ಅಕ್ರಮ ಮರಳುಗಾರಿಕೆಗೆ ದಾಳಿ: ಎರಡು ಡ್ರೆಜ್ಜಿಂಗ್ ಬೋಟ್, ಟಿಪ್ಪರ್, ಮರಳು ವಶಕ್ಕೆ

Spread the love

ಅಕ್ರಮ ಮರಳುಗಾರಿಕೆಗೆ ದಾಳಿ: ಎರಡು ಡ್ರೆಜ್ಜಿಂಗ್ ಬೋಟ್, ಟಿಪ್ಪರ್, ಮರಳು ವಶಕ್ಕೆ

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಮಧುರ ಪಟ್ಟಣ ಬಸದಿ ಬಳಿ ಅನಧಿಕೃತವಾಗಿ ಮರಳುಗಾರಿಕೆ ನಡೆಯುತಿದ್ದ ಪ್ರದೇಶಕ್ಕೆ ಅನಿರೀಕ್ಷಿತ ದಾಳಿ ಮಾಡಿ ಮರಳು ಮತ್ತು ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನಿರ್ದೇಶನದಂತೆ ಕುಂದಾಪುರದ ಸಹಾಯಕ ಕಮಿಷನರ್ ಕೆ. ರಾಜು ಹಾಗೂ ಇತರ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಸುವರ್ಣ ನದಿಯಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದ ಬಗ್ಗೆ ದೂರುಗಳಿದ್ದು ಖಚಿತ ಮಾಹಿತಿ ಬಂದ ಹಿನ್ನೆಲೆ ಡಿಸಿಯವರ ಸೂಚನೆಯಂತೆ ಈ ದಿಡೀರ್ ದಾಳಿ ನಡೆಸಲಾಗಿದೆ.

ಅಕ್ರಮ ಮರಳು ತೆಗೆಯಲು ಬಳಸುತ್ತಿದ್ದ ಪಂಪು ಅಳವಡಿಸಿದ ಡ್ರೆಜ್ಜಿಂಗ್ ಬೋಟ್, ಒಂದು ಟಿಪ್ಪರ್ ಹಾಗೂ 10 ಟನ್ ಮರಳು ವಶಕ್ಕೆ ಪಡೆಯಲಾಗಿದ್ದು ಅಜೆಕಾರು ಠಾಣೆ ಮತ್ತು ಗಣಿ, ಭೂ ವಿಜ್ಞಾನ ಇಲಾಖೆ ಅಧಿಕಾರಿಯವರಿಗೆ ಹಸ್ತಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಗಣಿ ಇಲಾಖೆ ಭೂ ವಿಜ್ಞಾನಿ ಗೌತಮ್ ಶಾಸ್ತ್ರಿ, ಅಜೆಕಾರ್ ಎಸ್‌ಐ ಸುದರ್ಶನ್ ಅಜೆಕಾರು ಹೋಬಳಿ, ಕಾರ್ಕಳ ಹೋಬಳಿಯ ಕಂದಾಯ ನಿರೀಕ್ಷಕರು, ಮರ್ಣೆ ಗ್ರಾಮದ ಗ್ರಾಮ ಕರಣಿಕರು ಹಾಗೂ ಪಿಡಿಒ ಪಾಲ್ಗೊಂಡಿದ್ದರು..

ಇನ್ನೊಂದು ಪ್ರಕರಣದಲ್ಲಿ ಮಂಗಳವಾರ ಮಧ್ಯಾಹ್ನ ಅಕ್ರಮ ಮರಳುಗಾರಿಕೆ ಬಗ್ಗೆ ಬಂದ ಮಾಹಿತಿ ಯಂತೆ ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ಸಂದೀಪ್, ಬ್ರಹ್ಮಾವರ ತಾಲೂಕು ಭೂ ವಿಜ್ಞಾನಿ ಹಝೀರ ಹಾಗೂ ಬ್ರಹ್ಮಾವರ ಪೊಲೀಸರು ಚೇರ್ಕಾಡಿ ಗ್ರಾಮದ ಮಡಿಸಾಲು ಹೊಳೆ ಸಮೀಪ ದಾಳಿ ನಡೆಸಿದ್ದು, ಸ್ಥಳದಲ್ಲಿದ್ದ ಡ್ರೆಜ್ಜಿಂಗ್ ಬೋಟ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


Spread the love

Leave a Reply

Please enter your comment!
Please enter your name here