ಅಜೆಕಾರು: ಕಾರ್ಮಿಕರಿಗೆ ವೇತನ ನೀಡದೆ ಕೂಡಿ ಹಾಕಿ ಕಿರುಕುಳ ನೀಡಿದ ಮಾಲಿಕ – ದೂರು ದಾಖಲು

Spread the love

ಅಜೆಕಾರು: ಕಾರ್ಮಿಕರಿಗೆ ವೇತನ ನೀಡದೆ ಕೂಡಿ ಹಾಕಿ ಕಿರುಕುಳ ನೀಡಿದ ಮಾಲಿಕ – ದೂರು ದಾಖಲು

ಕಾರ್ಕಳ: ಒಡಿಸ್ಸಾ ದ ಕಾರ್ಮಿಕರನ್ನು ಕೂಡಿ ಹಾಕಿ ವೇತನ ಊಟ ನೀಡದೆ ಮ್ಹಾಲಿಕರು ಥಳಿಸಿದ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಡಿಸ್ಸಾ ರಾಜ್ಯದ ಬಬುಲ್ (20) ಎಂಬಾತ ಕಾರ್ಕಳ ಸಾಣೂರಿನ ಮುರತಂಗಡಿಯ ಮಥಾಯಸ್ಫಾರಂ ನಲ್ಲಿ ಸುಮಾರು 2 ವರ್ಷಗಳಿಂದ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ ಸ್ನೇಹಿತ ಧನಪತಿ ಎಂಬವರು ಉಡುಪಿ ತಾಲೂಕಿನ ಕಣಜಾರು ಎಂಬಲ್ಲಿ ಚೆರಿಯನ್ @ ಶನೀಶ್ರವರ ತೋಟದಲ್ಲಿ ಸುಮಾರು 2 ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದು, ಆತನ ಮಾಲಕ ಶನೀಶ್ರವರು ಸರಿಯಾಗಿ ಸಂಬಳ ಹಾಗೂ ವಸತಿ ನೀಡುತ್ತಿರಲಿಲ್ಲ. ಜನವರಿ 31 ರಂದು ಬಬುಲ್ ನ ಕಣಜಾರು ಸ್ನೇಹಿತ ಧನಪತಿ ರವರನ್ನು ವಿಚಾರಿಸಲು ಹೋದಾಗ ಮಾಲಕ ಶನೀಶ್ರವರು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ.

ನಂತರ ಧನಪತಿಯು ಬಬುಲ್ ರವರು ಕೆಲಸ ಮಾಡಿಕೊಂಡಿದ್ದಲ್ಲಿಗೆ ಬಂದು ಕೆಲಸಕ್ಕೆ ಸೇರಿದ್ದು, ಫೆಬ್ರವರಿ 2 ರಂದು ಸಂಜೆ ಶನೀಶ್ರವರು ಆತನ ಸ್ನೇಹಿತ ಸಚ್ಚಿದಾನಂದ ಪ್ರಭು @ ಸಚ್ಚು ಎಂಬವರಲ್ಲಿ ಫೋನು ಮಾಡಿಸಿ ನಮ್ಮನ್ನು ಅಜೆಕಾರು ಪೊಲೀಸ್ ಠಾಣೆಗೆ ಬರುವಂತೆ ತಿಳಿಸಿದ್ದು, ಅದರಂತೆ ಠಾಣೆಗೆ ಬಂದ ನಮ್ಮಲ್ಲಿ ಶನೀಶ್ರವರು ಮಾತನಾಡಿ ಒಳ್ಳೆಯ ಸಂಬಳ ಕೊಡುವುದಾಗಿಯೂ, ಯಾವುದೇ ತೊಂದರೆ ಕೊಡುವುದಿಲ್ಲ ಎಂಬುದಾಗಿ ಪುಸಲಾಯಿಸಿ ಬಬುಲ್ ಮತ್ತು ಶನಿಶ್ರವರು ಅವರ ಕಾರಿನಲ್ಲಿ ಸಂಜೆ 6:00 ಗಂಟೆ ಸುಮಾರಿಗೆ ಅಜೆಕಾರಿನ ಬಸ್ತಿರೋಡ್ ಪಕ್ಕದಲ್ಲಿದ್ದ ತನ್ನ ಮನೆಯ ಪಕ್ಕ ಕೆಲಸದವರು ವಾಸಮಾಡುವ ರೂಮಿಗೆ ನಮ್ಮಿಬ್ಬರನ್ನು ಶನೀಶ್, ಸಾಬು ಹಾಗೂ ಸಂದೀಪ್ರವರು ಸೇರಿ ಕರೆದುಕೊಂಡು ಹೋಗಿ ರೂಮಿನಲ್ಲಿ ಕೂಡಿ ಹಾಕಿ, ಕೈಯಿಂದ ತಲೆಗೆ, ಬೆನ್ನಿಗೆ, ಹೊಟ್ಟೆಗೆ ಹೊಡೆದುದ್ದಲ್ಲದೇ ಕಾಲಿನಿಂದ ಸೊಂಟಕ್ಕೆ ಎದೆಗೆ ತುಳಿದು ನಮ್ಮಿಬ್ಬರ ಕೈಯ್ಯಲ್ಲಿದ್ದ ಮೊಬೈಲ್ಸೆಟ್ಗಳನ್ನು ಹಾಗೂ ನಮ್ಮ ಬಳಿಯಿದ್ದ ರೂಪಾಯಿ. 1,600/- ನ್ನು ತೆಗೆದುಕೊಂಡು ಅವಾಚ್ಯ ಶಬ್ದಗಳಿಂದ ಬೈದು ನಿಮ್ಮನ್ನು ಕೊಂದು ಹಾಕುವುದಾಗಿ ಜೀವಬೆದರಿಕೆ ಹಾಕಿ ರೂಮಿನಲ್ಲಿ ಕೂಡಿ ಹಾಕಿ ಹೋಗಿರುತ್ತಾರೆ.

ನಂತರ ಬಬುಲ್ ಮತ್ತು ಧನಪತಿ ಅಲ್ಲಿಂದ ತಪ್ಪಿಸಿಕೊಂಡು ಹೋಗಿ ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ವಿದ್ಯಾಭ್ಯಾಸ ಹಾಗೂ ಭಾಷೆಯ ತೊಂದರೆಯಿಂದ ಹಾಗೂ ಜನರ ಪರಿಚಯ ಇಲ್ಲದ ಕಾರಣ ಠಾಣೆಗೆ ದೂರು ನೀಡಲು ತಡವಾಗಿದೆ ಎಂದು ಬಬುಲ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.


Spread the love