ಅಜೆಕಾರು: ಕೆಲಸಗಾರರಿಂದ ಸಂಸ್ಕರಿತ ಗೇರು ಬೀಜ ಕಳವು ಆರೋಪ – ದೂರು ದಾಖಲು

Spread the love

ಅಜೆಕಾರು: ಕೆಲಸಗಾರರಿಂದ ಸಂಸ್ಕರಿತ ಗೇರು ಬೀಜ ಕಳವು ಆರೋಪ – ದೂರು ದಾಖಲು

ಕಾರ್ಕಳ: ಲಾರಿಗೆ ಲೋಡ್ ಮಾಡುವಾಗ ಗೇರು ಬೀಜವನ್ನು ಕಳವುಗೈದಿರುವ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.

ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಸೌತ್ ಇಂಡಿಯಾ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ಗೇರು ಬೀಜವನ್ನು ಸಂಸ್ಕರಿಸಿ ಮಾರಾಟ ಮಾಡಲಾಗುತ್ತಿದ್ದು, ಫ್ಯಾಕ್ಟರಿಯ ಮ್ಯಾನೇಜ್ ಪ್ರವೀಣ್ ಆಳ್ವಾರವರು ಅಕ್ಟೋಬರ್ 13ರಂದು ಸಂಜೆ ಫ್ಯಾಕ್ಟರಿ ಕೆಲಸ ಮುಗಿಸಿ ಬೀಗ ಹಾಕಿ ಬೀಗದ ಕೀಯನ್ನು ಫ್ಯಾಕ್ಟರಿ ಕೆಲಸದ ದುದುವಾ ಎಂಬವರಲ್ಲಿ ನೀಡಿ ತಮ್ಮ ಮನೆಗೆ ಹೋಗಿದ್ದು, ಮರುದಿನ ದುದುವಾನ ಜೊತೆ ಬಂದು ಫ್ಯಾಕ್ಟರಿಯ ಬೀಗ ತೆರೆದು ಕೆಲಸ ಆರಂಭಿಸಿದ್ದು, ಬೆಳಿಗ್ಗೆ ಹಿಂದಿನ ದಿನ ತೂಕ ಮಾಡಿ ಫ್ಲಾಸ್ಟಿಕ್ ಕ್ರೇಟ್ ನಲ್ಲಿ ಇಟ್ಟಿದ್ದ ಸಂಸ್ಕರಿಸಿದ ಗೇರುಬೀಜವನ್ನು ಲಾರಿಗೆ ಲೋಡ್ ಮಾಡುತ್ತಿರುವಾಗ ಅದರಲ್ಲಿ ಸುಮಾರು 125 ಕೆ.ಜಿ ತೂಕದಷ್ಟು ಸಂಸ್ಕರಿಸಿದ ಗೇರುಬೀಜವು ಕಳವಾಗಿದ್ದು ಅದರ ಅಂದಾಜು ಮೌಲ್ಯ ರೂ. 75,000/- ಆಗಿದ್ದು ಇದನ್ನು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ಅಜೆಕಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Spread the love