
Spread the love
ಅಕ್ರಮ ಗೋ ಸಾಗಾಟ – ಹೆಬ್ರಿ ಪೊಲೀಸರಿಂದ 14 ಗೋವುಗಳ ರಕ್ಷಣೆ
ಕಾರ್ಕಳ: ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ 14 ಗೋವುಗಳನ್ನು ಹೆಬ್ರಿ ಪೊಲೀಸರು ರಕ್ಷಣೆ ಮಾಡಿದ ಘಟನೆ ಬುಧವಾರ ಸಂಭವಿಸಿದೆ.
ಹೆಬ್ರಿ ಠಾಣಾ ವ್ಯಾಪ್ತಿಯ ಬ್ಯಾಣ ಎಂಬಲ್ಲಿ ಅಕ್ರಮವಾಗಿ ಗೋಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಬ್ರಿ ಠಾಣಾ ಉಪನಿರೀಕ್ಷಕರಾದ ಸುದರ್ಶನ್ ದೊಡ್ಡಮನಿ ಅವರ ತಂಡ ಬೆನ್ನಟ್ಟಿದ್ದು, ಈ ವೇಳೆ ಆರೋಪಿಗಳ ವಾಹನ ಪಕ್ಕದ ಅಂಗಡಿ ಡಿಕ್ಕಿ ಹೊಡೆದಿದ್ದು ಅದರಲ್ಲಿದ್ದ ಆರೋಪಿಗಳು ತಪ್ಪಿಸಿಕೊಂಡು ಓಡಿ ಹೋಗಿದ್ದು ವಾಹನದಲ್ಲಿದ್ದ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 14 ಗೋವುಗಳನ್ನು ರಕ್ಷಣೆ ಮಾಡಿದ್ದಾರೆ.
ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Spread the love