ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಂಗೊಳ್ಳಿ ಪೊಲೀಸ್ ದಾಳಿ: ಐವರು ವಶಕ್ಕೆ

Spread the love

ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಂಗೊಳ್ಳಿ ಪೊಲೀಸ್ ದಾಳಿ: ಐವರು ವಶಕ್ಕೆ

ಕುಂದಾಪುರ: ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಮೋವಾಡಿಯಲ್ಲಿ ಅಕ್ರಮ ಮರಳುಗಾರಿಕೆ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ವಶಕ್ಕೆ ಪಡೆದವರನ್ನು ಕಾರ್ಮಿಕರಾದ ಉತ್ತರಪ್ರದೇಶ ಮೂಲದ ಮೈನೇಜರ್ (30), ಗುದ್ದು ಕುಮಾರ (20), ಜಿತೇಂದ್ರ ಕುಮಾರ್ (25), ದಿನೇಶ (22), ಸ್ಥಳೀಯ ನಿವಾಸಿ ಆಲ್ಬನ್ (42) ಎಂದು ಗುರುತಿಸಲಾಗಿದೆ.

ಸೆ.12ರಂದು ಮೋವಾಡಿ ಪ್ರದೇಶದಲ್ಲಿ ಅಕ್ರಮವಾಗಿ ಮರಳುಗಾರಿಕೆ ಮಾಡುತ್ತಿದ್ದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಕ್ರಮ ಮರಳು ಅಡ್ಡೆಯ ಮೇಲೆ ಗಂಗೊಳ್ಳಿ ಠಾಣೆ ಪಿಎಸ್ಸೈ ಹರೀಶ್ ಆರ್. ಹಾಗೂ ಸಿಬ್ಬಂದಿ ತಂಡ ಈ ದಾಳಿ ನಡೆಸಿದೆ.

ಕಾರ್ಯಾಚರಣೆಯಲ್ಲಿ ನಾಲ್ವರು ಉತ್ತರ ಪ್ರದೇಶದ ಕಾರ್ಮಿಕರು ಹಾಗೂ ಓರ್ವ ಸ್ಥಳೀಯ ಅಕ್ರಮ ಧಕ್ಕೆ ನಡೆಸುತ್ತಿದ್ದ ಅಲ್ಟನ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ವಶಕ್ಕೆ ಪಡೆದವರಿಂದ ಕೃತ್ಯಕ್ಕೆ ಬಳಿಸಿದ ಅಂದಾಜು ತಲಾ 2 ಲಕ್ಷ ರೂಪಾಯಿ ಮೌಲ್ಯದ ಪ್ಲೈವುಡ್ ನ ಪೈಬರ್ ಕೋಟ್ ದೋಣಿ – 2, ಅಂದಾಜು 2,000/-ರೂ ಮೌಲ್ಯದ ಪ್ಲಾಸ್ಟಿಕ್ ಬುಟ್ಟಿ -8, ಅಂದಾಜು 1,800/-ರೂ ಮೌಲ್ಯದ ಕಬ್ಬಿಣದ ಬಕೆಟ್ – 6, ಅಂದಾಜು 200/-ರೂ ಮೌಲ್ಯದ ಮರದ ಹಲಗೆ-2, ಅಂದಾಜು 6,000/-ರೂ ಮೌಲ್ಯದ ಕಬ್ಬಿಣದ ಸ್ಟ್ಯಾಂಡ್ -1 ಮತ್ತು ಅಂದಾಜು 3,500/-ರೂ ಮೌಲ್ಯದ ಒಂದು ಯುನಿಟ್ ಮರಳನ್ನು ವಶಕ್ಕೆ ಪಡೆದಿದ್ದಾರೆ.


Spread the love

Leave a Reply

Please enter your comment!
Please enter your name here