ಅಜೆಕಾರು : ಮನೆ ಬೀಗ ಮುರಿದು ರೂ 1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Spread the love

ಅಜೆಕಾರು : ಮನೆ ಬೀಗ ಮುರಿದು ರೂ 1.30 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

ಕಾರ್ಕಳ: ತಾಲೂಕಿನ ಮರ್ಣೆ ಗ್ರಾಮದಲ್ಲಿ ಮನೆಯೊಂದ ಬೀಗ ಮುರಿದ ಕಳ್ಳರು ರೂ 1.30 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾದ ಘಟನೆ ನಡೆದಿದೆ.

ಮರ್ಣೆ ಗುಡ್ಡೆಯಂಗಡಿ ನಿವಾಸಿ ಸುಧಾಕರ ಮಡಿವಾಳ ಅವರು ಫೆ 1 ರಂದು ಕಾರ್ಕಳದ ಪತ್ನಿಯ ಮನೆಗೆ ಕುಟುಂಬ ಸಮೇತರಾಗಿ ತೆರಳಿದ್ದು, ಫೆ 4 ರಂದು ಮನೆಗೆ ವಾಪಾಸು ಬಂದ ಸಮಯದಲ್ಲಿ ಮನೆಯ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.

ಕಳ್ಳರು ಮಲಗುವ ಕೋಣೆಯ ಮಲಗುವ ಮಂಚದ ಕೆಳಗೆ ಪ್ಲಾಸ್ಟಿಕ್ ಟಬ್ನಲ್ಲಿ ಬಟ್ಟೆಯ ಮಧ್ಯದಲ್ಲಿ ಇರಿಸಿದ್ದ 3.5 ಪವನ್ ಚಿನ್ನದ ನೆಕ್ಲೇಸ್ ಹಾಗೂ 1 ಪವನ್ ಚಿನ್ನದ ಕರಿಮಣಿ ಸರ ವನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ 3.5 ಪವನ್ ಚಿನ್ನದ ನೆಕ್ಲೇಸ್ ಕರಿಮಣಿ ಸರದ ಒಟ್ಟು ಮೌಲ್ಯ ಒಟ್ಟು ರೂ 1,30,000 /- ಆಗಿದ್ದು ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸುಧಾಕರ ಮಡಿವಾಳ ಅವರು ನೀಡಿದ ದೂರಿನಂತೆ ಅಜೆಕಾರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love