ಅಜೆಕಾರು : ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು

Spread the love

ಅಜೆಕಾರು : ನೇಣು ಬಿಗಿದು ಯುವಕ ಆತ್ಮಹತ್ಯೆಗೆ ಶರಣು

ಕಾರ್ಕಳ: ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಜ್ಯೋತಿ ಹೈಸ್ಕೂಲ್ ಸಮೀಪದ ದೊಡ್ಡಪಲ್ಕೆ ಕ್ರಾಸ್ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಬಾಗಲಕೋಟೆ ಮೂಲದ ನಿವಾಸಿ ಮೃತ್ಯುಂಜಯ (28) ಎಂದು ಗುರುತಿಸಲಾಗಿದೆ.

ಮೃತ ಮೃತ್ಯುಂಜಯನು ಅಜೆಕಾರಿನ ಸುನೀಲ್ ರವರ ಕೃಷಿ ಯಂತ್ರ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮರ್ಣೆ ಗ್ರಾಮದ ದೊಡ್ಡಪಲ್ಕೆಯ ರವರ ಬಾಡಿಗೆ ಮನೆಯಲ್ಲಿ ಒಬ್ಬನೆ ವಾಸವಾಗಿದ್ದನು. ಮೃತನು ಮೂಲತಃ ಬಾಗಲಕೊಟೆ ಜಿಲ್ಲೆಯವನಾಗಿದ್ದು, ತಂದೆ ಉಡುಪಿ ಜಿಲ್ಲೆಯಲ್ಲಿ ಪಿ.ಡಿ.ಓ ಆಗಿ ಕೆಲಸ ಮಾಡಿಕೊಂಡಿದ್ದ ಕಾರಣ ಮೃತ್ಯಂಜಯನು ಇಲ್ಲಿನ ಪರಿಸರಕ್ಕೆ ಹೊಂದಿಕೊಂಡಿದ್ದು, ತಂದೆ ನಿವೃತ್ತಿ ಬಳಿಕ ಸ್ವಂತ ಊರಿಗೆ ಹೋದರು ಸಹ ಮೃತ್ಯುಂಜಯನು ಅಜೆಕಾರಿನಲ್ಲಿಯೆ ಇದ್ದನು. ಅವನಿಗೆ ಬೈಕ್ ನ ವ್ಯಾಮೋಗ ಹೆಚ್ಚಾಗಿದ್ದ ಕಾರಣ ಸುಮಾರು 8 ತಿಂಗಳ ಹಿಂದೆ ಬೈಕ್ X Pulse ಬೈಕ್ ನ್ನು ಲೋನ್ ಮೂಲಕ ತೆಗದುಕೊಂಡಿದ್ದು, 1 ತಿಂಗಳ ಹಿಂದೆ ತಾನು ಮಾಡುತ್ತಿದ್ದ ಕೆಲಸವನ್ನು ಬಿಟ್ಟ ಕಾರಣ ಬೈಕ್ ಲೋನ್ ಕಟ್ಟಲು ಕಷ್ಟವಾಗಿ 10 ದಿನದ ಹಿಂದೆ ಬೈಕ್ ನ್ನು ಮಾರಾಟ ಮಾಡಿದ್ದ ಎನ್ನಲಾಗಿದೆ.

ಜನವರಿ 28 ರಂದು ತನ್ನ ವಾಟ್ಸಾಪ್‌ ಮೂಲಕ ತನ್ನ ಗೆಳೆಯನಿಗೆ ಮೆಸ್ಸೇಜ್‌ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದ, ಗೆಳೆಯ ಮೆಸ್ಸೆಜ್‌ ನೋಡಿ ಮೃತ್ಯುಂಜಯನಿಗೆ ಕರೆ ಮಾಡಿದ್ದು ಕರೆ ಸ್ವೀಕರಿಸದೇ ಇದ್ದಾಗ ಸ್ಥಳಕ್ಕೆ ಹೋಗಿ ನೋಡಿದಾಗ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.


Spread the love