ಅಕ್ರಮ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು

Spread the love

ಅಕ್ರಮ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು

ಗುಂಡ್ಲುಪೇಟೆ: ಅಕ್ರಮವಾಗಿ ವಿದ್ಯುತ್ ಹೊಂದಿದ್ದ ತಂತಿ ಬೆಲಿಯನ್ನು ಸ್ಪರ್ಶಿಸಿ ಕಾಡಾನೆ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬೇಗೂರು ಸಮೀಪದ ಆಲತೂರು ಗ್ರಾಮದಲ್ಲಿ ನಡೆದಿದೆ.

ಬಂಡೀಪುರ ಹುಲಿಯೋಜನೆ ಗುಂಡ್ಲುಪೇಟೆ ಉಪವಿಭಾಗ ಓಂಕಾರ ವನ್ಯಜೀವಿ ವಲಯ ವ್ಯಾಪ್ತಿಯ ಆಲತೂರು ಗ್ರಾಮದ ರೈತ ಜಗನ್ನಾಥ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಡಲೆಕಾಯಿ ಫಸಲನ್ನು ಹಂದಿಗಳಿಂದ ರಕ್ಷಣೆ ಮಾಡುವುದಕ್ಕಾಗಿ ತಂತಿ ಬೇಲಿಗೆ ವಿದ್ಯುತ್ ಸಂಪರ್ಕ ನೀಡಲಾಗಿತ್ತು. ಅರಣ್ಯದಿಂದ ಆಹಾರ ಅರಸಿ ಬಂದ 35ರಿಂದ 40ವರ್ಷದ ಹೆಣ್ಣಾನೆ ಬೇಲಿಯನ್ನು ಸ್ಪರ್ಶಿಸಿದೆ ಪರಿಣಾಮ ಸ್ಥಳದಲ್ಲಿಯೆ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗುಂಡ್ಲುಪೇಟೆ ಉಪವಿಭಾಗ ಅರಣ್ಯಾಸಂರಕ್ಷಣಾಧಿಕಾರಿ ಕೆ. ಪರಮೇಶ್ , ಓಂಕಾರ ವಲಯ ಅರಣ್ಯಾಧಿಕಾರಿ ಹೆಚ್ ಎನ್ ನಾಗನಾಯಕ, ಇಲಾಖೆ ವೈದ್ಯರಾದ ವಾಸಿಂ ಮಿರ್ಜಾ ಚೆಸ್ಕಾಂ ಸಹಾಯಕ ಕಾರ್ಯ ಪಾಲಕ ಅಭಿಯಂತರಾದ ರಾಮಚಂದ್ರ , ಜಾಗೃತದಳದ ಉಪ ನಿರಿಕ್ಷಕ ದಿಲೀಪ್, ಅರಕ್ಷಕ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ಅನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಅರಣ್ಯ ಮೊಕದ್ದಮೆಯನ್ನು ದಾಖಲು ಮಾಡಿ ನಾಪತ್ತೆಯಾಗಿರುವ ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.


Spread the love