
Spread the love
ಅಗುಂಬೆ ಘಾಟ್ ನಲ್ಲಿ ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾತಕ್ಕೆ ಮುಖ ಮಾಡಿ ನಿಂತ ಲಾರಿ
ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿಯೊಂದು ತಡೆಗೋಡೆಗೆ ಡಿಕ್ಕಿ ಹೊಡೆದು ಪ್ರಪಾದತ್ತ ತಿರುಗಿ ನಿಂತ ಘಟನೆ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ಆಗುಂಬೆ ಘಾಟ್ ರಸ್ತೆಯಲ್ಲಿ ಸಂಭವಿಸಿದೆ.
ಶಿವಮೊಗ್ಗದಿಂದ ಹೆಬ್ರಿಗೆ ಭತ್ತ ತುಂಬಿಕೊಂಡು ಬರುತ್ತಿದ್ದ ಕ್ಯಾಂಟರ್ ಲಾರಿಯೊಂದು ಗುರುವಾರ ಬೆಳಗ್ಗಿನ ಜಾವ ಆಗುಂಬೆ ಘಾಟ್ ರಸ್ತೆಯ 6 ಮತ್ತು 7ನೇ ತಿರುವಿನ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ತಡೆಗೊಡೆಗೆ ಡಿಕ್ಕಿ ಹೊಡೆದು ಪ್ರಪಾತದತ್ತ ವಾಲಿ ನಿಂತಿದೆ. ತಡೆಗೋಡೆಯ ಕಲ್ಲುಗಳು ಲಾರಿಯ ಛಾಸಿಗೆ ತಾಗಿದ್ದರಿಂದ ಲಾರಿ ನಿಂತಿದೆ.
ಕ್ಯಾಂಟರ್‌ನಲ್ಲಿ ಭತ್ತದ ಲೋಡ್ ಇದ್ದಿದ್ದರಿಂದ ಲಾರಿ ಪ್ರಪಾತಕ್ಕೆ ಧುಮುಕದೆ ನಿಂತಿದೆ.ಲಾರಿಯ ಚಾಲಕನ್ನು ರಕ್ಷಣೆ ಮಾಡಲಾಗಿದೆ. ಅಪಘಾತದಿಂದಾಗಿ ಕೆಲಕಾಲ ಘಾಟಿಯಲ್ಲಿ ವಾಹನ ಸಂಚಾರ ವ್ಯತ್ಯಯವಾಗಿತ್ತು.
ಸ್ಥಳಕ್ಕೆ ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
Spread the love