
ಅಜೆಕಾರು: ಮನೆಯ ಬೀಗ ಮುರಿದು ಸುಮಾರು ರೂ 8.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು
ಕಾರ್ಕಳ: ಮನೆಯ ಬೀಗ ಮುರಿದು ಸುಮಾರು ರೂ 8.75 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ ಘಟನೆ ಕಾರ್ಕಳ ತಾಲೂಕಿನ ಅಜೆಕಾರು ಪೊಲೀಸ್ ಠಾಣಾ ವ್ಯಾಪ್ತಿಯ ಶಿರ್ಲಾಲಿನಲ್ಲಿ ನಡೆದಿದೆ.
ಶಿರ್ಲಾಲು ನಿವಾಸಿ ಚೆನ್ನಪ್ಪ (45) ಎಂಬವರು ಜೂನ್ 24 ರಂದು ಮನೆಗೆ ಬೀಗ ಹಾಕಿ ತನ್ನ ಹೆಂಡತಿಯೊಂದಿಗೆ ಮಾಳದಲ್ಲಿರುವ ಹೆಂಡತಿಯ ಮನೆಗೆ ಹೋಗಿದ್ದು ಜೂನ್ 25 ರಂದು ವಾಪಾಸಾಗಿದ್ದು ಈ ವೇಳೆ ಯಾರೋ ಕಳ್ಳರು ಮನೆ ಎದುರಿನ ಬಾಗಿಲಿನ ಚಿಲಕದ ಕೊಂಡಿಯನ್ನು ತುಂಡು ಮಾಡಿ ಮನೆಯ ಒಳಗೆ ಪ್ರವೇಶಿಸಿ ಮನೆಯ ಒಳಗಿನ ಕೋಣೆಯ ಬಾಗಿಲಿನ ಬೀಗವನ್ನು ಮುರಿದು ಒಳಗೆ ಹೋಗಿ ಕೋಣೆಯಲ್ಲಿದ್ದ ಕವಾಟಿನ ಬಾಗಿಲು ಮುರಿದು ವಸ್ತುಗಳನ್ನು ಜಾಲಾಡಿ ಕರಿಮಣಿ ಸರ, ಹವಳದ ಚೈನ್, ಉಂಗುರ, ಬ್ರಾಸ್ ಲೆಟ್, ಚೈನು, ಕಿವಿಯೋಲೆ, ಉಂಗುರ ಸೇರಿದಂತೆ ಸುಮಾರು 200 ಗ್ರಾಂ ಚಿನ್ನದ ಮೌಲ್ಯ 8,00,000/- ರೂಪಾಯಿ ಹಾಗೂ ನಗದು 75,000/- ಹಣ ಸೇರಿ ಒಟ್ಟು ಮೌಲ್ಯ 8,75,000/- ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.