
ಅಚ್ಲಾಡಿ ಸನ್ಶೈನ್ ಗೆಳೆಯರ ಬಳಗ ವಾರ್ಷಿಕೋತ್ಸವ, ಸಾಧಕರಿಗೆ ಸಮ್ಮಾನ
ಕೋಟ: ಸನ್ಶೈನ್ ಗೆಳೆಯರ ಬಳಗ ರಿ. ಕ್ರೀಡಾಸಂಘ ಅಚ್ಲಾಡಿಯ 14ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜ.8ರಂದು ಅಚ್ಲಾಡಿಯ ಸನ್ಶೈನ್ ಕ್ರೀಡಾಂಗಣದಲ್ಲಿ ಜರಗಿತು.
ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರಾವಳಿಯ ಮಣ್ಣಿನಲ್ಲಿ ಸಾಂಸ್ಕøತಿಕವಾಗಿ, ಧಾರ್ಮಿಕವಾಗಿ ವಿಶೇಷವಾದ ಶಕ್ತಿ ಅಡಗಿದೆ. ಸಮಾಜಕ್ಕೆ ಉತ್ತಮ ನಾಯಕತ್ವ ನೀಡುವ ಶಕ್ತಿ ಇಲ್ಲಿನ ಯುವ ಜನರಿಗಿದೆ. ಆ ಶಕ್ತಿಯನ್ನು ಗುರುತಿಸಿ ಪೆÇೀಷಿಸುವ ಕಾರ್ಯ ಪ್ರತಿಯೊಬ್ಬರಿಂದ ಆಗಬೇಕು. ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರವನ್ನು ನೀಡಬೇಕು ಎಂದರು.
ಕಲರ್ಸ್ ಕನ್ನಡ ವಾಹಿನಿಯ ಮಜಾ ಟಾಕೀಸ್ ಖ್ಯಾತಿಯ ತರಂಗ ವಿಶ್ವ ಮಾತನಾಡಿ, ಸಮಾಜವನ್ನು ಕಟ್ಟಿ ಬೆಳೆಸುವ ಕಾರ್ಯ ಯುವ ಸಂಘಟನೆಗಳಿಗಿದೆ. ಸನ್ಶೈನ್ ಗೆಳೆಯರ ಬಳಗದಲ್ಲಿ ಉತ್ತಮ ಯುವ ಶಕ್ತಿ ಹೊಂದಿದ್ದು, ಸಮಾಜ ಸೇವೆ ನಿರಂತರವಾಗಿ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಸಂಘಟನೆಯ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್ ಅವರು ಸಂಘದ ನೂತನ ಅಧ್ಯಕ್ಷ ಸುಶಾಂತ್ ಶೆಟ್ಟಿ, ಕಾರ್ಯದರ್ಶಿ ಗುರುಪ್ರಸಾದ್ ಕಾಂಚನ್ ಅವರಿಗೆ ಪದಪ್ರದಾನ ನೆರವೇರಿಸಿ ಶುಭ ಹಾರೈಸಿದರು.
ಈ ಸಂದರ್ಭ ನಿವೃತ್ತ ಮುಖ್ಯ ಶಿಕ್ಷಕ ಭೋಜ ಶೆಟ್ಟಿ ಅಚ್ಲಾಡಿಯವರಿಗೆ ಗುರುವಂದನೆ, ಈಶ್ವರ ಮಲ್ಪೆ, ವಾಸುದೇವ ಪೂಜಾರಿಯವರಿಗೆ ಸೇವಾ ಸಮ್ಮಾನ, ಡ್ರಾಮಾ ಜ್ಯೂನಿಯರ್ ಸೀಸನ್ -9 ವಿಜೇತೆ ಸಮೃದ್ಧಿ ಕುಂದಾಪುರ ಅವರಿಗೆ ಪ್ರತಿಭಾ ಸಮ್ಮಾನ ನೆರವೇರಿಸಲಾಯಿತು.
ಕನ್ನಡ ಚಿತ್ರ ನಿರ್ಮಾಪಕ ನಾಗೇಂದ್ರ ಜೋಯಿಸ್, ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸುಪ್ರಸಾದ್ ಶೆಟ್ಟಿ, ಜಿ.ಪಂ. ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಹೆಗ್ಗುಂಜೆ ಗ್ರಾ.ಪಂ. ಸದಸ್ಯ ಗುರುಪ್ರಸಾದ್, ಉದ್ಯಮಿ ಗಣೇಶ್ ಪ್ರಸಾದ್ ಕಾಂಚನ್ ಶಿರಿಯಾರ, ಅಚ್ಲಾಡಿ ಸಿದ್ಧಿವಿನಾಯಕ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿ ಅಚ್ಲಾಡಿ, ಉದ್ಯಮಿ ಅಶೋಕ್ ಪ್ರಭು ಸಾೈಬ್ರಕಟ್ಟೆ, ಸಂಘಟನೆಯ ಗೌರವಾಧ್ಯಕ್ಷ ಯೋಗೀಶ್ ಅಚ್ಲಾಡಿ ಉಪಸ್ಥಿತರಿದ್ದರು.
ಸಂಘಟನೆಯ ಸದಸ್ಯ ಗಿರೀಶ್ ಎಂ.ಎನ್. ಸ್ವಾಗತಿಸಿ, ಅಭಿಜಿತ್ ಪಾಂಡೇಶ್ವರ, ಕಿರಣ್ ಕೆ.ಪಿ. ಕಾರ್ಯಕ್ರಮ ನಿರೂಪಿಸಿ, ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ವಂದಿಸಿದರು.
ಸಭಾ ಕಾರ್ಯಕ್ರಮದ ಅನಂತರ ಸಂಗೀತ ಸಂಜೆ, ಡ್ಯಾನ್ಸ್ ಧಮಾಕ, ನಾಟಕ ಪ್ರದರ್ಶನ ಜರಗಿತು.