದಿಯಲ್ಲಿ ಓಡಿ ಹೋಗಿದ್ದಾನೆ.

407 ಸರಕು ಸಾಗಾಣಿಕ ಟೆಂಪೊವನ್ನು ಪರಿಶೀಲಿಸಿದಾಗ ಮುಂಭಾಗದಲ್ಲಿಯಾಗಲಿ, ಹಿಂಬಂದಿಯಲ್ಲಾಗಲಿ ಯಾವುದೇ ನಂಬ್ರ ಪ್ಲೇಟ್ ಇಲ್ಲದೆ ಇರುವುದು ಕಂಡುಬಂದಿದ್ದು ಟೇಂಪೊ ಹಿಂಬಂದಿಯಲ್ಲಿ ಹೊದಿಸಿದ್ದ ತರ್ಪಾಲನ್ನು ಮೇಲಕ್ಕೆ ಎತ್ತಿ ನೋಡಿದಾಗ ಒಳಗೆ ಕಪ್ಪು ಬಣ್ಣದ ಹೆಣ್ಣು ದನ-1, ಕಂದು ಬಣ್ಣದ ಗಂಡು ಹೋರಿ-1 ಹಾಗೂ ಕಂದು ಬಣ್ಣದ ಗಂಡು ಕರು -1 ಇದ್ದು, ಇವುಗಳನ್ನು ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಕಂಡುಬಂದಿದೆ, ಗೋವುಗಳ ಅಂದಾಜು ಮೌಲ್ಯ 20,000/- ರೂಗಳಾಗಿದ್ದು, ದನ ಸಾಗಾಟ ಮಾಡುತ್ತಿದ್ದ 407 ಟೆಂಪೋ ಅಂದಾಜು ಮೌಲ್ಯ 4,00,000/- ರೂಗಳಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love