ಅಜಯ್‌ ತೊಟ್ಟಂ ತಂಡಕ್ಕೆ ವಿಎಮ್.ಎಫ್.‌ ಪ್ರಶಸ್ತಿ, ಪವಿ ಲಕ್ಷ್ಮೀನಗರ ರನ್ನರ್ಸ್‌

Spread the love

ಅಜಯ್‌ ತೊಟ್ಟಂ ತಂಡಕ್ಕೆ ವಿಎಮ್.ಎಫ್.‌ ಪ್ರಶಸ್ತಿ, ಪವಿ ಲಕ್ಷ್ಮೀನಗರ ರನ್ನರ್ಸ್‌

ಉಡುಪಿ: ವೀರಮಾರುತಿ ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ಇವರ ಆಶ್ರಯದಲ್ಲಿ ಆಯೋಜಿಸಿದ 90 ಗಜಗಳ ಕ್ರಿಕೆಟ್‌ ಪಂದ್ಯಾಟದ ವೀರ ಮಾರುತಿ ಟ್ರೋಫಿಯನ್ನು ಅಜಯ್‌ ತೊಟ್ಟಂ ತಂಡ ವಿಜಯಿಯಾಗಿ ಪವಿ ಲಕ್ಷ್ಮೀನಗರ ತಂಡ ರನ್ನರ್‌ ಅಪ್‌ ಪ್ರಶಸ್ತಿಯನ್ನು ಭಾನುವಾರ ಪಡೆದುಕೊಂಡಿತು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಖ್ಯಾತ್‌ ಶೆಟ್ಟಿ, ಗೌರವಾಧ್ಯಕ್ಷ ದಯಾನಂದ ಶೆಟ್ಟಿ, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ಕೃಷ್ಣಮೂರ್ತಿ ಆಚಾರ್ಯ, ಮಾಜಿ ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ ಭಾಗವಹಿಸಿದ ಸ್ಪರ್ಧಾಳುಗಳಿಗೆ ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ಉಡುಪಿ ಬ್ಲಾಕ್‌ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಶೆಟ್ಟಿ, ವ್ಯಾಯಾಮ ಶಾಲೆಯ ಅಣ್ಣಯ್ಯ ಪಾಲನ್‌, ವಿಎಮ್‌ ಎಫ್‌ ಕ್ರಿಕೆಟರ್ಸ್‌ ಅಧ್ಯಕ್ಷ ಪ್ರಸಾದ್‌ ಪಾಲನ್‌, ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಗಾಯತ್ರಿ, ಪಂಚಾಯತ್‌ ಸದಸ್ಯರಾದ ಶರತ್‌ ಶೆಟ್ಟಿ, ಶಾಲಿನಿ ಆಚಾರ್ಯ, ಅಶೋಕ್‌ ಕೋಟ್ಯಾನ್‌, ಚೇತನ್‌, ದೀಪಕ್‌ ಪ್ರಶಾಂತ್‌ ಸನೀಲ್‌, ದೀಪು ಪ್ರಜ್ವಲ್‌, ರಾಜಶೇಖರ್‌ ಉಪಸ್ಥೀತರಿದ್ದರು.


Spread the love