Home Mangalorean News Kannada News ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ

ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ

Spread the love

ಅಗ್ನಿ ಅವಘಡ ಮತ್ತು ಪ್ರಥಮ ಚಿಕಿತ್ಸೆ ಅಣಕು ಪ್ರದರ್ಶನ

ಮ0ಗಳೂರು: ಮಂಗಳೂರಿನ ಅತ್ತಾವರದಲ್ಲಿರುವ ಮಣಿಪಾಲ ಸ್ಕೂಲ್‍ನಲ್ಲಿ ಶಾಲಾ ಮಕ್ಕಳಿಗಾಗಿ ಅಗ್ನಿ ಅವಘಡ ನಿರ್ವಹಣೆ ಮತ್ತು ಪ್ರಥಮ ಚಿಕಿತ್ಸೆ ಕುರಿತು ಅಣಕು ಪ್ರದರ್ಶನ ನಡೆಯಿತು. ಜಿಲ್ಲಾ ಗೃಹರಕ್ಷಕದಳ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಜಿಲ್ಲಾ ಅಗ್ನಿಶಾಮಕದಳ ಮಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ಜರಗಿತು.

agni-prathakshike

ಅಗ್ನಿಶಾಮಕದಳದ ಅಧಿಕಾರಿ ಶೇಖರ್ ಗೃಹರಕ್ಷಕದಳದ ಸಮಾದೇಷ್ಟ ಡಾ. ಮುರಲೀ ಮೋಹನ್ ಚೂಂತಾರು, ಉಪಸಮಾದೇಷ್ಟ ರಮೇಶ್, ಗೃಹರಕ್ಷಕರಾದ ಸತೀಶ್, ಸನತ್, ಸಂತೋಷ್, ಲಿಂಗಪ್ಪ, ಶೈಲೇಶ್ ಮುಂತಾದವರು ಈ ಶಿಬಿರದಲ್ಲಿ ಅಣಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ಶಾಲಾ ಮುಖ್ಯೋಪಾದ್ಯಾಯಿನಿ ಅನುರಾಧ ಶಿವರಾಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಶಾಲಾ ಶಿಕ್ಷಕಿಯರಾದ ಪಾರ್ವತಿ, ಮೀನಾ ಮಲಾನಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Spread the love

Exit mobile version