ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ಗಂಗೊಳ್ಳಿ ಪೊಲೀಸರ ದಾಳಿ – ಮೂರು ವಾಹನ ವಶಕ್ಕೆ

Spread the love

ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ಗಂಗೊಳ್ಳಿ ಪೊಲೀಸರ ದಾಳಿ – ಮೂರು ವಾಹನ ವಶಕ್ಕೆ

ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮೊವಾಟಿ ಹಾಗೂ ತ್ರಾಸಿ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕಾ ಪ್ರದೇಶಕ್ಕೆ ಗಂಗೊಳ್ಳಿ ಪಿ ಎಸ್ ಐ ಹರೀಶ್ ಆರ್ ಹಾಗೂ ಸಿಬಂದಿಗಳು ಭಾನುವಾರ ರಾತ್ರಿ ದಾಳಿ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಪೊಲೀಸರು ಮರಳು ಸಾಗಾಟಕ್ಕಾಗಿ ತಂದಿರಿಸಿದ್ದ ಮೂರು ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಧಾಳಿಯ ವೇಳೆ ಮರಳು ಸಾಗಾಟ ವಾಹನದ ಚಾಲಕರು ಸೇರಿದಂತೆ ಆರೋಪಿಗಳು ತಪ್ಪಿಸಿಕೊಂಡು ಹೋಗಿದ್ದು ವಾಹನಗಳನ್ನು ಠಾಣೆಯಲ್ಲಿ ತಂದಿರಿಸಲಾಗಿದೆ.

ಸ್ಥಳೀಯರು ನೀಡಿದ್ದ ಮಾಹಿತಿಯಂತೆ ದಾಳಿ ನಡೆಸಿದ್ದು ಎಲ್ಲಾ ವಿವರಗಳ ಕುರಿತಾಗಿ ವರದಿಯೊಂದನ್ನು ಸಿದ್ದಪಡಿಸಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಪಿಎಸ್ ಐ ಹರೀಶ್ ಆರ್ ಮಾಹಿತಿ ನೀಡಿದ್ದಾರೆ.


Spread the love